ಕಟಕ್, ಮೇ 8: ಸೋಮವಾರ ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಫೆಡರೇಷನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಪಂದ್ಯದಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ತಂಡ, ಶಿಲ್ಲಾಂಗ್ ಲಜಾಂಗ್ ತಂಡವನ್ನು 3-2 ಗೋಲುಗಳ ಅಂತರದಲ್ಲಿ ಮಣಿಸಿತು.
ಪ್ರಖ್ಯಾತ ಉಕ್ಕು ತಯಾರಿಕಾ ಕಂಪನಿಯಾದ ಜಿಂದಾಲ್ ಸ್ಟೀಲ್ಸ್ ಸಂಸ್ಥೆಯು, ಬೆಂಗಳೂರು ತಂಡದ ತಂಡದ ಮಾಲೀಕತ್ವ ಹೊಂದಿದೆ.

ಭಾರತ ತಂಡದ ಪರವಾಗಿ, ಉದಾಂತ ಸಿಂಗ್ (35ನೇ ನಿಮಿಷ), ಈಗೆನೆಸನ್ ಲಿಂಗ್ಡೋ (46ನೇ ನಿಮಿಷ) ಗೋಲು ಬಂದರೆ, ಮತ್ತೊಂದು ಗೋಲು ಎದುರಾಳಿ ತಂಡದ ನಾಯಕ ಐಬ್ರೊಲಾಂಗ್ ಖೋಗ್ ಜೀ ಅವರಿಂದ ಸ್ವಯಂ ಗೋಲು ದಾಖಲಾಗಿದ್ದರಿಂದ ಆ ಗೋಲು ಬೆಂಗಳೂರು ತಂಡದ ಪಾಲಾಯಿತು.
ಇನ್ನು, ಎದುರಾಳಿ ತಂಡದ ಪರವಾಗಿ ಯುಟಾ ಕಿನೊವಾಕಿ (72ನೇ ನಿಮಿಷ) ಹಾಗೂ ಸ್ಯಾಮ್ಯುಯೆಲ್ ಲಾಲ್ ಮುಯಾವ್ ಪುವಿಯಾ (84ನೇ ನಿಮಿಷ) ಗೋಲು ದಾಖಲಿಸಿದರು.