Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಟ್ಲಿಟಿಕೋ ಮಾಡ್ರಿಡ್‌ vs ಬಾರ್ಸಿಲೋನಾ: ಗಮನ ಸೆಳೆಯಲಿರುವ 5 ಆಟಗಾರರು

Atletico Madrid vs Barcelona: Five key players to watch out

ಮಾಡ್ರಿಡ್, ನವೆಂಬರ್ 24: ಆಟ್ಲಿಟಿಕೋ ಮಾಡ್ರಿಡ್‌ ತಂಡ ಇಂದು ಬಾರ್ಸಿಲೋನಾ ತಂಡವನ್ನು ಎದುರಿಸುತ್ತಿದ್ದು, ತನ್ನ ಶಕ್ತಿಮೀರಿ ಆಟ ಪ್ರದರ್ಶಿಸದಿದ್ದರೆ ಗೆಲುವು ಕಷ್ಟಕರವಾಗಲಿದೆ.

ಎರಡೂ ಸಮಾನಶಕ್ತಿಯುಳ್ಳ ತಂಡಗಳ ನಡುವೆ ಫುಟ್‌ಬಾಲ್ ಕಾದಾಟ ನಡೆಯುತ್ತಿದ್ದು, ಫುಟ್‌ಬಾಲ್ ಪ್ರಿಯರಿಗೆ ಇದು ಹೈವೋಲ್ಟೇಜ್ ಗೇಮ್ ಆಗಿದೆ.

ಚಾಂಪಿಯನ್‌ ಲೀಗ್‌ನ ಈ ಪಂದ್ಯದಲ್ಲಿ ಇತ್ತಂಡಗಳೂ ಗೆಲುವಿಗಾಗಿ ಶಕ್ತಿಮೀರಿ ಹೋರಾಟಲಿದ್ದು, ಎರಡೂ ತಂಡಗಳು ಕೆಲವು ಆಟಗಾರರು ಪಂದ್ಯದ ದಿಕ್ಕು ಬದಲಾಯಿಸುವ ಶಕ್ತಿಹೊಂದಿದ್ದಾರೆ.

ಲಾಲಿಂಗಾದಲ್ಲಿ ನಡೆಯುವ ಈ ಪಂದ್ಯವು ಭಾರತೀಯಲ ಕಾಲಮಾನ ರಾತ್ರಿ 1:15 ಕ್ಕೆ ಆರಂಭ ವಾಗಲಿದ್ದು, ಬಾರ್ಸಿಲೋನಾ ತಂಡವು ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.

ಈ ಪ್ರಮುಖ ಪಂದ್ಯದಲ್ಲಿ ಎರಡೂ ತಂಡಗಳಲ್ಲಿ ಗಮನ ಸೆಳೆಯಬಹುದಾದ ಐದು ಆಟಗಾರರ ಪಟ್ಟಿ ಇಲ್ಲಿದೆ...

ಬಾರ್ಸಿಲೋನಾದ ಆರ್ಥುರ್ ಮೆಲೊ

ಬಾರ್ಸಿಲೋನಾದ ಆರ್ಥುರ್ ಮೆಲೊ

ಬಾರ್ಸಿಲೋನಾ ತಂಡದ ಮಿಡ್‌ಫೀಲ್ಡ್‌ ಆಟಗಾರ ಆರ್ಥುರ್ ಮೆಲೋ ಅವರ ಮೇಲೆ ಗಮನ ಕೇಂದ್ರಿತವಾಗಿದೆ. 22 ವರ್ಷದ ಈ ಬ್ರೆಜಿಲಿಯನ್ ಆಟಗಾರ ಕಾಲ್ಚಳಕದ ಮೇಲೆ ಫುಟ್‌ಬಾಲ್ ಪ್ರಿಯರ ಕಣ್ಣು ನೆಟ್ಟಿದೆ.

ರೋಡ್ರಿಗೋ ಹೆರ್ನಾನ್ಡೇಜ್‌

ರೋಡ್ರಿಗೋ ಹೆರ್ನಾನ್ಡೇಜ್‌

ಆಟ್ಲಿಟಿಕೋ ಮಾಡ್ರಿಡ್‌ ತಂಡದ ಮಿಡ್‌ಫೀಲ್ಡ್‌ ಆಟಗಾರ ರೊಡ್ರಿಗೋ ಹೆರ್ನಾನ್ಡೇಜ್‌ ಆಟ್ಲಿಟಿಕೋ ಮಾಡ್ರಿಡ್‌ನ ಮಿಡ್‌ಫೀಲ್ಡ್‌ ಶಕ್ತಿ ಎನಿಸಿಕೊಂಡಿದ್ದಾರೆ. 22 ಹರೆಯದ ಈತ ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ.

ಫಿಲಿಪ್ ಲೂಯಿಸ್‌

ಫಿಲಿಪ್ ಲೂಯಿಸ್‌

ಆಟ್ಲಿಟಿಕೋ ಮಾಡ್ರಿಡ್‌ನ ಫಿಲಿಪ್ ಲೂಯಿಸ್‌ ತಂಡದ ಪ್ರಮುಖ ಫಾರ್ವರ್ಡ್‌ ಡಿಫೆನ್ಸ್‌. ಖ್ಯಾತ ಆಟಗಾರ ಮೆಸ್ಸಿ ಟೂರ್ನಿಗೆ ಮರಳಿರುವ ಕಾರಣ ಅವರನ್ನು ತಡೆಯುವ ಕಾರ್ಯ ಫಿಲಿಪ್ ಲೂಯಿಸ್‌ ಮಾಡಲಿದ್ದಾರೆ. ಅವರ ಆಟದ ಮೇಲೆ ಪಂದ್ಯದ ಗೆಲುವು ನಿಂತಿದೆ.

ಗಿರಾರೇಡ್‌ ಪಿಕಿ

ಗಿರಾರೇಡ್‌ ಪಿಕಿ

ಬಾರ್ಸಿಲೋನಾದ ಗಿರಾರೇಡ್ ಪಿಕಿ ತಂಡದ ಪ್ರಮುಖ ಡಿಫೆನ್ಸ್‌ ಆಟಗಾರ. ಬಾರ್ಸಿಲೋನಾದ ರಕ್ಷಣೆ ಟೂರ್ನಿಯಲ್ಲಿ ಈವರೆಗೆ ಅಷ್ಟೇನು ಉತ್ತಮವಾಗಿಲ್ಲ. ರಕ್ಷಣೆ ತಂಡವನ್ನು ಮುನ್ನಡೆಸುತ್ತಿರುವುದು ಗಿರಾರೇಡ್‌ ಪಿಕಿ.

ಸಾವುಲ್ ನಿಗೀಜ್‌

ಸಾವುಲ್ ನಿಗೀಜ್‌

ಆಟ್ಲಿಟಿಕೋ ಮಾಡ್ರಿಡ್‌ ತಂಡದ ಮಿಡ್‌ಫೀಲ್ಡರ್‌ ಈ ರೀತಿಯ ಪ್ರಮುಖ ಪಂದ್ಯಗಳಲ್ಲಿ ಗೋಲು ಹೊಡೆಯುವುದರಲ್ಲಿ ನಿಸ್ಸೀಮರು. ಕಳೆದ ಸೀಸನ್‌ನಲ್ಲಿ ಸಾವುಲ್ ನಿಗೀಜ್‌ ಉತ್ತಮ ಪ್ರದರ್ಶನ ತೋರಿದ್ದರು.

Story first published: Saturday, November 24, 2018, 15:01 [IST]
Other articles published on Nov 24, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+