Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೆಸ್ಲಿ ಮಾಧೆವೆರೆ ಸ್ಫೋಟಕ ಅರ್ಧ ಶತಕ, ಬಾಂಗ್ಲಾ ಮಣಿಸಿದ ಜಿಂಬಾಬ್ವೆ

Zimbabwe vs Bangladesh: Zimbabwe beat Bangladesh by 23 runs

ಹರಾರೆ: ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಶುಕ್ರವಾರ (ಜುಲೈ 23) ನಡೆದ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ನಡುವಿನ ದ್ವಿತೀಯ ಟಿ20ಐ ಪಂದ್ಯದಲ್ಲಿ ಆತಿಥೇಯ ಜಿಂಬಾಬ್ವೆ 23 ರನ್ ಜಯ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ ವೆಸ್ಲಿ ಮಾಧೆವೆರೆ ಸ್ಫೋಟಕ ಅರ್ಧ ಶತಕದೊಂದಿಗೆ ಜಿಂಬಾಬ್ವೆ ಪಂದ್ಯ ಗೆದ್ದು ಮೂರು ಪಂದ್ಯಗಳ ಟಿ20ಐ ಸರಣಿಯನ್ನು 1-1ರಿಂದ ಸರಿದೂಗಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆಯಿಂದ ವೆಸ್ಲಿ ಮಾಧೆವೆರೆ 73 (57), ರೆಗಿಸ್ ಚಕಬ್ವಾ 14, ಡಿಯೋನ್ ಮೈಯರ್ಸ್ 26, ರಿಯಾನ್ ಬರ್ಲ್ 34 (19) ರನ್‌ ಸೇರಿಸಿದರು. ಜಿಂಬಾಬ್ವೆ 20 ಓವರ್‌ಗೆ 6 ವಿಕೆಟ್ ಕಳೆದು 166 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಬಾಂಗ್ಲಾದೇಶದಿಂದ ಮೆಹಿದಿ ಹಸನ್ 15, ಶಕೀಬ್ ಅಲ್ ಹಸನ್ 12, ಅಫೀಫ್ ಹೊಸೈನ್ 24, ಶಮೀಮ್ ಹೊಸೈನ್ 29, ಮೊಹಮ್ಮದ್ ಸೈಫುದ್ದೀನ್ 19 ರನ್ ಬಾರಿಸಿದರು. ಬಾಂಗ್ಲಾ 19.5 ಓವರ್ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 143 ರನ್ ಬಾರಿಸಿ ಶರಣಾಯ್ತು.

ಸೂರ್ಯಕುಮಾರ್ ಯಾದವ್ ಅವರ DRS ಶ್ರೀಲಂಕಾ ಆಟಗಾರರಿಗೆ ಅರ್ಥವಾಗಲಿಲ್ಲ | Oneindia Kannada

ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ ಬಾಂಗ್ಲಾದ ಮೆಹಿದಿ ಹಸನ್ 1, ಶರೀಫುಲ್ ಇಸ್ಲಾಮ್ 3, ಶಕೀಬ್ ಅಲ್ ಹಸನ್ 1 ವಿಕೆಟ್ ಪಡೆದರೆ, ಬಾಂಗ್ಲಾ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆಯ ತೆಂಡೈ ಚಟಾರಾ 2, ಬ್ಲೆಸಿಂಗ್ ಮುಝರ್ಬಾನಿ 2, ಲ್ಯೂಕ್ ಜೊಂಗ್ವೆ 3, ವೆಲ್ಲಿಂಗ್ಟನ್ ಮಸಕಾಡ್ಜಾ 3 ವಿಕೆಟ್‌ನಿಂದ ಗಮನ ಸೆಳೆದರು. ಮಾಧೆವೆರೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Friday, July 23, 2021, 23:15 [IST]
Other articles published on Jul 23, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+