Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾರ್ಸಿಲೋನಾ ತೊರೆಯಲಿದ್ದಾರೆ ಸ್ಟಾರ್ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ

Argentina Star Lionel Messi to leave FC Barcelona

ಮ್ಯಾಡ್ರಿಡ್: ಬಾರ್ಸಿಲೋನಾ ಎಫ್‌ಸಿ ಫುಟ್ಬಾಲ್ ತಂಡದ ಸ್ಟಾರ್ ಸ್ಟ್ರೈಕರ್ ಲಿಯೋನೆಲ್ ಮೆಸ್ಸಿ ತಂಡ ತೊರೆಯಲಿದ್ದಾರೆ. ಬಾರ್ಸಿಲೋನಾ ಜೊತೆಗಿನ ನೂತನ ಒಪ್ಪಂದದ ಬಗೆಗಿನ ಮಾತುಕತೆ ಸರಿಹೋಗದ ಕಾರಣ ಮೆಸ್ಸಿ ಲಾ ಲಿಗಾ ಕ್ಲಬ್ ತೊರೆಯುವುದರಲ್ಲಿದ್ದಾರೆ. ಆರ್ಥಿಕ ಮತ್ತು ರಚನಾತ್ಮಕ ಅಡೆತಡೆಗಳು ಬಾರ್ಸಿಲೋನಾ ಮತ್ತು ಮೆಸ್ಸಿನ ನಡುವಿನ ನೂತನ ಒಪ್ಪಂದಕ್ಕೆ ಅಡ್ಡಿಯಾಗಿವೆ ಎಂದು ತಿಳಿದು ಬಂದಿದೆ.

"ಬಾರ್ಸೊಲೋನಾ ಮತ್ತು ಲಿಯೋನೆಲ್ ಮೆಸ್ಸಿ ಇಬ್ಬರೂ ಪಾರ್ಟಿಗಳು ನೂತನ ಒಪ್ಪಂದಕ್ಕೆ ಸಹಿ ಹಾಕುವ ಉದ್ದೇಶದಿಂದಲೇ ಮಾತುಕತೆ ನಡೆಸಿದರು. ಆದರೆ ಆರ್ಥಿಕ ಮತ್ತು ರಚನಾತ್ಮಕ ಅಡೆತಡೆಗಳಿಂದಾಗಿ ಒಪ್ಪಂದ ನಡೆಯಲಿಲ್ಲ," ಎಂದು ಬಾರ್ಸಿಲೋನಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಒಪ್ಪಂದದ ಮಾತುಕತೆ ಸರಿಹೊಂದದ ಕಾರಣ ಈ ಸಂದರ್ಭದಲ್ಲಿ ಮೆಸ್ಸಿ ಇನ್ನು ಬಾರ್ಸಿಲೋನಾ ಎಫ್‌ಸಿಯಲ್ಲಿ ಉಳಿಯುತ್ತಿಲ್ಲ. ಆಟಗಾರ ಮತ್ತು ಕ್ಲಬ್ ನಡುವಿನ ಒಪ್ಪಂದ ಹೊಂದಲಿಲ್ಲ ಎಂಬ ಬಗ್ಗೆ ಇಬ್ಬರಿಗೂ ವಿಷಾದವಿದೆ," ಎಂದು ಬಾರ್ಸಿಲೋನಾ ತಿಳಿಸಿದೆ.

ಕಳೆದ ಜೂನ್‌ನಲ್ಲೇ ಲಿಯೋನೆಲ್ ಮೆಸ್ಸಿ ಬೇರೆ ಕ್ಲಬ್‌ಗೆ ಹೋಗಲು ಯೋಚಿಸಿದ್ದರು. ಆದರೆ ಬಾರ್ಸಿಲೋನಾ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಈ ಬಾರಿ 34ರ ಹರೆಯದ ಮೆಸ್ಸಿ ಕ್ಲಬ್ ತೊರೆಯಬೇಕಾದ ಸಂದರ್ಭ ಬಂದಿದೆ.

Story first published: Friday, August 6, 2021, 9:49 [IST]
Other articles published on Aug 6, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+