ಬೆಂಗಳೂರು ಎಫ್ ಸಿಗೆ ಕಾಲಿಟ್ಟ ಗೋಲ್ ಕೀಪರ್ ಸಂಧು
ಬೆಂಗಳೂರು, ಆಗಸ್ಟ್ 18: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಫುಟ್ಬಾಲ್ ತಂಡದ ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರನ್ನು ಬೆಂಗಳೂರು ಫುಟ್ಬಾಲ್ ತಂಡ (ಬಿಎಫ್ ಸಿ) ತನ್ನಲ್ಲಿ ಸೇರ್ಪಡೆಗೊಳಿಸಿಕೊಂಡಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ನ ಆಡಳಿತ ಮಂಡಳಿ, 2017-18ರ ಸಾಲಿಗೆ ಅವರು ಬಿಎಫ್ ಸಿ ತಂಡದಲ್ಲಿ ಆಡಲಿದ್ದಾರೆ ಎಂದು ಹೇಳಿದೆ.

ಇದೇ ತಿಂಗಳ 21ರಿಂದ ಆರಂಭಗೊಳ್ಳಲಿರುವ 2017ರ ಎಎಫ್ ಸಿ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಆಡಲಿರುವ ಬಿಎಫ್ ಸಿ ತಂಡದಲ್ಲೇ ಸಂಧು ಅವರು ಗೋಲ್ ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ.
ಇದೇ ತಿಂಗಳ 23ರಂದು ನಡೆಯಲಿರುವ ಎಎಫ್ ಸಿ ಚಾಂಪಿಯನ್ ಶಿಪ್ ನ ಸೆಮಿಫೈನಲ್ ಪಂದ್ಯದಲ್ಲಿ, ಬಿಎಫ್ ಸಿ ತಂಡ, ಉತ್ತರ ಕೊರಿಯಾದ 'ಏಪ್ರಿಲ್ 25 ಎಸ್ ಸಿ' ತಂಡವನ್ನು ಎದುರಿಸಿದೆ.
ಈ ಪಂದ್ಯ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಪ್ರತಿಯಾಗಿ ಈ ಎರಡೇ ತಂಡಗಳ ನಡುವೆ ಮತ್ತೊಂದು ಸೆಮಿಫೈನಲ್ ಪಂದ್ಯವೂ ನಡೆಯಲಿದ್ದು, ಆ ಪಂದ್ಯ 'ಏಪ್ರಿಲ್ 25 ಎಸ್ ಸಿ' ತಂಡದ ತವರು ಕ್ರೀಡಾಂಗಣವಾದ ಪಯೋಗ್ಯಂಗ್ (ಉತ್ತರ ಕೊರಿಯಾ) ಯಂಗಕ್ಕೊಡೊ ಕ್ರೀಡಾಂಗಣದಲ್ಲಿ ನಡೆಯಲಿದೆ.
ಈ ಎರಡೂ ಪಂದ್ಯಗಳಲ್ಲಿ ಸಂಧು ಅವರು ಬಿಎಫ್ ಸಿ ಪರವಾಗಿ ಕಣಕ್ಕಿಳಿಯಲಿದ್ದಾರೆ. ಶೀಘ್ರದಲ್ಲೇ ಈ ಪಂದ್ಯಗಳಿಗಾಗಿ ಬಿಎಫ್ ಸಿ ತಂಡದಲ್ಲಿ ಆಡುವ ಆಟಗಾರರ ಪಟ್ಟಿ ಅಂತಿಮ ಗೊಳಿಸಲು ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅದರಲ್ಲಿ ಸಂಧು ಭಾಗಿಯಾಗಲಿದ್ದಾರೆಂದು ಬಿಎಫ್ ಸಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications