Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಫೀಫಾ Rankingನಲ್ಲಿ ಅಪರೂಪದ ಸಾಧನೆ: ಫ್ರಾನ್ಸ್-ಬೆಲ್ಜಿಯಂಗೆ ಅಗ್ರ ಸ್ಥಾನ!

Belgium join world champions France atop FIFA rankings

ನವದೆಹಲಿ, ಸೆಪ್ಟೆಂಬರ್ 21: ಗುರುವಾರ (ಸೆಪ್ಟೆಂಬರ್ 20) ಪ್ರಕಟಿಸಲಾಗಿರುವ ಫೀಫಾ ವಿಶ್ವ ರ್ಯಾಂಕಿಂಗ್ ನಲ್ಲಿ ವಿಶ್ವ ಚಾಂಪಿಯನ್ ಫ್ರಾನ್ಸ್ ಜೊತೆ ಬೆಲ್ಜಿಯಂ ತಂಡ ಮೊದಲ ಸ್ಥಾನ ಹಂಚಿಕೊಂಡು ಅಪರೂಪದ ಸಾಧನೆಗೆ ಕಾರಣವಾಗಿದೆ. ತಂಡಗಳೆರಡು ಅಗ್ರ ಸ್ಥಾನ ಹಂಚಿಕೊಂಡಿದ್ದು, 25 ವರ್ಷಗಳ ಬಳಿಕ ಇದೇ ಮೊದಲು.

ಸೆಪ್ಟೆಂಬರ್ 11ರಂದು ನಡೆದಿದ್ದ ಯುಇಎಫ್ಎ ನೇಷನ್ಸ್ ಲೀಗ್ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬೆಲ್ಜಿಯಂ ತಂಡ ಐಸ್ ಲ್ಯಾಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿತ್ತು. ಈ ಗೆಲುವು ಬೆಲ್ಜಿಯಂ ತಂಡವನ್ನು ವಿಶ್ವ ನಂ.1 ಸ್ಥಾನದಲ್ಲಿ ತಂದು ನಿಲ್ಲಿಸಿದೆ.

ಒಟ್ಟು 1,729 ಅಂಕಗಳೊಂದಿಗೆ ಬೆಲ್ಜಿಯಂ ಮತ್ತು ಫ್ರಾನ್ಸ್ ತಂಡಗಳು ರ್ಯಾಂಕಿಂಗ್ ಟೇಬಲ್ ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಬ್ರೆಜಿಲ್, ಕ್ರೊವೇಷಿಯಾ, ಉರುಗ್ವೆ, ಇಂಗ್ಲೆಂಡ್, ಪೋರ್ಚುಗಲ್, ಸ್ವಿಟ್ಜರ್ಲ್ಯಾಂಡ್, ಸ್ಪೇನ್ ಮತ್ತು ಡೆನ್ಮಾರ್ಕ್ ತಂಡಗಳು ಕ್ರಮವಾಗಿ 3ನೇ ಸ್ಥಾನದಿಂದ 10ರೊಳಗೆ ಸ್ಥಾನ ಪಡೆದುಕೊಂಡಿವೆ.

Belgium join world champions France atop FIFA rankings

ಫೀಫಾ ವಿಶ್ವಕಪ್ 2018ರ ಫೈನಲ್ ನಲ್ಲಿ ಫ್ರಾನ್ಸ್ ತಂಡ ಕ್ರೊವೇಷಿಯಾವನ್ನು 4-2ರಿಂದ ಸೋಲಿಸಿ ಚಾಂಪಿಯನ್ ಅನ್ನಿಸಿಕೊಂಡಿತ್ತು. ಟೂರ್ನಿಯ ಸೆಮಿಫೈನಲ್ ನಲ್ಲಿ ಫ್ರಾನ್ಸ್ ತಂಡ ಬೆಲ್ಜಿಯಂ ತಂಡವನ್ನು ಸೋಲಿಸಿತ್ತು. ಈಗ ಬೆಲ್ಜಿಯಂ ತಂಡವೇ ಫೀಫಾ ಚಾಂಪಿಯನ್ ಜೊತೆ ಸ್ಥಾನ ಹಂಚಿಕೊಂಡಿದೆ!

Story first published: Wednesday, October 3, 2018, 15:35 [IST]
Other articles published on Oct 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+