ಪ್ಯಾರಿಸ್ ಸೇಂಟ್ ಮಣಿಸಿ ಚಾಂಪಿಯನ್ಸ್ ಲೀಗ್ ಗೆದ್ದ ಬೇಯರ್ನ್ ಮ್ಯೂನಿಚ್

ಲಿಸ್ಬನ್: ಸೋಮವಾರ (ಆಗಸ್ಟ್ 24) ನಡೆದ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ಮಣಿಸಿರುವ ಬೇಯರ್ನ್ ಮ್ಯೂನಿಚ್ ತಂಡ 6ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಚಾಂಪಿಯನ್ಸ್ ಆಗಿ ಮಿನುಗಿದೆ. ಕಿಂಗ್ಸ್‌ಲೆ ಕೋಮನ್ ಅವರು ಬೇಯರ್ನ್ ಹೀರೋ ಆಗಿ ಮಿಂಚಿದ್ದಾರೆ.
ಪೋರ್ಚುಗಲ್‌ನ ಎಸ್ಟಾಡಿಯೊ ಡು ಸ್ಪೋರ್ಟ್ ಲಿಸ್ಬೊವಾ ಇ ಬೆನ್ಫಿಕಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ಯಾರಿಸ್ ಸೇಂಟ್ ಜರ್ಮೈನ್ ವಿರುದ್ಧ 1-0ಯ ಗೆಲುವು ದಾಖಲಿಸಿದ ಬೇಯರ್ನ್ ಮ್ಯೂನಿಚ್ ಎಫ್‌ಸಿ ಚಾಂಪಿಯನ್ಸ್ ಲೀಗ್ ಟ್ರೋಫಿ ತನ್ನದಾಗಿಸಿಕೊಂಡಿದೆ.
ಬೇಯರ್ನ್ ಮ್ಯೂನಿಚ್ ತಂಡದ ಕಿಂಗ್ಸ್‌ಲೆ ಕೋಮನ್ ಅವರು 59ನೇ ನಿಮಿಷದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಪಂದ್ಯದ ಆರಂಭದಿಂದಲೂ ಎರಡೂ ತಂಡಗಳೂ ಪ್ರಬಲ ಪೈಪೋಟಿ ನಡೆಸಿದವಾದರೂ ಮೊದಲಾರ್ಧದಲ್ಲಿ ಗೋಲ್ ದಾಖಲಾಗಲಿಲ್ಲ.
ಪ್ಯಾರಿಸ್ ಸೇಂಟ್ ಜರ್ಮೈನ್‌ನ ಕೈಲಿಯನ್ ಎಂಬಪ್ಪೆ ಅವರು 12, 15ನೇ ನಿಮಿಷದಲ್ಲಿ ಗೋಲ್ ಬಾರಿಸುವ ಯತ್ನ ನಡೆಸಿದರಾದರೂ ಆ ಗೋಲ್ ಯತ್ನ ತಡೆಯಲ್ಪಟ್ಟಿತು.
Story first published: Monday, August 24, 2020, 11:23 [IST]
Other articles published on Aug 24, 2020
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications