Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅರ್ಜೆಂಟೀನಾದ ಆರಾಧ್ಯ ದೈವ GOAT ಲಿಯೋನೆಲ್ ಮೆಸ್ಸಿ 85 ಅಡಿ ಪ್ರತಿಮೆ

ವಿಶ್ವದಲ್ಲೇ ದೊಡ್ಡ ದೊಡ್ಡ ಮೂರ್ತಿಗಳ ಟ್ರೆಂಡ್‌ ದಿನಕಳೆದಂತೆ ಹೆಚ್ಚಾಗುತ್ತಲೇ ಇದೆ. ವಿಶ್ವದಲೇ ದೊಡ್ಡ ಎಂಬ ಹೆಗ್ಗಳಿಕೆ ನಮ್ಮದಾಗಬೇಕು ಎಂಬ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು, ಆಯಾ ಪ್ರದೇಶದ ಧೀಮಂತ ವ್ಯಕ್ತಿ ಹಾಗೂ ದೇವರ ವಿಗ್ರಹಗಳನ್ನು ದೊಡ್ಡದಾಗಿ ಪ್ರತಿಷ್ಠಾಪಿಸುತ್ತಾರೆ. ಇದಕ್ಕೆ ಕರ್ನಾಟಕ ಸಹ ಹೊರತಾಗಿಲ್ಲ. ಮೊದಲಿನಿಂದಲೂ ಕರ್ನಾಟಕದಲ್ಲಿ ದೊಡ್ಡ ದೊಡ್ಡ ಮೂರ್ತಿಗಳು ಇವೆ. ಮುರುಡೇಶ್ವರದ ಶಿವನ ಪ್ರತಿಮೆ (123 ಅಡಿ), ಬೆಂಗಳೂರಿನ ಕೆಂಪೇಗೌಡರ ಪ್ರತಿಮೆ (108 ಅಡಿ), ಶ್ರವಣಬೆಳಗೊಳದ ಬಾಹುಬಲಿ ಮೂರ್ತಿ (57 ಅಡಿ), ಬಿಜಾಪುರದ ಶಿವಗಿರಿಯಲ್ಲೂ ಶಿವನ 85 ಎತ್ತರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.

ಕ್ರೀಡಾಭಿಮಾನಿಗಳು ಸಹ ತಮ್ಮ ನೆಚ್ಚಿನ ಆಟಗಾರರ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ನಾವು ನೋಡಿದ್ದೇವೆ. ಅದರಂತೆ ಅರ್ಜೆಂಟೀನಾ ತಂಡದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಅವರ ಬೃಹತ್ ಆಕಾರದ ಮೂರ್ತಿ ಪಟಗೋನಿಯಾ ಪ್ರದೇಶದ 'ಕುಟ್ರಾಲ್ ಕೊ' ಎಂಬ ಸಣ್ಣ ಪಟ್ಟಣದಲ್ಲಿ 85 ಅಡಿ ಎತ್ತರದ ಬೃಹತ್‌ ಪ್ರತಿಮೆ ಅನಾವರಣಗೊಳಿಸಲಾಗಿದೆ. ಇದು ಮೆಸ್ಸಿ ಅವರ ಗೌರವಾರ್ಥವಾಗಿ ಜಗತ್ತಿನಲ್ಲೇ ನಿರ್ಮಿಸಲಾದ ಅತಿ ದೊಡ್ಡ ಪ್ರತಿಮೆಯಾಗಿದೆ.

Argentina

ಈ ಪ್ರತಿಮೆ ಅನಾವರಣಗೊಂಡಾಗಿನಿಂದಲೂ ಈ ಪ್ರದೇಶಕ್ಕೆ ಜನರು ಭೇಟಿ ನೀಡುವುದು ಹೆಚ್ಚಾಗಿದೆ. ಈ ಪ್ರತಿಮೆಯನ್ನು ಸ್ಥಳೀಯ 61 ವರ್ಷದ ಕಲಾವಿದ ಆಲ್ಡೊ ಬೆರೋಯಿಸಾ ನಿರ್ಮಿಸಿದ್ದಾರೆ. ಇವರು ಈಗಾಗಲೇ ಅರ್ಜೆಂಟೀನಾದ ಸ್ವತಂತ್ರ್ಯ ಯೋಧರ ದೊಡ್ಡ ದೊಡ್ಡ ಪ್ರತಿಮೆಗಳನ್ನು ಅನಾವರಣಗೊಳಿಸಿ ಹೆಸರು ಮಾಡಿದ್ದಾರೆ. ಆದಾಗ್ಯೂ, ಈ ಶಿಲ್ಪವು ಹೊಸ ರೀತಿಯ ಸಂಚಲನವನ್ನು ಸೃಷ್ಟಿಸಿದೆ. ಈ ಪ್ರತಿಮೆಯು ಮೆಸ್ಸಿ ಒಂದು ಕೈಯಿಂದ ಅರ್ಜೆಂಟೀನಾದ ಜೆರ್ಸಿಯನ್ನು ಹಿಡಿದುಕೊಂಡು, ಗೋಲು ಗಳಿಸಿದಾಗಿನ ಸಂಭ್ರಮಾಚರಣೆಯನ್ನು ತೋರಿಸುತ್ತದೆ.

ಕೋಲ್ಕತ್ತಾದಲ್ಲಿ ನಿರ್ಮಿಸಲಾಗಿತ್ತು ಮೆಸ್ಸಿ ಪ್ರತಿಮೆ

ಅರ್ಜಿಂಟೀನಾದ ಕುಟ್ರಾಲ್ ಕೊನಲ್ಲಿ, ಮೆಸ್ಸಿ ಅತಿದೊಡ್ಡ ಸ್ಮಾರಕವನ್ನು ನೀಡಿ ಗೌರವಿಸಲಾಗಿದೆ. ಸ್ಥಳೀಯ ಕಲಾವಿದರು ಸಾಕರ್ ದಂತಕಥೆಯ 85 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇದು 70 ಟನ್ ಉಕ್ಕನ್ನು ಒಳಗೊಂಡಿದೆ ಎಂದು ತಿಳಿದು ಬಂದಿದೆ. ಹೀಗೆ ಮೆಸ್ಸಿ ಅವರ ಪ್ರತಿಮೆ ಅನಾವರಣ ಗೊಳಿಸುತ್ತಿರುವ ಕಾರ್ಯ ಇದು ಮೊದಲೇನಲ್ಲ. ಇದಕ್ಕೂ ಮೊದಲು ಕೋಲ್ಕತ್ತಾದಲ್ಲಿ ಮೆಸ್ಸಿ ಅವರ 70 ಅಡಿ ಉದ್ದದ ಪ್ರತಿಮೆಯನ್ನು ಅನಾವರಣ ಗೊಳಿಸಲಾಗಿತ್ತು.

ಕೋಲ್ಕತ್ತಾದಲ್ಲಿ ನಿರ್ಮಿಸಿದ್ದ ಫುಟ್ಬಾಲ್ ಆಟಗಾರನ ಪ್ರತಿಮೆ ಅತ್ಯಂತ ದೊಡ್ಡದು ಎಂದು ವರದಿಯಾಗಿತ್ತು. ಆದರೆ ಇದರ ಗಾತ್ರದ ಕಾರಣದಿಂದ ಇದನ್ನು ತೆಗೆದು ಹಾಕಲಾಯಿತು ಎಂದು ತಿಳಿದು ಬಂದಿದೆ. ಅಧಿಕಾರಿಗಳು ಆ ಪ್ರತಿಮೆಯನ್ನು ಸುರಕ್ಷಿತವಾಗಿ ಬೇರೆಡೆ ಮರುಸ್ಥಾಪಿಸಲು ಪರ್ಯಾಯ ಸ್ಥಳಗಳನ್ನು ಹುಡುಕುತ್ತಿದ್ದಾರೆ ಎಂದು ವರದಿಯಾಗಿದೆ.

Argentina

23ನೇ ಆವೃತ್ತಿಯ ಫಿಫಾ ವಿಶ್ವಕಪ್‌ನಲ್ಲಿ 39 ವರ್ಷದ ಲಿಯೋನೆಲ್ ಮೆಸ್ಸಿ ಬುಧವಾರ ನಡೆದ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇವರು ಇತ್ತೀಚಿಗೆ ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರಿಯಾ ವಿರುದ್ಧ ಜರ್ಮನಿಯ ಮಿರಾಸ್ಲಾವ್ ಕ್ಲೋಸ್‌ ಅವರ ಗರಿಷ್ಠ ಗೋಲು ಬಾರಿಸಿದ ದಾಖಲೆಯನ್ನು ಅಳಿಸಿ ಹಾಕಿದರು.

Story first published: Thursday, June 25, 2026, 17:29 [IST]
Other articles published on Jun 25, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+