ಏಷ್ಯನ್ ಗೇಮ್ಸ್ 2023: ಸೌದಿ ಅರೇಬಿಯಾ ವಿರುದ್ಧ ಸೋತು ನಿರ್ಗಮಿಸಿದ ಭಾರತ ಫುಟ್ಬಾಲ್ ತಂಡ
ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಫುಟ್ಬಾಲ್ ತಂಡದ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಗುರುವಾರ, ಸೆಪ್ಟೆಂಬರ್ 28 ರಂದು ಸೌದಿ ಅರೇಬಿಯಾ ವಿರುದ್ಧ ಸುನಿಲ್ ಛೆಟ್ರಿ ನೇತೃತ್ವದ ಭಾರತ ತಂಡ 2-0 ಅಂತರದ ಸೋಲಿನ ಮೂಲಕ ಏಷ್ಯನ್ ಗೇಮ್ಸ್‌ನಿಂದ ಹೊರಬಿದ್ದಿದೆ. ಇದು ಕಳೆದ 10 ವರ್ಷಗಳಲ್ಲಿ ಭಾರತ ಫುಟ್ಬಾಲ್ ತಂಡದ ಮೊದಲ ರೌಂಡ್ ಆಫ್ 16 ಪಂದ್ಯ ಆಗಿದ್ದು ಈ ಪಂದ್ಯದಲ್ಲಿ ಸೌದಿ ಅರೇಬಿಯಾದ ಬಲಿಷ್ಠ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ.
ಅಲ್ ನಾಸರ್ ಕ್ಲಬ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅವರೊಂದೊಗೆ ಸಹ ಆಟಗಾರನಾಗಿ ಆಡುವ ಮೊಹಮ್ಮದ್ ಮಾರನ್ ಸೌದಿ ಅರೇಬಿಯಾ ಪರವಾಗಿ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಪಂದ್ಯಾವಳಿಯಲ್ಲಿ ತಮ್ಮ ಭರ್ಜರಿ ಮುಂದುವರೆಸಿದ್ದರಿಂದ ಭಾರತದ ವಿರುದ್ಧ 2 ಗೋಲು ಸಿಡಿಸಿ ಭಾರತದ ಸೋಲಿಗೆ ಕಾರಣವಾದರು.

ಪಂದ್ಯದ ಮೊದಲಾರ್ಧದಲ್ಲಿ ಭಾರತವು ರಕ್ಷಣಾತ್ಮಕ ಆಟದಲ್ಲಿ ಯಶಸ್ಸು ಸಾಧಿಸಿತು. ಸೌದಿ ತಂಡವು ಬಾಕ್ಸ್‌ನ ಹೊರಗಿನ ಹೊಡೆತಗಳನ್ನು ಹೊಡೆಯಲು ಒತ್ತಾಯಿಸಿತು. ಭಾರತ ತಂಡದ ಕ್ರಾಸ್‌ಬಾರ್‌ಗೆ ಮಧ್ಯಮ ಶ್ರೇಣಿಯ ಶಾಟ್ ಅಪ್ಪಳಿಸಿದಾಗ ಸೌದಿ ಮೊದಲಾರ್ಧದಲ್ಲಿ ಗೋಲು ಗಳಿಸುವ ಅದ್ಭುತ ಅವಕಾಶ ಹೊಂದಿತ್ತಾದರೂ ಅದನ್ನು ಭಾರತ ತಡೆದಿತ್ತು.
ಇನ್ನು ಪಂದ್ಯದ ದ್ವಿತೀಯಾರ್ಧವು ಭಾರತಕ್ಕೆ ಶೋಚನೀಯವಾಗಿತ್ತು. ಮಾರನ್ ತನ್ನ ಮೊದಲ ಗೋಲನ್ನು ಫ್ರೀ ಹೆಡರ್‌ನಿಂದ ಗಳಿಸಿದರು. ಪಂದ್ಯದ 51 ನೇ ನಿಮಿಷದಲ್ಲಿ ದಾಖಲಾದ ಈ ಗೋಲು ಭಾರತಕ್ಕೆ ಮೊದಲ ಆಘಾತವನ್ನು ನೀಡಿತು. ನಂತರ ಸೌದಿ ಆಕರ್ಷಕ ಎರಡನೇ ಗೋಲನ್ನು ಸಿಡಿಸಿತು. 58 ನೇ ನಿಮಿಷದಲ್ಲಿ ಎರಡನೇ ಗೋಲು ದಾಖಲಾಗಿತ್ತು. ಭಾರತ ತಂಡದ ನಾಯಕ ಸುನಿಲ್ ಛೆಟ್ರಿ ಅವರು ಇಂದು ಸ್ಕೋರ್‌ಶೀಟ್‌ನಲ್ಲಿ ಇರಲು ಸಾಧ್ಯವಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications