ಪಾಕಿಸ್ತಾನ ಸರಣಿಯ ಬಳಿಕ ಜಿಂಬಾಬ್ವೆಯ ಎಲ್ಟನ್ ಚಿಗುಂಬುರಾ ನಿವೃತ್ತಿ

ರಾವಲ್ಪಿಂಡಿ: ಸದ್ಯ ನಡೆಯುತ್ತಿರುವ ಪಾಕಿಸ್ತಾನ-ಜಿಂಬಾಬ್ವೆ ಟಿ20ಐ ಸರಣಿಯ ಬಳಿಕ ಜಿಂಬಾಬ್ವೆ ಮಾಜಿ ನಾಯಕ ಎಲ್ಟನ್ ಚಿಗುಂಬುರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡಲಿದ್ದಾರೆ. ಜಿಂಬಾಬ್ವೆ ಕ್ರಿಕೆಟ್ ಬೋರ್ಡ್ ಶನಿವಾರ (ನವೆಂಬರ್ 7) ಈ ವಿಚಾರವನ್ನು ತಿಳಿಸಿದೆ.
2004ರಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಆಲ್ ರೌಂಡರ್ ಎಲ್ಟನ್ ಚಿಗುಂಬುರಾ ಅವರು ಇನ್ನು ಕೆಲವೇ ದಿನಗಳಲ್ಲಿ ತನ್ನ 16 ವರ್ಷಗಳ ವೃತ್ತಿ ಜೀವನಕ್ಕೆ ಅಂತ್ಯ ಹಾಡಲಿದ್ದಾರೆ. 34ರ ಹರೆಯದ ಚಿಗುಂಬುರಾ 14 ಟೆಸ್ಟ್, 213 ಏಕದಿನ ಪಂದ್ಯಗಳು, 54 ಟಿ20ಐ ಪಂದ್ಯಗಳನ್ನು ಆಡಿದ್ದಾರೆ.
2004ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಚಿಗುಂಬುರಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಂದಿನ ಪಂದ್ಯದಲ್ಲಿ 13 ರನ್ ಗಳಿಸಿದ್ದರು. ಪಂದ್ಯದಲ್ಲಿ ಶ್ರೀಲಂಕಾ, ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ 12 ರನ್ ಗೆಲುವನ್ನಾಚರಿಸಿತ್ತು.
ಚಿಗುಂಬುರಾ ನಿವೃತ್ತಿಯ ಬಗ್ಗೆ ಟ್ವೀಟ್ ಮಾಡಿರುವ ಜಿಂಬಾಬ್ವೆ ಕ್ರಿಕೆಟ್, 'ಸದ್ಯದ ಪಾಕಿಸ್ತಾನ ಪ್ರವಾಸ ಸರಣಿಯ ಬಳಿಕ ಜಿಂಬಾಬ್ವೆ ಮಾಜಿ ನಾಯಕ, ಆಲ್ ರೌಂಡರ್ ಎಲ್ಟನ್ ಚಿಗುಂಬುರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ,' ಎಂದು ಬರೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications