ಬಾರ್ಸಿಲೋನಾಕ್ಕೆ ಹೊಸ ಕೋಚ್ ಆಗಿ ರೊನಾಲ್ಡ್ ಕೋಮನ್ ಆಯ್ಕೆ

ಬಾರ್ಸಿಲೋನಾ, ಆಗಸ್ಟ್ 19: ಬಾರ್ಸಿಲೋನಾ ತಂಡಕ್ಕೆ ರೊನಾಲ್ಡ್ ಕೋಮನ್ ಅವರು ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್‌ನಲ್ಲಿ ಬಾರ್ಸಿಲೋನಾ ತಂಡ ಬೇಯರ್ನ್ ಮ್ಯೂನಿಚ್ ವಿರುದ್ಧ 8-2ರ ಅಂತರದಲ್ಲಿ ಸೋಲನುಭವಿಸಿದ್ದರಿಂದ ತಂಡವನ್ನು ಮರಳಿಕಟ್ಟಲು ಬಾರ್ಸಿಲೋನಾ ಯೋಚಿಸಿದೆ.
ನೆದರ್ಲ್ಯಾಂಡ್ಸ್ ಮ್ಯಾನೇಜರ್ ಸ್ಥಾನ ತೊರೆದಿರುವ ರೊನಾಲ್ಡ್ ಕೋಮನ್ ಅವರು ಬಾರ್ಸಿಲೋನಾ ಜೊತೆಗಿನ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಯುರೋಪಿಯನ್ ಸ್ಪರ್ಧೆಯಲ್ಲಿ ಹೀನಾಯ ಸೋಲನುಭವಿಸಿದ್ದರಿಂದ ಕೋಚ್ ಆಗಿದ್ದ ಕ್ವಿಕ್ ಸೆಟಿಯನ್ ಅವರನ್ನು ಬಾರ್ಸಿಲೋನಾ ಸೋಮವಾರ (ಆಗಸ್ಟ್ 17) ತೆಗೆದುಹಾಕಿತ್ತು.
'30 ಜೂನ್ 2022ರ ವರೆಗೆ ತಂಡದ ಕೋಚ್ ಆಗಿ ರೊನಾಲ್ಡ್ ಕೋಮನ್ ಅವರೊಂದಿಗೆ ಬಾರ್ಸಿಲೋನಾ ಒಪ್ಪಂದ ಮಾಡಿಕೊಂಡಿದೆ,' ಎಂದು ಬಾರ್ಸಿಲೋನಾ ಹೇಳಿಕೆಯ ಮೂಲಕ ತಿಳಿಸಿದೆ.
ಕೋಮನ್ ಅವರು ಡಚ್ ತಂಡಗಳಾದ ಅಜಾಕ್ಸ್ ಆಮ್ಸ್ಟರ್‌ಡ್ಯಾಮ್, ಪಿಎಸ್‌ವಿ ಐಂಡ್‌ಹೋವನ್ ಮತ್ತು ಫೆಯೆನೂರ್ಡ್‌ಗೆ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ, ಪ್ರೀಮಿಯರ್ ಲೀಗ್ ತಂಡಗಳಾದ ತೌತಾಂಪ್ಟನ್, ಎವರ್ಟನ್‌ಗೆ ತರಬೇತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications