For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ತಂಡಕ್ಕೆ ಸ್ಫೂರ್ತಿ ತುಂಬಲು ಜ್ಯೋತಿಷಿ ನೇಮಕ ಮಾಡಿದ್ದ ಎಐಎಫ್ಎಫ್ ; ಸುರಿದದ್ದು ಲಕ್ಷ ಲಕ್ಷ

AIFF hired an astrologer to motivate national team for 16 lakh rupees: Team Insider

ಎಐಎಫ್ಎಫ್ ( ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ) ಈ ಬಾರಿಯ ಎ ಎಸ್ ಸಿ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನ ನೀಡಿ ಯಶಸ್ಸು ಸಾಧಿಸಬೇಕು ಎಂಬ ಕಾರಣಕ್ಕೆ ಮಾರ್ಗದರ್ಶನ ನೀಡುವ ಓರ್ವ ವ್ಯಕ್ತಿಯನ್ನು ನೇಮಕ ಮಾಡಿಕೊಂಡಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಇನ್ನು ಭಾರತ ಫುಟ್ ಬಾಲ್ ಸದ್ಯ ನಡೆಯುತ್ತಿರುವ ಎ ಎಫ್ ಸಿ ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಯಶಸ್ವಿಯಾಗಿ ಗೆದ್ದು ಟೂರ್ನಿಯಲ್ಲಿ ಭಾಗವಹಿಸಲು ಅರ್ಹರಾದ 24 ತಂಡಗಳ ಗುಂಪಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಭಾರತ ಫುಟ್ಬಾಲ್ ತಂಡದ ಈ ಗೆಲುವಿನ ಹಿಂದೆಯೇ ತಂಡ ಮಾರ್ಗದರ್ಶಕನಾಗಿ ನೇಮಿಸಿಕೊಂಡಿದ್ದ ವ್ಯಕ್ತಿ ಜ್ಯೋತಿಷ್ಯ ಶಾಸ್ತ್ರದ ಸಂಸ್ಥೆಯ ಕೆಲಸಗಾರನಾಗಿದ್ದ ಎಂಬುದು ತಿಳಿದುಬಂದಿದೆ.

ಈ ಮೂಲಕ ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್ ತಮ್ಮ ತಂಡಕ್ಕೆ ಮಾರ್ಗದರ್ಶನ ನೀಡಲು ಜ್ಯೋತಿಷಿಯನ್ನು ನೇಮಿಸಿಕೊಂಡಿದ್ದ ವಿಷಯ ಸದ್ಯ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಕೆಲ ಫುಟ್ಬಾಲ್ ಅಭಿಮಾನಿಗಳು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ಈ ರೀತಿಯ ಕೆಲಸಗಳಿಗೆ ಕೈ ಹಾಕಿ ಭಾರತದಲ್ಲಿ ಇರುವ ಅಲ್ಪಸ್ವಲ್ಪ ಫುಟ್ಬಾಲ್ ಪ್ರಿಯರನ್ನು ಸಹ ಕಡಿಮೆ ಮಾಡುವ ಸಾಧ್ಯತೆಗಳಿವೆ ಹಾಗೂ ಫುಟ್ಬಾಲ್ ಪಂದ್ಯಗಳಲ್ಲಿ ಗೆಲುವು ಎಂಬುದು ಆಟಗಾರರ ಪರಿಶ್ರಮದಿಂದಲೇ ಹೊರತು ಯಾವುದೇ ಜ್ಯೋತಿಷಿಯ ಮಾರ್ಗದರ್ಶನದಿಂದಲ್ಲ ಎಂದು ಕಾಮೆಂಟ್ ಮಾಡಿ ಕಿಡಿಕಾರಿದ್ದಾರೆ.

ಈ ಮಾಹಿತಿಯನ್ನು ಭಾರತ ಫುಟ್ಬಾಲ್ ತಂಡದಲ್ಲಿರುವ ಸಿಬ್ಬಂದಿಯೋರ್ವರು ಹಂಚಿಕೊಂಡಿದ್ದು ರಾಷ್ಟ್ರೀಯ ತಂಡದಲ್ಲಿ ಓರ್ವ ಪ್ರೇರಕರನ್ನು ನೇಮಿಸಿಕೊಳ್ಳಲಾಯಿತು, ಆ ವ್ಯಕ್ತಿ ಜ್ಯೋತಿಷ್ಯ ಶಾಸ್ತ್ರದ ಸಂಸ್ಥೆಗೆ ಸೇರಿದವರಾಗಿದ್ದರು ಎಂಬುದು ನಂತರದ ದಿನಗಳಲ್ಲಿ ಬೆಳಕಿಗೆ ಬಂತು ಎಂದು ಹೇಳಿಕೊಂಡಿದ್ದಾರೆ.

ಇನ್ನು ಆಟಗಾರರನ್ನು ಪ್ರೇರೇಪಿಸಲು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ ನೇಮಿಸಿಕೊಂಡಿದ್ದ ವ್ಯಕ್ತಿಗೆ ಬರೋಬ್ಬರಿ 16 ಲಕ್ಷ ರೂಪಾಯಿಗಳನ್ನು ಸಂಭಾವನೆಯಾಗಿ ನೀಡಿದೆ.

Story first published: Thursday, June 23, 2022, 10:10 [IST]
Other articles published on Jun 23, 2022
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+