ಲಾ ಲೀಗ: ಪ್ರಶಸ್ತಿ ಸನಿಹ ಎಫ್‌ಸಿ ಬಾರ್ಸಿಲೋನಾ

ಮ್ಯಾಡ್ರಿಡ್, ಏಪ್ರಿಲ್ 22: ಅಮೋಘ ಲಯದಲ್ಲಿರುವ ಎಫ್‌ಸಿ ಬಾರ್ಸಿಲೋನಾ ತಂಡ ಸ್ಪ್ಯಾನಿಷ್ ಲಾ ಲೀಗ ಟೂರ್ನಿಯಲ್ಲಿ ತನ್ನ 26ನೇ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಮತ್ತೊಂದು ಹೆಜ್ಜೆ ಹತ್ತಿರವಾಗಿದೆ.
ಇಲ್ಲಿನ ಕ್ಯಾಂಪ್ ನೌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 33ನೇ ಸುತ್ತಿನ ಲೀಗ್ ಪಂದ್ಯದಲ್ಲಿ ಮಿಂಚಿದ ಎಫ್‌ಸಿ ಬಾರ್ಸಿಲೋನಾ 2-1 ಗೋಲ್‌ಗಳಿಂದ ರಿಯಲ್ ಸೋಸಿಡಾಡ್ ತಂಡವನ್ನು ಬಗ್ಗುಬಡಿದು ಅಂಕಪಟ್ಟಿಯಲ್ಲಿನ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲ ಪಡಿಸಿಕೊಂಡಿದೆ.
ಪಂದ್ಯದಲ್ಲಿ ಬಾರ್ಸಿಲೋನಾ ಪರ ಡಿಫೆಂಡರ್ ಕ್ಲೆಮೆಂಟ್ ಲೆಂಗ್ಲೆಟ್ ಹೆಡರ್ ಮೂಲಕ 44ನೇ ನಿಮಿಷದಲ್ಲಿ ಮೊದಲ ಯಶಸ್ಸು ತಂದುಕೊಟ್ಟರೆ, ದ್ವಿತೀಯಾರ್ಧದಲ್ಲಿ ಜಾರ್ಡಿ ಆಲ್ಬ (64ನೇ ನಿ.) ಗೆಲುವಿನ ಗೋಲ್ ದಾಖಲಿಸಿದರು. ಇದಕ್ಕೂ 2 ನಿಮಿಷ ಮೊದಲು ಜುವಾನ್ಮಿ ಸ್ಲಿಡ್ (62ನೇ ನಿ.) ರಿಯಲ್ ಸೋಸಿಡಾಡ್ ಪರ ಸಮಬಲದ ಗೋಲ್ ದಾಖಲಿಸಿದ್ದರು.
ಈ ಗೆಲುವಿನೊಂದಿಗೆ ಬಾರ್ಸಿಲೋನಾ ತಂಡ ಆಡಿದ 33 ಪಂದ್ಯಗಳಿಂದ ಒಟ್ಟಾರೆ 77 ಅಂಕಗಳನ್ನು ಗಳಿಸಿ ಅಗ್ರಸ್ಥಾನವನ್ನು ಬಲಪಡಿಸಿಕೊಂಡಿದೆ. 9 ಅಂಕಗಳ ಹಿನ್ನಡೆಯಲ್ಲಿರುವ ಅಟ್ಲೆಟಿಕೊ ಮ್ಯಾಡ್ರಿಡ್ (68) ದ್ವಿತೀಯಸ್ಥಾನದಲ್ಲಿದೆ.
ಬಾರ್ಸಿಲೋನಾದ ದೀರ್ಘಕಾಲದ ಬದ್ಧ ಎದುರಾಳಿ ರಿಯಲ್ ಮ್ಯಾಡ್ರಿಡ್ ತನ್ನ ಮಾಜಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸೇವೆ ಇಲ್ಲದೆ ಅಂಕಪಟ್ಟಿಯಲ್ಲಿ 64 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications