ಧೋನಿ ಮಗಳು ಜೀವಾ ಇಲ್ಲೊಬ್ಬರ ಕೆಲಸಕ್ಕೇ ಕಲ್ಲು ಹಾಕ್ತಿದ್ದಾಳಂತೆ!

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಮನೆಯಲ್ಲೇ ಕಾಲ ಕಳೆಯುವಂತಾ ಪರಿಸ್ಥಿತಿಯಿದೆ. ಟೀಮ್ ಇಂಡಿಯಾ ಕ್ರಿಕೆಟಿಗರೂ ಕೂಡ ತಮ್ಮ ಮನೆಯಲ್ಲೇ ಇದ್ದು ಕುಟುಂಬಸ್ಥರ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಧೋನಿ ಕೂಡ ತಮ್ಮ ಪತ್ನಿ ಪುತ್ರಿಯ ಜೊತೆಗೆ ಈ ಸಮಯವನ್ನು ಆನಂದಿಸುತ್ತಿದ್ದಾರೆ.
ಈ ಮಧ್ಯೆ ಧೋನಿ ಪುತ್ರಿ ಜೀವಾ ಹೊಸ ಕೆಲಸಕ್ಕೆ ಕೈ ಹಾಕಿದ್ದಾಳಂತೆ. ಈ ಕೆಲಸದಿಂದ ಧೋನಿಯ ಜೊತೆಗೆ ಕೆಲಸಮಾಡುತ್ತಿದ್ದವರೊಬ್ಬರು ಕೆಲವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರಂತೆ. ಈ ಬಗ್ಗೆ ಆ ವ್ಯಕ್ತಿಯೇ ಇನ್ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.
ಹಾಗಾದರೆ ಧೋನಿ ಪುತ್ರಿ ಮನೆಯಲ್ಲಿ ಏನ್ ಮಾಡ್ತಿದ್ದಾಳೆ. ಕೆಲಸ ಕಳೆದುಕೊಳ್ಲುವ ಭಯ ಯಾರಿಗಿದೆ, ಮುಂದೆ ಓದಿ..

ಜೀವಾ ಹೊಸ ಕೆಲಸ
ಧೋನಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಧೋನಿಯ ಸೌಂದರ್ಯ ಕಾಪಾಡಿಕೊಳ್ಳಲು ಧೋನಿಗೆ ಹೊಸ ಬ್ಯೂಟಿಷಿಯನ್ ಸಿಕ್ಕಿದ್ದಾರೆ. ಧೋನಿ ಮುಖದ ಸೌಂದರ್ಯಕ್ಕಾಗಿ ಹೊಸ ಬ್ಯೂಟಿಷಿಯನ್ ಟ್ರೈನಿಂಗ್ ಆರಂಭಿಸಿದ್ದಾರೆ.

ಆತಂಕದಲ್ಲಿ ಧೋನಿಯ ಮೇಕಪ್ ಆರ್ಟಿಸ್ಟ್
ಧೋನಿಯ ಹೊಸ ಬ್ಯೂಟೀಷಿಯನ್ ಬೇರೆ ಯಾರೂ ಅಲ್ಲ. ಧೋನಿ ಪುತ್ರಿ ಝೀವಾ. ಧೋನಿಗೆ ಮೇಕಪ್ ಮಾಡುತ್ತಿರುವ ವಿಡಿಯೋವನ್ನು ಸ್ವಪ್ನ ಭಾವ್ನಾನಿ ಹಂಚಿಕೊಂಡಿದ್ದಾರೆ. ಜೊತೆಗೆ ತನ್ನ ಆತಂಕವನ್ನು ಈ ಸಂದರ್ಭದಲ್ಲಿ ಭಾವ್ನಾನಿ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
View this post on InstagramA post shared by 𝖆 𝖑𝖎𝖙𝖙𝖑𝖊 𝖜𝖔𝖒𝖆𝖓 (@sapnamotibhavnani) on
ಸದ್ಯದಲ್ಲೇ ಕೆಲಸ ಕಳೆದಿಕೊಳ್ಳಲಿದ್ದೇನೆ
ಜೀವಾ ಧೋನಿಗೆ ಮೇಕ್‌ಅಪ್ ಮಾಡುತ್ತಿರುವ ವಿಡಿಯೋವನ್ನು ಸ್ವಪ್ನ ಭಾವ್ನಾನಿಯೇ ಸ್ವತಃ ಶೇರ್ ಮಾಡಿದ್ದಾರೆ. ಇದರ ಜೊತೆಗೆ ಸದ್ಯದಲ್ಲೇ ನಾನು ನನ್ನ ಕೆಲಸವನ್ನು ಕಳೆದುಕೊಳ್ಳಲಿದ್ದೇನೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಜೊತೆಗೆ ಭಾವ್ನಾನಿ ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗೆ ನಿರಾಸೆ
ಈ ಬಾರಿಯ ಐಪಿಎಲ್ ಮೂಲಕ ಧೋನಿ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಲಿದ್ದರು. ಸುಮಾರು 8 ತಿಂಗಳ ಬಳಿಕ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಐಪಿಎಲ್ ನಡೆಯುವುದು ಅನುಮಾನವೆನಿಸಿದೆ.

ಅಭ್ಯಾಸದಿಂದ ಧೋನಿ ವಾಪಸ್
ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ನಿಟ್ಟಿನಿಲ್ಲಿ ಧೋನಿ, ಮಾರ್ಚ್ ಮೊದಲ ವಾರದಿಂದಲೇ ಅಭ್ಯಾಸವನ್ನು ಆರಂಭಿಸಿದ್ದರು. ಇವರಿಗೆ ಸಿಎಸ್‌ಕೆ ಹಿರಿಯ ಆಟಗಾರರಾದ ಸುರೇಶ್ ರೈನಾ, ಅಂಬಟಿ ರಾಯುಡು ಹಾಗೂ ಮುರಳಿ ವಿಜಯ್ ಮುಂತಾದವರು ಸಾಥ್ ನೀಡಿದರು. ಆದರೆ ಟೂರ್ನಿ ರದ್ದಾದ ಬಳಿಕ ಧೋನಿ ರಾಂಚಿಗೆ ವಾಪಸ್ಸಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications