ಮೆಸ್ಸಿ ಹಾಗೆ ಎಸ್ಕ್ಯೂ ಫ್ರೀ ಕಿಕ್ ಹೊಡೀತಾನೆ ಕೇರಳದ ಈ ಪೋರ: ವೀಡಿಯೋ

ತಿರುವನಂತಪುರಂ, ಮೇ 5: ಕೇರಳದ ಈ 12ರ ಹರೆಯದ ಪೋರ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾನೆ. ಪ್ರೊಫೆಶನಲ್ ಫುಟ್ಬಾಲ್ ಆಟಗಾರರೇ ಬೆರಗುಗೊಳ್ಳುವಂತ ಕೌಶಲಗಳನ್ನು ಪ್ರದರ್ಶಿಸಿರುವ ಈತನ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (ಚಿತ್ರಕೃಪೆ: ಟೈಮ್ಸ್ ಆಫ್ ಇಂಡಿಯಾ).
ಆಲ್ ಕೇರಳ ಸೆವೆನ್ಸ್ ಫುಟ್ಬಾಲ್ ಅಸೋಸಿಯೇಶನ್ ತನ್ನ ಫೆಸ್ಬುಕ್ ಪೇಜ್‌ನಲ್ಲಿ ವೀಡಿಯೋವೊಂದನ್ನು ಹಾಕಿಕೊಂಡಿದೆ. ಇದರಲ್ಲಿ ಗೋಲ್‌ಪೋಸ್ಟ್‌ನ ಅಷ್ಟು ದೂರದಲ್ಲಿ ಕೊಂಚ ಬದಿಗೆ ನಿಂತಿರುವ ಹುಡುಗನೊಬ್ಬ ಮೆಸ್ಸಿ ರೀತಿಯಲ್ಲಿ ಎಸ್ಕ್ಯೂ ಫ್ರೀ ಕಿಕ್ ಮೂಲಕ ಚೆಂಡನ್ನು ಸಣ್ಣ ರಿಂಗ್‌ನೊಳಗಿಂದ ಹಾದುಹೋಗುವಂತೆ ಮಾಡುವ ದೃಶ್ಯವಿದೆ.
ಮಿಶಾಲ್ ಅಬೌಲೈಸ್ ಎನ್ನುವ 12ರ ಹರೆಯದ ಈ ಬಾಲಕ ಕಟುಮುಂಡ ಗೌರ್ನಮೆಂಟ್ ಯುಪಿ ಶಾಲೆಯಲ್ಲಿ ಏಳನೇ ತರಗತಿ ಕಲಿಯುತ್ತಿದ್ದಾನೆ. ತನ್ನ ಸಹೋದರ ವಾಜಿದ್ ಪ್ರೇರಣೆಯಿಂದ ಕ್ರೀಡೆಯತ್ತ ಆಸಕ್ತಿ ತಳೆದಿರುವ ಮಿಶಾಲ್ ಫುಟ್ಬಾಲ್‌ನ ಅದ್ಭುತ ಕೌಶಲಗಳನ್ನು ಪ್ರದರ್ಶಿಸುತ್ತಾನೆ.
ಶೇರ್ ಮಾಡಲಾಗಿರುವ ವೀಡಿಯೋದಲ್ಲಿ ಮೆಸ್ಸಿ ಟಿ ಶರ್ಟ್ ಧರಿಸಿರುವ ಮಿಶಾಲ್, ಮೆಸ್ಸಿ ಸ್ಟೈಲಲ್ಲೇ ಫ್ರೀ ಕಿಕ್ ಹೊಡೆದು ಬೆರಗು ಮೂಡಿಸಿದ್ದಾನೆ. ಅಂದ್ಹಾಗೆ, ಅರ್ಜೆಂಟೀನಾ ಮತ್ತು ಬಾರ್ಸಿಲೋನಾ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ತನ್ನ ವೃತ್ತಿ ಜೀವನದಲ್ಲಿ ಬಾರಿಸಿರುವ 697 ಗೋಲ್‌ಗಳಲ್ಲಿ 52 ಗೋಲ್‌ಗಳು ದಾಖಲಾಗಿದ್ದು ಫ್ರೀ ಕಿಕ್ ಮೂಲಕವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications