Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

FIFA World Cup: ಮೆಕ್ಸಿಕೊ ಮಣಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್‌ಗೆ

ಭರವಸೆಯ ಆಟಗಾರ ಜೂಡ್ ಬೆಲ್ಲಿಂಗ್ಹ್ಯಾಮ್ ಬಾರಿಸಿದ ಎರಡು ಗೋಲು ಹಾಗೂ ಹ್ಯಾರಿ ಕೇನ್‌ ಅವರು ಬಾರಿಸಿದ ಒಂದು ಗೋಲಿನ ನೆರವಿನಿಂದ ಇಂಗ್ಲೆಂಡ್ ಫಿಫಾ ವಿಶ್ವಕಪ್‌ ರೌಂಡ್ ಆಫ್‌ 16ನಲ್ಲಿ 3-2 ರಿಂದ ಮೆಕ್ಸಿಕೊ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ರೋಚಕ ಗೆಲುವಿನ ಮೂಲಕ ಇಂಗ್ಲೆಂಡ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ.

ಮೆಕ್ಸಿಕೊ ಸಿಟಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಅಮೋಘ ಆಟವನ್ನು ಆಡಿತು. ಇಂಗ್ಲೆಂಡ್‌ ಭರ್ಜರಿ ಆಟದ ಪ್ರದರ್ಶನ ನೀಡಿ ಮೊದಲ ಹಂತದಲ್ಲೇ ಆತಿಥೇಯ ಮೆಕ್ಸಿಕೊ ತಂಡವನ್ನು ಮಣಿಸಿತು. ಈ ಪಂದ್ಯದ ಆರಂಭದಿಂದ ಇಂಗ್ಲೆಂಡ್‌ ಪಂದ್ಯದ ಮೇಲೆ ಹಿಡಿತ ಸಾಧಿಸಲು ಹೆಣಗಾಟ ನಡೆಸಿತು. ಆದರೆ ಹಲವು ಅವಕಾಶವನ್ನು ಸೃಷ್ಟಿಸಿಕೊಂಡು ಕೈ ಚೆಲ್ಲಿತು. ಪಂದ್ಯದ 36ನೇ ನಿಮಿಷದಲ್ಲಿ ಇಂಗ್ಲೆಂಡ್‌ ಪಾಳಯದಲ್ಲಿ ಸಂತಸ ಮನೆ ಮಾಡಿತು.

FIFA World Cup

ಗೋಲು ಪೆಟ್ಟಿಗೆಯ ಎಡಭಾಗದಿಂದ ಬಂದ ಪಾಸ್‌ನ ಸಂಪೂರ್ಣ ಲಾಭ ಪಡೆದ ಇಂಗ್ಲೆಂಡ್‌ ಆಟಗಾರ ಜೂಡ್ ಬೆಲ್ಲಿಂಗ್ಹ್ಯಾಮ್ ಹೆಡ್‌ ಮಾಡುವ ಮೂಲಕ ಅಬ್ಬರಿಸಿದರು. ಇವರು ಸಹ ಆಟಗಾರ ನೀಡಿದ ಪಾಸ್‌ಗೆ ತಲೆ ಮುಟ್ಟಿಸಿ ಚೆಂಡು ಗೋಲು ಪೆಟ್ಟಿಗೆಯ ಒಳಗಡೆ ಹೋಗುವಂತೆ ಮಾಡಿದರು. ಪರಿಣಾಮ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿತು.

2 ನಿಮಿಷದ ಅಂತರದಲ್ಲಿ ಮತ್ತೊಂದು ಗೋಲು

ಈ ಗೋಲಿನ ಅಂತರವನ್ನು ಹೆಚ್ಚಿಸಿಕೊಳ್ಳಲು ಇಂಗ್ಲೆಂಡ್‌ಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಜೂಡ್ ಬೆಲ್ಲಿಂಗ್ಹ್ಯಾಮ್ ಜಸ್ಟ್‌ 2 ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ಅಬ್ಬರಿಸಿದರು. ಪರಿಣಾಮ ಇಂಗ್ಲೆಂಡ್‌ ಮೊದಲ ಅವಧಿಯ 38 ನಿಮಿಷದಲ್ಲಿ 2 ಗೋಲುಗಳನ್ನು ಬಾರಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ಸೂಚನೆ ನೀಡಿತು.

ಆದರೆ ಇದೇ ಅವಧಿಯಲ್ಲಿ ಸಿಕ್ಕ ಅವಕಾಶವನ್ನು ಮೆಕ್ಸಿಕೊ ಆಟಗಾರ ಜೂಲಿಯನ್ ಕ್ವಿನೋನ್ಸ್ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಪಂದ್ಯದ 42ನೇ ನಿಮಿಷದಲ್ಲಿ ಮೆಕ್ಸಿಕೊ ಮೊದಲ ಗೋಲಿನ ನಗೆ ಬೀರಿತು. ಮೊದಲ ಅರ್ಧದ ಅಂತ್ಯದಲ್ಲಿ ಪಂದ್ಯ ರೋಚಕತೆ ಹೆಚ್ಚಿಸಿತ್ತು. ಈ ಅವಧಿಯಲ್ಲಿ ಗೋಲ್ ಸ್ಕೋರ್ 2-1 ಆಗಿತ್ತು.

ಇಂಗ್ಲೆಂಡ್‌ಗೆ ರೆಡ್‌ ಕಾರ್ಡ್ ಆಘಾತ

ಎರಡನೇ ಅರ್ಧದ ಆಟದಲ್ಲಿ ಇಂಗ್ಲೆಂಡ್‌ಗೆ ಒಂದು ಶಾಕ್‌ ಕಾದಿತ್ತು. ಪಂದ್ಯದ 54ನೇ ನಿಮಿಷದಲ್ಲಿ ಜರೆಲ್ ಕ್ವಾನ್ಸಾ ಅವರಿಗೆ ರೆಡ್‌ ಕಾರ್ಡ್‌ ನೀಡಲಾಯಿತು. ಆದರೂ ಧೃತಿಗೆಡದ ಇಂಗ್ಲೆಂಡ್ ಅಬ್ಬರಿಸುತ್ತಾ ಸಾಗಿತು. ಈ ಹಂತದಲ್ಲಿ ಇಂಗ್ಲೆಂಡ್‌ ನಾಯಕ ಹ್ಯಾರಿ ಕೇನ್‌ ಪೆನಾಲ್ಟಿ ಅವಕಾಶದಲ್ಲಿ ಗೋಲು ಬಾರಿಸಿ ಅಂತರವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇಂಗ್ಲೆಂಡ್‌ 3-2 ಗೋಲುಗಳ ಮುನ್ನಡೆ ಸಾಧಿಸಿತು.

ಈ ಅವಧಿಯ 69ನೇ ನಿಮಿಷದಲ್ಲಿ ಮೆಕ್ಸಿಕೊ ತಂಡಕ್ಕೆ ಫ್ರಿ ಕಿಕ್ ಅವಕಾಶ ಲಭಿಸಿತು. ಇದನ್ನು ಉತ್ತಮವಾಗಿ ಬಳಸಿಕೊಂಡ ರೌಲ್ ಜಿಮೆನೆಜ್ ಗೋಲು ಬಾರಿಸಿದರು. ಪಂದ್ಯ ರೋಚಕತೆ ಹೆಚ್ಚಿಸಿತ್ತು. ಆದರೆ ಕೊನೆಯ ಕ್ಷಣದ ವರೆಗೂ ಮೆಕ್ಸಿಕೊ ಗೋಲು ದಾಖಲಿಸಲು ಸಾಧ್ಯವೇ ಆಗಲಿಲ್ಲ. ಪರಿಣಾಮ ಇಂಗ್ಲೆಂಡ್‌ ಪಂದ್ಯವನ್ನು ಗೆದ್ದು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು.

Story first published: Monday, July 6, 2026, 9:45 [IST]
Other articles published on Jul 6, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+