Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup 2026: ಅರ್ಜೆಂಟೀನಾಗೆ ಬಾಯಿಗೆ ಬರಿಸಿದ ಕೇಪ್ ವರ್ಡೆ: ಹಾಲಿ ಚಾಂಪಿಯನ್‌ರಿಗೆ ಗೆಲುವಿನ ಉಡುಗೊರೆ

ಫಿಫಾ ವಿಶ್ವಕಪ್‌ನ ಹಾಲಿ ಚಾಂಪಿಯನ್‌ ಅರ್ಜೆಂಟೀನಾ ರೌಂಡ್ ಆಫ್‌ 32ರಲ್ಲಿ ಕಠಿಣ ಸವಾಲನ್ನು ಎದುರಿಸಿತು. ಇದೇ ಮೊದಲ ಬಾರಿಗೆ ಫುಟ್ಬಾಲ್‌ ವಿಶ್ವಕಪ್‌ಗೆ ಅರ್ಹತೆ ಪಡೆದ ಕೇಪ್‌ ವಾರ್ಡೆ, ನಿಜಕ್ಕೂ ಅರ್ಜೆಂಟೀನಾ ತಂಡಕ್ಕೆ ಬಾಯಿಗೆ ಬರಿಸಿ ಬಿಟ್ಟಿತ್ತು. ಪಂದ್ಯದ ಯಾವುದೇ ಹಂತದಲ್ಲೂ ಅರ್ಜೆಂಟೀನಾ ಸುಲಭವಾಗಿ ಗೆಲ್ಲಬಹುದು ಎಂದು ಅನಿಸಲೇ ಇಲ್ಲ. ಪುಟ್ಟ ರಾಷ್ಟ್ರ ಆಡಿದ ಧಾಟಿಗೆ ಇಡೀ ವಿಶ್ವವೇ ಸಲಾಂ ಎಂದಿತು. ಶನಿವಾರ ನಡೆದ ಪಂದ್ಯದಲ್ಲಿ ಅರ್ಜೆಂಟೀನಾ 3-2ರಿಂದ ಕೇಪ್ ವರ್ಡೆಯನ್ನು ಮಣಿಸಿ, ಪ್ರಯಾಸದ ಜಯ ದಾಖಲಿಸಿತು.

ಅರ್ಜೆಂಟೀನಾ ತನಗಿಂತ ಕಡಿಮೆ ಶ್ರೇಯಾಂಕಿತ ದೇಶದ ವಿರುದ್ಧ ಆಡಿದ ಧಾಟಿ ಅಭಿಮಾನಿಗಳಿಗೆ ಕೊಂಚ ನಿರಾಸೆಯನ್ನು ಮೂಡಿಸಿದೆ. ಅರ್ಜೆಂಟೀನಾ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಆದರೆ ಸಿಕ್ಕ ಅವಕಾಶದಲ್ಲಿ ಫಲ ಲಭಿಸಲಿಲ್ಲ. ಆದರೆ ಮೊದಲ ಅರ್ಧದ 29ನೇ ನಿಮಿಷದಲ್ಲಿ ಲಿಯೋನೆಲ್‌ ಮೆಸ್ಸಿ ಅವರು ತಮ್ಮ ಕಾಲ್ಚಳಕದ ಪ್ರದರ್ಶನ ಕೇಪ್ ವರ್ಡೆ ಗೋಲ್‌ ಕೀಪರ್‌ ಅವರಿಗೆ ತೋರಿಸಿದರು.

Argentina Beats Cape Verde

ಮೈದಾನದ ಹಾಫ್‌ ವೇ ಮಾರ್ಕ್‌ನಿಂದ ಸಹ ಆಟಗಾರ ನೀಡಿದ ಪಾಸ್‌ನ್ನು ಗೋಲು ಪೆಟ್ಟಿಗೆ ಎಡಭಾಗದಲ್ಲಿ ನಿಂತು ಹೊಂಚು ಹಾಕುತ್ತಿದ್ದ ಮೆಸ್ಸಿ ಮೊದಲು ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿ, ಬಳಿಕ ತಮ್ಮ ಎಡಗಾಲಿನಿಂದ ಜಸ್ಟ್‌ ಟಚ್‌ ನೀಡಿದರು. ಈ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಹೋಗುವುದನ್ನು ತಡೆಯುವಲ್ಲಿ ಗೋಲ್‌ ಕೀಪರ್ ವಿಫಲರಾದರು. ಅರ್ಜೆಂಟೀನಾ ಪಾಳಯದಲ್ಲಿ ಸಂತಸ ಮನೆ ಮಾಡಿತ್ತು. ಮೊದಲಾರ್ಧದಲ್ಲಿ ಅರ್ಜೆಂಟೀನಾ 1-0 ಮುನ್ನಡೆ ಸಾಧಿಸಿತು.

ಕೆಪ್ ವರ್ಡೆ ಕೆಚ್ಚೆದೆಯ ಆಟ

ಎರಡನೇ ಅರ್ಧದ ಆಟದಲ್ಲಿ ಕೇಪ್‌ ವರ್ಡೆ ಜಿದ್ದಿಜಿದ್ದಿನ ಆಟವನ್ನು ಪ್ರದರ್ಶಿಸಿತು. ಈ ಹಂತದಲ್ಲಿ ಅರ್ಜೆಂಟೀನಾ ರಕ್ಷಣ ಆಟಗಾರರ ನಡೆಯನ್ನು ಅರಿತ, ಕೇಪ್‌ ವರ್ಡೆ ಅಮೋಘ ಪ್ರದರ್ಶನ ನೀಡಿತು. ಈ ಹಂತದಲ್ಲಿ ಡೆರಾಯ್ ಡುವಾರ್ಟೆ ಅವರು ಚೆಂಡನ್ನು ಗೋಲು ಪೋಸ್ಟ್‌ಗೆ ತಳ್ಳಿದರು. ಡೆರಾಯ್ ಡುವಾರ್ಟೆ ಅವರ ಪಾಸ್‌ಗೆ ಉತ್ತರಿಸುವಲ್ಲಿ ಅರ್ಜೆಂಟೀನಾದ ಗೋಲ್ ಕೀಪರ್‌ ಸಂಪೂರ್ಣ ವಿಫಲರಾದರು. ಪರಿಣಾಮ ಕೆಪ್ ವಾರ್ಡೆ 1-1 ಸಮಬಲ ಸಾಧಿಸಿತು.

519 ನಿಮಿಷಗಳ ಕಾಲ ಯಾವುದೇ ಗೋಲು ನೀಡದ ಸ್ಪೇನ್‌ ಗೋಲ್‌ ಕೀಪರ್‌

519 ನಿಮಿಷಗಳ ಕಾಲ ಯಾವುದೇ ಗೋಲು ನೀಡದ ಸ್ಪೇನ್‌ ಗೋಲ್‌ ಕೀಪರ್‌

ನಿಗದಿತ ಸಮಯದಲ್ಲಿ ಉಭಯ ತಂಡಗಳು ತಮ್ಮ ತಮ್ಮ ಗೋಲುಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಪರದಾಟ ನಡೆಸಿದವು. ಈ ವೇಳೆ ಕೆಪ್ ವರ್ಡೆ ಗೋಲ್‌ ಕೀಪರ್ ತೋರಿದ ಕೆಚ್ಚೆದೆಯ ಆಟ ಇಡೀ ವಿಶ್ವದ ಗಮನ ಸೆಳೆಯಿತು. ಪರಿಣಾಮ ಮೊದಲ 90 ನಿಮಿಷದಲ್ಲಿ ಉಭಯ ತಂಡಗಳು 1-1 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿದವು.

ಆದರೆ ಹೆಚ್ಚುವರಿ ಸಮಯದಲ್ಲಿ ಅರ್ಜೆಟೀನಾಗೆ ಆರಂಭದಲ್ಲಿ ಫ್ರಿ ಕಿಕ್ ಅವಕಾಶ ಲಭಿಸಿತು. ಈ ಅವಕಾಶದಲ್ಲಿ ಅರ್ಜೆಂಟೀನಾ ಗೋಲು ಬಾರಿಸುವ ಆಸೆಗೆ ಆರಂಭದಲ್ಲಿ ಕೆಪ್ ವರ್ಡೆ ಆಟಗಾರರು ಪೆಟ್ಟು ನೀಡಿದರು. ಆದರೆ ಗೋಲ್‌ ಪೋಸ್ಟ್‌ನ ಎಡಭಾಗದಲ್ಲಿ ನಿಂತಿದ್ದ ಅರ್ಜೆಂಟೀನಾದ ಡಿಫೆಂಡರ್‌ ಲಿಸಾಂಡ್ರೊ ಮಾರ್ಟಿನೆಜ್ ಸಮಯೋಚಿತ ಆಟವನ್ನು ಪ್ರದರ್ಶಿಸಿ ಅಬ್ಬರಿಸಿದರು. ಪರಿಣಾಮ ಅರ್ಜೆಂಟೀನಾ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು.

ರೋನಾಲ್ಡೊ ಯುಗಾಂತ್ಯ? ಅಂದು ಪೋರ್ಚುಗಲ್‌ ತಂಡಕ್ಕೆ ಶಕ್ತಿಯಾಗಿದ್ದ ಆಟಗಾರ ಇಂದು ಸಮಸ್ಯೆಯೇ?

ರೋನಾಲ್ಡೊ ಯುಗಾಂತ್ಯ? ಅಂದು ಪೋರ್ಚುಗಲ್‌ ತಂಡಕ್ಕೆ ಶಕ್ತಿಯಾಗಿದ್ದ ಆಟಗಾರ ಇಂದು ಸಮಸ್ಯೆಯೇ?

ಹೆಚ್ಚುವರಿ ಸಮಯದ ಹೈ-ಡ್ರಾಮಾ

ಪಂದ್ಯದ 103ನೇ ನಿಮಿಷದಲ್ಲಿ ಕೆಪ್ ವರ್ಡೆ ಸಿಡ್ನಿ ಲೋಪ್ಸ್ ಕ್ಯಾಬ್ರಲ್ ಬಾರಿಸಿದ ಅಮೋಘ ಗೋಲಿನ ನೆರವಿನಿಂದ ಪಂದ್ಯ ಸಮಬಲದಲ್ಲಿ ಸಾಗಿತು. ಆದರೆ ಕೊನೆಯ ಕ್ಷಣದಲ್ಲಿ ಕೆಪ್ ವರ್ಡೆ ಮಾಡಿದ ಆ ಒಂದು ತಪ್ಪು ತಂಡಕ್ಕೆ ಪೆಟ್ಟು ನೀಡಿತು.

111ನೇ ನಿಮಿಷದಲ್ಲಿ ಅರ್ಜೆಂಟೀನಾ ತಂಡಕ್ಕೆ ಕಾರ್ನರ್‌ ಅವಕಾಶ ಲಭಿಸಿತು. ಇದನ್ನು ತಡೆಯಲು ಗೋಲು ಪೆಟ್ಟಿಗೆಯ ಮುಂಭಾಗದಲ್ಲಿ ನಿಂತಿದ್ದ ಕೇಪ್‌ ವರ್ಡೆ ಆಟಗಾರನ ತಲೆಗೆ ಬಡಿದ ಚೆಂಡು ಗೋಲು ಪೆಟ್ಟಿಗೆ ಸೇರಿತು. ಪರಿಣಾಮ ಕೆಪ್ ವರ್ಡೆ, ಅರ್ಜೆಂಟೀನಾಗೆ ಗೋಲಿನ ಉಡುಗೊರೆ ನೀಡಿತು.

Story first published: Saturday, July 4, 2026, 7:37 [IST]
Other articles published on Jul 4, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+