ಲಿಯೋನೆಲ್ ಮೆಸ್ಸಿಯಿರುವ ಬಾರ್ಸಿಲೋನಾ ತಂಡದ ಆಟಗಾರನಿಗೆ ಕೊರೊನಾ

ಬಾರ್ಸಿಲೋನಾ, ಆಗಸ್ಟ್ 12: ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅವರಿರುವ ಬಾರ್ಸಿಲೋನಾ ತಂಡದಲ್ಲಿ ಒಬ್ಬ ಆಟಗಾರನಿಗೆ ಕೊರೊನಾವೈರಸ್ ಸೋಂಕಿರುವುದು ಪತ್ತೆಯಾಗಿದೆ. ಲಾ ಲಿಗಾ ಈ ವಿಚಾರವನ್ನು ಬುಧವಾರ (ಆಗಸ್ಟ್ 12) ತಿಳಿಸಿದೆ.
ಕೋವಿಡ್-19 ಪಾಸಿಟಿವ್ ಬಂದಿರುವ ಆಟಗಾರ ತನ್ನ ಮನೆಯಲ್ಲಿ ಸ್ವ ಐಸೊಲೇಶನ್‌ನಲ್ಲಿದ್ದಾರೆ. ಈ ಆಟಗಾರ ಸದ್ಯ ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್‌ಗಾಗಿ ಲಿಸ್ಬನ್‌ಗೆ ಪ್ರಯಾಣಿಸುತ್ತಿರುವ ಯಾವುದೇ ಆಟಗಾರನನ್ನು ಸಂಪರ್ಕಿಸಿಲ್ಲ ಎಂದು ಬಾರ್ಸಿಲೋನಾ ಮಾಹಿತಿ ನೀಡಿದೆ.
ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಬೇಯರ್ನ್ ಮ್ಯೂನಿಚ್ ವಿರುದ್ಧ ಸೆಣಸಾಡಲಿರುವ ಬಾರ್ಸಿಲೋನಾ ತಂಡದ ಯಾವುದೇ ಆಟಗಾರರು ಸೋಂಕಿತ ಆಟಗಾರನನ್ನು ಸಂಪರ್ಕಿಸಿಲ್ಲವಾದ್ದರಿಂದ ಉದ್ದೇಶಿತ ಸೆಮಿಫೈನಲ್ ಪಂದ್ಯ ಯಾವುದೇ ಅಡೆತಡೆಯಿಲ್ಲದೆ ಎಂದಿನಂತೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
'ಸೀಸನ್ ಪ್ರಾರಂಭಿಸಲಿರುವ ಒಂಬತ್ತು ಆಟಗಾರರ ಗುಂಪಿಗೆ ಮಂಗಳವಾರ ಮಧ್ಯಾಹ್ನ ಕೊರೊನಾವೈರಸ್ ಪರೀಕ್ಷೆ ನಡೆಸಲಾಯ್ತು. ಗುಂಪಿನಲ್ಲಿ ಒಬ್ಬರಿಗೆ ಕೋವಿಡ್ -19 ಪಾಸಿಟಿವ್ ಬಂದಿದೆ,' ಎಂದು ಬಾರ್ಸಿಲೋನಾ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications