ಫುಟ್ಬಾಲ್ ಆಟಗಾರ್ತಿಯರ ಮೇಲೆ ಹಲ್ಲೆ ಪ್ರಕರಣ; AIFF ಸದಸ್ಯ ದೀಪಕ್ ಶರ್ಮಾ ಬಂಧನ!
ಗೋವಾದಲ್ಲಿ ಇಬ್ಬರು ಮಹಿಳಾ ಫುಟ್ಬಾಲ್ ಆಟಗಾರ್ತಿಯರಿಗೆ ದೈಹಿಕವಾಗಿ ಹಲ್ಲೆ ಮಾಡಿದ ಆರೋಪದಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್ಎಫ್) ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ಅವರನ್ನು ಮಾರ್ಚ್ 30ರಂದು ಗೋವಾ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶ ಮೂಲದ ಖಾಡ್ ಎಫ್‌ಸಿಯ ಇಬ್ಬರು ಫುಟ್ಬಾಲ್ ಆಟಗಾರ್ತಿಯರು ಗೋವಾದಲ್ಲಿ ನಡೆಯುತ್ತಿರುವ ಇಂಡಿಯನ್ ವುಮೆನ್ಸ್ ಫುಟ್‌ಬಾಲ್ (ಐಡಬ್ಲ್ಯುಎಲ್) ಲೀಗ್ ಎರಡನೇ ಡಿವಿಷನ್‌ನಲ್ಲಿ ಭಾಗವಹಿಸಿದ್ದು, ದೀಪಕ್ ಶರ್ಮಾ ವಿರುದ್ಧ ಆರೋಪಿಸಿದ್ದರು.

ಮಾರ್ಚ್ 28ರ ರಾತ್ರಿ ಖಾಡ್ ಎಫ್‌ಸಿ ಕ್ಲಬ್ ಮಾಲೀಕರೂ ಆದ ದೀಪಕ್ ಶರ್ಮಾ ಅಟಗಾರ್ತಿಯರ ಕೋಣೆಗೆ ನುಗ್ಗಿ ದೈಹಿಕವಾಗಿ ಹಲ್ಲೆ ನಡೆಸಿದ್ದರು. ಆದಾಗ್ಯೂ, ಆಟಗಾರ್ತಿಯರ ತಂಡ ದೀಪಕ್ ಶರ್ಮಾ ಅವರು ನಿರಪರಾಧಿ ಎಂದು ಹೇಳಿದ್ದಾರೆ.
"ಔಪಚಾರಿಕ ದೂರನ್ನು ಸ್ವೀಕರಿಸಿದ ನಂತರ, ಒಂದು ದಿನದಲ್ಲಿ ಎಐಎಫ್‌ಎಫ್ ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಶರ್ಮಾ ಅವರನ್ನು ವಿಚಾರಣೆಗೆ ಕರೆಯಲಾಯಿತು. ಗಾಯವನ್ನುಂಟುಮಾಡುವುದು ಮತ್ತು ಮಹಿಳೆಯರ ಮೇಲೆ ಬಲಪ್ರಯೋಗ ಮಾಡುವುದು ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅವರನ್ನು ಮಾಪುಸಾ ಪೊಲೀಸರು ಬಂಧಿಸಿದ್ದಾರೆ," ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂದೇಶ್ ಚೋಡಂಕರ್ ತಿಳಿಸಿದ್ದಾರೆ.
ರಾತ್ರಿಯವರೆಗೂ ದೀಪಕ್ ಶರ್ಮಾ ಅವರನ್ನು ಕಸ್ಟಡಿಯಲ್ಲಿ ಇರಿಸಲಾಗಿದ್ದು, ಭಾನುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮಾಪುಸಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿತಕಾಂತ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ಸಂತ್ರಸ್ತ ಆಟಗಾರ್ತಿಯರಿಗೆ ಮಾಪುಸಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಸಂಘವು ಸಹಾಯ ಮಾಡಿದೆ ಎಂದು ಜಿಎಫ್‌ಎ ಅಧ್ಯಕ್ಷ ಕೆಟಾನೊ ಫೆರ್ನಾಂಡಿಸ್ ಪಿಟಿಐಗೆ ತಿಳಿಸಿದ್ದಾರೆ.
ದೀಪಕ್ ಶರ್ಮಾ ಅವರು ಹಿಮಾಚಲ ಪ್ರದೇಶ ಫುಟ್‌ಬಾಲ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ. ಇದೇ ವೇಳೆ, ಖಾಡ್ ಎಫ್‌ಸಿ ಉಳಿದ ಮಹಿಳಾ ಆಟಗಾರ್ತಿಯರ ಗುಂಪು ದೀಪಕ್ ಶರ್ಮಾ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿದ್ದಾರೆ
ಇಂಡಿಯನ್ ವುಮೆನ್ಸ್ ಲೀಗ್ (ಐಡಬ್ಲ್ಯುಎಲ್) ನಲ್ಲಿ ಭಾಗವಹಿಸಲು ಖಾಡ್ ಎಫ್‌ಸಿ ತಂಡವು ಗೋವಾಗೆ ಬಂದಿತ್ತು. ಪಣಜಿಯಿಂದ 9 ಕಿಮೀ ದೂರದಲ್ಲಿರುವ ಮಾಪುಸಾ ಪೊಲೀಸರು ದೀಪಕ್ ಶರ್ಮಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದಾಗ, ಮಹಿಳಾ ಆಟಗಾರ್ತಿಯರ ಗುಂಪು ಅಳುವುದು ಮತ್ತು ಮಾಧ್ಯಮಗಳು ವಿಡಿಯೋ ಮಾಡುವುದನ್ನು ನಿಲ್ಲಿಸುವುದು ಕಂಡುಬಂದಿತು.
ದೀಪಕ್ ಶರ್ಮಾ ಅವರು ಕಳೆದ ಹತ್ತು ವರ್ಷಗಳಿಂದ ತಮ್ಮೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆಂದು ಆಟಗಾರ್ತಿಯರ ಗುಂಪು ತಿಳಿಸಿದ್ದು, ಆದರೆ ಅವರು ಅನುಚಿತವಾಗಿ ವರ್ತಿಸುವುದನ್ನು ಎಂದಿಗೂ ನೋಡಲಿಲ್ಲ. ಆದರೆ ಮೊದಲ ಬಾರಿಗೆ ತಂಡದ ಸದಸ್ಯರು ಆರೋಪಗಳನ್ನು ಹೊರಿಸಿದ್ದಾರೆ ಎಂದು ಉಳಿದ ಆಟಗಾರ್ತಿಯರ ಗುಂಪು ಹೇಳಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications