ಫಿಫಾ ಹಣಕಾಸು ಸಮಿತಿಗೆ ಪ್ರಫುಲ್ ಪಟೇಲ್
ನವದೆಹಲಿ, ಜನವರಿ 20: ಭಾರತೀಯ ಫುಟ್ಬಾಲ್ ಸಂಸ್ಥೆಯ (ಎಐಎಫ್ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಅವರು, ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆಯ (ಫಿಫಾ) ಹಣಕಾಸು ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅವರ ಸದಸ್ಯತ್ವವು 2017ರಿಂದ 2021ರವರೆಗೆ ಇರಲಿದೆ.
ಇತ್ತೀಚೆಗಷ್ಟೇ, ಪ್ರಫುಲ್ಲ ಪಟೇಲ್ ಅವರು, ಏಷ್ಯಾ ಫುಟ್ಬಾಲ್ ಸಂಸ್ಥೆಯ (ಎಎಫ್ ಸಿ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಹಿಂದೆ, ಪ್ರಫುಲ್ಲ ಪಟೇಲ್ ಅವರ ಪ್ರಯತ್ನದಿಂದಾಗಿ ಭಾರತದಲ್ಲಿ ಎಎಫ್ ಸಿ 16 ವರ್ಷದೊಳಗಿನವರ ಟೂರ್ನಿಗೆ ಆತಿಥ್ಯ ಸಿಕ್ಕಿತ್ತು. ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಆ ಟೂರ್ನಿಯನ್ನು ಭಾರತ ಯಶಸ್ವಿಯಾಗಿ ಆಯೋಜಿಸಿತ್ತು.
ಅದರ ಜತೆಯಲ್ಲೇ ಫಿಫಾ 17 ವರ್ಷದೊಳಗಿನವರ ಫುಟ್ಬಾಲ್ ಟೂರ್ನಿಯ ಆತಿಥ್ಯವೂ ಭಾರತಕ್ಕೆ ಸಿಗುವಂತೆ ಮಾಡಲು ಪ್ರಫುಲ್ಲ ಪಟೇಲ್ ಸತತ ಪ್ರಯತ್ನ ನಡೆಸಿ ಯಶಸ್ವಿಯಾಗಿದ್ದರು. ಶೀಘ್ರದಲ್ಲೇ ಆ ಟೂರ್ನಿಯೂ ಭಾರತದಲ್ಲಿ ನಡೆಯಲಿದೆ.
Story first published: Wednesday, January 3, 2018, 10:06 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications