For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಏನೇ ಆದರೂ ಚೀನಾವನ್ನು ಮಣಿಸಲೇಬೇಕು: ಪಣತೊಟ್ಟ ಭಾರತದ ಫುಟ್ಬಾಲ್ ಕೋಚ್

ಭಾರತ ಫುಟ್ಬಾಲ್ ತಂಡದ ಇತ್ತೀಚಿನ ಪ್ರದರ್ಶನ ವಿಶೇಷ ಭರವಸೆ ಮೂಡಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಮಹತ್ವದ ಸಾಧನೆ ಮಾಡಿದೆ. ಹಾಗಾಗಿ ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿಯೂ ಭಾರತದ ಪ್ರದರ್ಶನದ ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಭಾರತ ತಂಡದ ಮುಖ್ಯ ಕೋಚ್ ಐಗೊರ್ ಸ್ಟಿಮ್ಯಾಕ್ ಟೂರ್ನಿಯ ಮೊದಲ ಸೆಣೆಸಾಟದ ಮೇಲೆ ಸಂಪೂರ್ಣ ಚಿತ್ತ ನೆಟ್ಟಿದ್ದಾರೆ.

ಮೊದಲ ಪಂದ್ಯದಲ್ಲಿ ಭಾರತ ಚೀನಾವನ್ನು ಎದುರಿಸಲಿದ್ದು ಯಾವುದೇ ಕಾರಣಕ್ಕೂ ಚೀನಾ ವಿರುದ್ಧ ಭಾರತ ಗೆಲ್ಲಲೇ ಬೇಕು ಎಂದು ಪಣತೊಟ್ಟಿದ್ದಾರೆ. ಈ ಮೂಲಕ ಭಾರತ ಗೆಲುವಿನ ಮೂಲಕ ಅಭಿಯಾನ ಆರಂಭಿಸುವತ್ತ ಚಿತ್ತ ನೆಟ್ಟಿದ್ದಾರೆ.

Asian Games: Have to defeat China at any cost said India football coach Igor Stimac

ಏಷ್ಯನ್ ಗೇಮ್ಸ್ ಟೂರ್ನಿಯಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಅಂಡರ್ 23 ಮಾದರಿಯಲ್ಲಿ ಆಡಲಾಗುತ್ತದೆ. ಆದರೆ ಭಾರತ ಕಳೆದ ಎರಡು ವರ್ಷಗಳಲ್ಲಿ ತನ್ನ ಅಂಡರ್-23 ತಂಡದೊಂದಿಗೆ ಒಂದೇ ಒಂದು ಪಂದ್ಯವನ್ನು ಆಡಿಲ್ಲ ಎಂಬುದು ಗಮನಾರ್ಹ. ಹಾಗಿದ್ದರೂ ಕೋಚ್ ಐಗೊರ್ ಸ್ಟಿಮ್ಯಾಕ್ ಪಟ್ಟು ಹಿಡಿದ ಕಾರಣ ಭಾರತ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ. ಕ್ರೀಡಾಸಚಿವಾಲಯ ಈ ಬಗ್ಗೆ ಇದ್ದ ಕೆಲ ನಿಯಮಗಳನ್ನು ಬದಲಾವಣೆ ಮಾಡಿಕೊಂಡ ಕಾರಣ ಭಾರತದ ಫುಟ್ಬಾಲ್ ತಂಡ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದೆ.

ಭಾರತವು ಬಲಿಷ್ಠ ತಂಡವನ್ನು ಹೊಂದಿದ್ದರೂ, ತಯಾರಿಯ ಸಮಯದ ಕೊರತೆ ಮತ್ತು ಇತರ ತಂಡಗಳ ಬಗ್ಗೆ ಲಭ್ಯವಿರುವ ಸೀಮಿತ ಮಾಹಿತಿಯು ಫಲಿತಾಂಶವನ್ನು ಊಹಿಸಲು ಕಷ್ಟಕರವಾಗಿದೆ ಎಂದು ಸ್ಟಿಮ್ಯಾಕ್ ಹೇಳಿದರು. ಭಾರತವು ಚೀನಾ, ಬಾಂಗ್ಲಾದೇಶ ಮತ್ತು ಹಾಂಗ್‌ಕಾಂಗ್ ಜೊತೆಗೆ ಏಷ್ಯನ್ ಗೇಮ್ಸ್‌ನ ಎ ಗುಂಪಿನಲ್ಲಿದೆ. ಗುಂಪಿನಲ್ಲಿ ಅಗ್ರಸ್ಥಾನಕ್ಕೇರಲು ಚೀನಾ ನೆಚ್ಚಿನ ತಂಡವಾಗಿದೆ. ಆದರೆ ಭಾರತವು ಎರಡನೇ ಸ್ಥಾನ ಪಡೆದು ನಾಕೌಟ್ ಹಂತಕ್ಕೆ ಮುನ್ನಡೆಯುವ ಭರವಸೆಯಲ್ಲಿದೆ.

ಚೀನಾ ವಿರುದ್ಧದ ಭಾರತದ ಆರಂಭಿಕ ಪಂದ್ಯ ನಿರ್ಣಾಯಕವಾಗಿರುತ್ತದೆ ಎಂದಿರುವ ಕೋಚ್ ಆ ಪಂದ್ಯವನ್ನು ಗೆಲ್ಲಲು ತಂಡವು ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ. ಚೀನಾ ವಿರುದ್ಧದ ಪಂದ್ಯದ ಬಳಿಕ ಕೇವಲ 48 ಗಂಟೆಗಳ ನಂತರ ಭಾರತದ ಮುಂದಿನ ಪಂದ್ಯ ಬಾಂಗ್ಲಾದೇಶದ ವಿರುದ್ಧ ಆಡಲಿದೆ. ಭಾರತ ತಂಡಕ್ಕೆ ಇದು ಕಠಿಣವಾದ ಸವಾಲಾಗಿದ್ದು ಅವರು ಇಂಥಾ ಸವಾಲಿಗೆ ಸಿದ್ಧರಾಗಿರಬೇಕು ಎಂದು ಸ್ಟಿಮ್ಯಾಕ್ ಹೇಳಿದರು.

Story first published: Monday, August 21, 2023, 23:07 [IST]
Other articles published on Aug 21, 2023
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+