ಸೆ. 29ರಿಂದ ಐಎಸ್ಎಲ್: ಎಟಿಕೆ-ಕೇರಳ ಬ್ಲಾಸ್ಟರ್ಸ್ ಮೊದಲ ಮುಖಾಮುಖಿ

ಕೋಲ್ಕತ್ತಾ, ಸೆಪ್ಟೆಂಬರ್ 28: ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಪಂದ್ಯಾಟದ 5ನೇ ಆವೃತ್ತಿ ಸೆಪ್ಟೆಂಬರ್ 29ರ ಶನಿವಾರದಿಂದ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಮತ್ತು ಕೇರಳ ಬ್ಲಾಸ್ಟರ್ಸ್ ತಂಡಗಳು ಕಾದಾಡಲಿವೆ.
2014ರಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗಿನಿಂದಲೂ ಎಟಿಕೆ ಮತ್ತು ಕೇರಳ ಬ್ಲಾಸ್ಟರ್ಸ್ ನಡುವಿನ ಪಂದ್ಯಗಳು ಅನೇಕ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಿದೆ. ನಾಲ್ಕು ವರ್ಷಗಳಲ್ಲಿ ನಾಲ್ಕು ಆವೃತ್ತಿಯ ಬಳಿಕವೂ ಎರಡೂ ತಂಡಗಳು ಹೊಸತನವನ್ನು ಉಳಿಸಿಕೊಂಡಿವೆ.
ಎರಡೂ ತಂಡಗಳೂ ಎರಡು ಎರಡು ಬಾರಿ ಐಎಸ್ಎಲ್ ನಲ್ಲಿ ಫೈನಲ್ ಪ್ರವೇಶಿಸಿದ್ದವು ಎನ್ನುವುದು ವಿಶೇಷ. ಆರಂಭಿಕ ಆವೃತ್ತಿಯಲ್ಲಿ ಮುಂಬೈಯ ಡಿವೈ ಪಾಟಿಲ್ ಸ್ಟೇಡಿಯಂನಲ್ಲಿ ಮತ್ತು 2016ರಲ್ಲಿ ಕೇರಳದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಇತ್ತಂಡಗಳು ಕಾದಾಡಿದ್ದವು.
ಸೆಪ್ಟೆಂಬರ್ 29ರ ಎಟಿಕೆ ಮತ್ತು ಕೇರಳಾ ಬ್ಲಾಸ್ಟರ್ಸ್ ಪ್ರಥಮ ಪಂದ್ಯ ಕೋಲ್ಕತ್ತಾದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ 7.30 pmಗೆ ಆರಂಭಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಹಾಟ್ಸ ಸ್ಟಾರ್ ನಲ್ಲಿ ಪಂದ್ಯ ನೇರಪ್ರಸಾರಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications