Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಡಿಯೋ: ತಲೆಗೆ ಮಾರಣಾಂತಿಕ ಪೆಟ್ಟು, ಸಾವಿನ ದವಡೆಯಲ್ಲಿದ್ದ ಫುಟ್ಬಾಲರ್

ಮ್ಯಾಡ್ರಿಡ್, ಮಾರ್ಚ್ 03: ಸ್ಪೇನಿನ ಆಟಗಾರ ಫರ್ನಾಂಡೋ ಜೋಸ್ ಟೊರೆಸ್ ಸ್ಯಾಂಜ್ ಅವರು ಸಾವಿನ ದವಡೆಯಿಂದ ಪಾರಾಗಿದ್ದಾರೆ. ಲಾ ಲೀಗಾದಲ್ಲಿ ಅಟ್ಲೆಟಿಕೋ ಮ್ಯಾಡ್ರಿಡ್ ಪರ ಆಡುವ ಟೊರೆಸ್ ಅವರಿಗೆ ಮಾರ್ಚ್ 02ರ ರಾತ್ರಿ ಪಂದ್ಯದ ಮೇಲೆ ಮಾರಣಾಂತಿಕ ಪೆಟ್ಟು ಬಿದ್ದಿದೆ.

ಎದುರಾಳಿ ಆಟಗಾರನ ತಲೆಗೆ ಡಿಚ್ಚಿ ಹೊಡೆದುಕೊಂಡು ಕುಸಿದು ಬಿದ್ದ ಟೊರೆಸ್ ಆರೋಗ್ಯದ ಬಗ್ಗೆ ಫುಟ್ಬಾಲ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Atletico Madrid's Fernando Torres suffers 'traumatic brain injury' during match

ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಲಿವರ್ ಪೂಲ್ ಪರ ಆಡುತ್ತಿದ್ದ ಸ್ಟೈಲಿಸ್ ಆಟಗಾರ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.


32 ವರ್ಷ ವಯಸ್ಸಿನ ಟೊರೆಸ್ ಅವರು ಡೆಪೊರ್ಟಿವೊ ತಂಡದ ಅಲೆಕ್ಸ್ ಬೆರ್ಗಾಂಟಿನೋಸ್ ಅವರ ತಲೆಗೆ ಡಿಚ್ಚಿ ಹೊಡೆದಿದ್ದಾರೆ. ಪೆನಾಲ್ಟಿ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.

ತಕ್ಷಣವೇ ಪ್ರಜ್ಞೆ ತಪ್ಪಿ ಬಿದ್ದ ಟೊರೆಸ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಮೈದಾನದಲ್ಲಿದ್ದ ಉಭಯ ತಂಡಗಳ ಅಭಿಮಾನಿಗಳು ಎದ್ದು ನಿಂತು ಆತಂಕ ವ್ಯಕ್ತಪಡಿಸಿ, ಹಾರೈಸಿದರು. ಡೆಪಾರ್ಟಿವೋ ಲಾ ಕರುನಾ ಹಾಗೂ ಅಟ್ಲೆಟಿಕೋ ಮ್ಯಾಡ್ರಿಡ್ ನಡುವಿನ ಪಂದ್ಯ 1-1 ಡ್ರಾನಲ್ಲಿ ಅಂತ್ಯ ಕಂಡಿತು.

Story first published: Wednesday, January 3, 2018, 10:06 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+