Ind vs Zim 1st T20: ಜಿಂಬಾಬ್ವೆ ಸಂಘಟಿತ ಬೌಲಿಂಗ್ ದಾಳಿಗೆ ಮಂಕಾದ ಯಂಗ್ ಇಂಡಿಯಾ
ಜುಲೈ 6 ಶನಿವಾರ, ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಎದುರು ಜಿಂಬಾಬ್ವೆ ಭರ್ಜರಿ ಗೆಲುವು ಸಾಧಿಸಿದೆ. ಸುಲಭ ಗುರಿ ತಲುಪುವಲ್ಲಿ ಎಡುವಿದ ಶುಭಮನ್ ಗಿಲ್ ನಾಯಕತ್ವದ ಟೀಮ್ ಇಂಡಿಯಾ ಸೋಲು ಅನುಭವಿಸಿದೆ.
ಈ ಗೆಲುವಿನೊಂದಿಗೆ 5 ಟಿ20 ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ 1-0 ಮುನ್ನೆಡೆ ಸಾಧಿಸಿದೆ. ಜಿಂಬಾಬ್ವೆ ನೀಡಿದ 116 ರನ್‌ಗಳನ್ನು ಬೆನ್ನಟ್ಟಿದ ಭಾರತ ತಂಡವು 19.5 ಓವರ್‌ಗಳಲ್ಲಿ ಆಲೌಟ್ ಆಗುವ ಮೂಲಕ ಕೇವಲ 102 ರನ್ ಕಲೆ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಜಿಂಬಾಬ್ವೆ 13 ರನ್‌ಗಳ ಅಮೋಘ ಜಯ ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್ ಗಳಲ್ಲಿ 115 ರನ್ ಗಳಿಸಿತು. 116 ರನ್‌ಗಳ ಗುರಿ ಬೆನ್ನತ್ತಿದ ಭಾರತದ ಪರ ನಾಯಕ ಶುಭಮನ್ ಗಿಲ್ ಗರಿಷ್ಠ 31 ರನ್ ಗಳಿಸಿದರು.
ಭಾರತದ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ತಮ್ಮ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಋತರಾಜ್ ಗಾಯಕ್ವಾಡ್ ಕೂಡ 7 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.
ಇನ್ನುಳಿದಂತೆ ಯಾವೊಬ್ಬ ಬ್ಯಾಟರ್ ಕೂಡ ಟೀಮ್ ಇಂಡಿಯಾ ಗೆಲುವಿಗಾಗಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಲಿಲ್ಲ. ರಿಯಾನ್ ಪರಾಗ್ (2), ರಿಂಕು ಸಿಂಗ್ (0), ಧ್ರುವ್ ಜುರೆಲ್(6), ರವಿ ಬಿಷ್ಣೋಯ್ (6), ಅವೇಶ್ ಖಾನ್ (16), ಮುಖೇಶ್ ಕುಮಾರ್ (0) ಜಿಂಬಾಬ್ವೆ ಬೌಲರ್‌ಗಳನ್ನು ಎದುರಿಸುವಲ್ಲಿ ವಿಫಲವಾದರು.
ನಂತರ ಕೊನೆಯ ಓವರ್ ಗಳಲ್ಲಿ ವಾಷಿಂಗ್ಟನ್ ಸುಂದರ್ (27) ಭಾರತಕ್ಕೆ ಜಯ ತಂದುಕೊಡಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ಒಂದು ತುದಿಯಿಂದ ವಿಕೆಟ್‌ಗಳು ಬೀಳುತ್ತಲೇ ಇದ್ದವು. ಹೀಗಾಗಿ ಭಾರತ ನಿರಾಶಾದಾಯಕ ಸೋಲನ್ನು ಎದುರಿಸಬೇಕಾಯಿತು.
ಜಿಂಬಾಬ್ವೆ ಪರ ಟೆಂಡೈ ಚಟಾರಾ ಮತ್ತು ಸಿಕಂದರ್ ರಜಾ ತಲಾ 3 ವಿಕೆಟ್ ಉರುಳಿಸಿ ಸಂಭ್ರಮಿಸಿದರು. ಬ್ರಿಯಾನ್ ಬೆನೆಟ್, ವೆಲ್ಲಿಂಗ್ಟನ್ ಮಸಕಡ್ಜಾ, ಬ್ಲೆಸ್ಸಿಂಗ್ ಮುಜರಾಬಾನಿ ಮತ್ತು ಲ್ಯೂಕ್ ಜೊಂಗ್ವೆ ತಲಾ ಒಂದೊಂದು ವಿಕೆಟ್ ಪಡೆದರು.
ಭಾರತ vs ಜಿಂಬಾಬ್ವೆ ಪ್ಲೇಯಿಂಗ್-11
ಭಾರತ: ಶುಭಮನ್ ಗಿಲ್(ನಾಯಕ), ಅಭಿಷೇಕ್ ಶರ್ಮಾ, ಋತುರಾಜ್ ಗಾಯಕ್ವಾಡ್, ರಿಯಾನ್ ಪರಾಗ್, ರಿಂಕು ಸಿಂಗ್, ಧ್ರುವ್ ಜುರೆಲ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಮುಖೇಶ್ ಕುಮಾರ್, ಖಲೀಲ್ ಅಹ್ಮದ್.
ಜಿಂಬಾಬ್ವೆ: ವೆಸ್ಲಿ ಮಾಧೆವೆರೆ, ಇನೊಸೆಂಟ್ ಕೈಯಾ, ಬ್ರಿಯಾನ್ ಬೆನೆಟ್, ಸಿಕಂದರ್ ರಜಾ (ನಾಯಕ), ಡಿಯೋನ್ ಮೈಯರ್ಸ್, ಜೊನಾಥನ್ ಕ್ಯಾಂಪ್ಬೆಲ್, ಕ್ಲೈವ್ ಮದಂಡೆ (ವಿಕೆಟ್‌ಕೀಪರ್), ವೆಲ್ಲಿಂಗ್ಟನ್ ಮಸಕಡ್ಜಾ, ಲ್ಯೂಕ್ ಜೊಂಗ್ವೆ, ಬ್ಲೆಸ್ಸಿಂಗ್ ಮುಜರಾಬಾನಿ, ಟೆಂಡೈ ಚಟಾರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications