Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಂಪ್ಯೂಟರ್ ಭವಿಷ್ಯ: ಮಾಜಿ ಚಾಂಪಿಯನ್ ಬ್ರೆಜಿಲ್ ಗೆ ಕಪ್

AI from Goldman Sachs says Brazil to win FIFA World Cup 2018

ಬೆಂಗಳೂರು, ಜೂನ್ 13: ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ 2018 ಟೂರ್ನಮೆಂಟ್ ಯಾರು ಗೆಲ್ಲಲಿದ್ದಾರೆ ಎಂಬ ಪ್ರಶ್ನೆಗೆ ವಿವಿಧ ರೀತಿಯಲ್ಲಿ ಭವಿಷ್ಯವಾಣಿಗಳು ಬರುತ್ತಿವೆ. ಪ್ರಾಣಿ, ಪಕ್ಷಿಗಳ ನಂತರ ಕಂಪ್ಯೂಟರ್ ಭವಿಷ್ಯ ಈಗ ಸದ್ದು ಮಾಡುತ್ತಿದೆ.

ಜಾಗತಿಕ ಬಂಡವಾಳ ಹೂಡಿಕೆ ನಿರ್ವಹಣಾ ಕಂಪೆನಿ ಗೋಲ್ಡ್ ಮ್ಯಾನ್ ಸ್ಯಾಕ್ಸ್ ಕಂಪ್ಯೂಟರ್ ಆಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಕೃತಕ ಬುದ್ಧಿವಂತಿಕೆ) ಮೂಲಕ ಸಮಗ್ರ ಲೆಕ್ಕಾಚಾರ ಹಾಕಿ ನೀಡಿರುವ ಭವಿಷ್ಯ ನಿಜವಾಗಲಿದೆ ಎಂದು ಹೇಳಲಾಗುತ್ತಿದೆ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಆದರೆ, ಈಗಿನ ಟ್ರೆಂಡ್ ಪ್ರಕಾರ, ಬೆಟ್ಟಿಂಗ್ ದಂಧೆಯವರಿಗೂ ಯಾವ ತಂಡದ ಮೇಲೆ ಬೆಟ್ ಕಟ್ಟುವುದು ಎಂಬುದನ್ನು ನಿರ್ಧರಿಸಲು ಆಗುತ್ತಿಲ್ಲ. ಆದರೆ, ಕಂಪ್ಯೂಟರ್ ನ ಎಐ ಮೂಲಕ ನೀಡುವ ಭವಿಷ್ಯ ಹೇಗೆ ನಿಜವಾಗಲು ಸಾಧ್ಯ ಎಂಬ ಮಾತು ಕೇಳಿ ಬಂದಿದೆ.

ಸೆಮಿಫೈನಲ್ ನಲ್ಲಿ ಜರ್ಮನಿ ಹಾಗೂ ಪೋರ್ಚುಗಲ್ ತಲುಪಲಿದೆ. ಜರ್ಮನಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಲಿದೆ.ಅಂತಿಮವಾಗಿ ಸಾಂಬಾ ನಾಡಿನ ಕಲಿಗಳು ಕಪ್ ಎತ್ತಿ ಹಿಡಿಯಲಿದ್ದಾರೆ ಎಂದು ಹೇಳಿದೆ. ನೆಚ್ಚಿನ ತಂಡಗಳಾದ ಸ್ಪೇನ್ ಮತ್ತು ಅರ್ಜೆಂಟಿನಾ ಕ್ವಾರ್ಟರ್ ಫೈನಲ್ ಹಂತ ದಾಟುವುದೇ ಅನುಮಾನ ಎನ್ನಲಾಗಿದೆ.

ಆದರೆ, ಇದೆಲ್ಲವೂ ನೆಚ್ಚಿನ ತಂಡಗಳ ಈ ಹಿಂದಿನ ಅಂಕಿ ಅಂಶಗಳ ಆಧಾರದ ಮೇಲೆ ತೆಗೆದುಕೊಂಡ ನಿರ್ಧಾರವಾಗಿದೆ. ಪುಟ್ಬಾಲ್ ಆಟದಲ್ಲಿ ಅನಿರೀಕ್ಷಿತ ಫಲಿತಾಂಶ ಬರಬಹುದು, ಹೀಗಾಗಿ, ಭವಿಷ್ಯ ಸಂಪೂರ್ಣ ನಂಬಲರ್ಹವಲ್ಲ ಎಂದು ಎಐ ಮೂಲಕ ಪಡೆದ ಫಲಿತಾಂಶ ಹೇಳಿದೆ.

Story first published: Thursday, June 21, 2018, 18:00 [IST]
Other articles published on Jun 21, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+