ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಸ್‌ ಫೈನಲ್ ಹಣಾಹಣಿ: ಬೆಂಗಳೂರೇ ಗೆಲ್ಲುವ ಫೆವರೇಟ್

By Manjunatha
BFC and Chennaiyin FC will play finals today in Bengaluru

ಬೆಂಗಳೂರು, ಮಾರ್ಚ್ 17: ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟ ಪ್ರದರ್ಶಿಸಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ)ಯು ಇಂದು (ಮಾರ್ಚ್‌ 17) ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಫೆವರೇಟ್ ತಂಡವಾಗಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಎಸ್‌ಎಲ್ ಫೈನಲ್ ಪಂದ್ಯದಲ್ಲಿ ಬಿಎಫ್‌ಸಿಯು ಚೆನ್ನೈಯನ್ ಎಫ್‌ಸಿ ತಂಡವನ್ನು ಎದುರಿಸಲಿದೆ, ಪಂದ್ಯಕ್ಕೂ ಒಂದು ದಿನ ಮುಂಚೆಯೇ ಕ್ರೀಡಾಂಗಣದ ಟಿಕೆಟ್‌ಗಳೆಲ್ಲಾ ಮಾರಾಟವಾಗಿದ್ದು, ಭಾರಿ ಸಂಖ್ಯೆಯಲ್ಲಿ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಬಿಎಫ್‌ಸಿ ತಂಡವು ಟ್ರೋಫಿಗೆ ಮುತ್ತಿಡುವ ಸಾಧ್ಯತೆಯೇ ಹೆಚ್ಚಿದೆ.

ಭಾರತದ ಅತ್ಯುತ್ತಮ ಫುಟ್‌ಬಾಲ್ ಆಟಗಾರ ಸುನಿಲ್ ಚೆಟ್ರಿ ಅವರ ಬಲ ಹೊಂದಿರುವ ಬಿಎಫ್‌ಸಿಯು ಪಾದಾರ್ಪಣೆ ಮಾಡಿದ ಮೊದಲ ಋತುವಿನಲ್ಲೇ ಐಎಸ್‌ಎಲ್ ಟೂರ್ನಿಯ ಫೈನಲ್ ಪ್ರವೇಶಿಸಿ ಸಾಧನೆ ಮಾಡಿದೆ. ಕಳೆದ ಕಳೆದ 10 ಪಂದ್ಯಗಳಲ್ಲಿ ಸೋಲೇ ಕಾಣದ ದಾಖಲೆ ತಂಡದ ಆಟಗಾರರಿಗೆ ನೈತಿಕ ಶಕ್ತಿ ತುಂಬಿದೆ. ಕೋಚ್ ಆಲ್ಪರ್ಟ್ ರೋಕಾ ಅವರ ಬಲ ತಂಡದ ಯಶಸ್ಸಿನ ಹಿಂದೆ ಇದೆ.

ಎರಡೂ ತಂಡದಲ್ಲೂ ಅತ್ಯುತ್ತಮ ಪ್ರತಿಭಾನ್ವಿತ ಆಟಗಾರರಿದ್ದು, ಟೂರ್ನಿಯಲ್ಲಿ ಈ ವರೆಗೆ ತೋರಿರುವ ಸಾಧನೆಯನ್ನು ಪರಿಗಣಿಸಿದಲ್ಲಿ ಬಿಎಫ್‌ಸಿ ಹೆಚ್ಚು ಬಲಯುತವಾಗಿ ಕಾಣುತ್ತಿದೆ. ಬಿಎಫ್‌ಸಿಯ ಸುನಿಲ್ ಚೆಟ್ರಿ ಮತ್ತು ಚೆನ್ನೈಯನ್ ಎಫ್‌ಸಿ ತಂಡದ ಜೆಜೆ ಲಾಲ್‌ಪೆಖ್ಲುವಾ ಮೇಲೆ ಎಲ್ಲರ ಗಮನ ಇರಲಿದೆ. ಇಬ್ಬರೂ ಸಹ ಭಾರತ ತಂಡದ ಆಟಗಾರರಾಗಿದ್ದು ಈಗ ಎದುರಾಳಿ ತಂಡಗಳಿಗೆ ಆಡಲಿದ್ದಾರೆ.

ಒಟ್ಟಾರೆ ಮೇಲ್ನೋಟಕ್ಕೆ ಎರಡೂ ತಂಡಗಳು ಸಮಬಲದಂತೆ ಗೋಚರಿಸಿದರೂ ಕೂಡ ಈವರೆಗೆ ಟೂರ್ನಿಯಲ್ಲಿ ತೋರಿರುವ ಸಾಧನೆ ಹಾಗೂ ತವರಿನ ನೆಲದಲ್ಲಿ ಬಿಎಫ್‌ಸಿ ತಂಡದ ಸಾಧನೆಯನ್ನು ಪರಿಗಣಿಸಿದಲ್ಲಿ ಬಿಎಫ್‌ಸಿಯೇ ಗೆಲ್ಲುವ ಮೆಚ್ಚಿನ ತಂಡವಾಗಿದೆ.

Story first published: Saturday, March 17, 2018, 18:07 [IST]
Other articles published on Mar 17, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X