Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ISL: ಬೆಂಗಳೂರು ಎಫ್‌ಸಿಗೆ ಭರ್ಜರಿ ಜಯ

ಭರವಸೆಯ ಆಟಗಾರ ರಯಾನ್ ವಿಲಿಯಮ್ಸ್ ಅವರು ಬಾರಿಸಿದ ಒಂದು ಗೋಲಿನ ಸಹಾಯದಿಂದ ಬೆಂಗಳೂರು ಫುಟ್ಬಾಲ್‌ ಕ್ಲಬ್‌ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌)ನಲ್ಲಿ 1-0 ರಿಂದ ಜೆಮ್ಶೆಡ್‌ಪುರ ಎಫ್‌ಸಿ ತಂಡವನ್ನು ಮಣಿಸಿ ಪೂರ್ಣ ಅಂಕವನ್ನು ಕಲೆ ಹಾಕಿದೆ. ಈ ಗೆಲುವಿನ ಮೂಲಕ ಬೆಂಗಳೂರು ಎಫ್‌ಸಿ ಲೀಗ್‌ನಲ್ಲಿ ಆಡಿದ 12 ಪಂದ್ಯಗಳಲ್ಲಿ 5 ಜಯ, 5 ಸೋಲು, 2 ಡ್ರಾ ಸಾಧಿಸಿದ್ದು 20 ಅಂಕಗಳಿಂದ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯದಲ್ಲಿ ಸೋಲು ಕಂಡರೂ ಜೆಮ್ಶೆಡ್‌ಪುರ ಎಫ್‌ಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಆರಂಭದಿಂದಲೂ ಆಕ್ರಮಣಕಾರಿ ಆಟವನ್ನು ಆಡುವತ್ತ ಚಿತ್ತ ನೆಟ್ಟ ಬೆಂಗಳೂರು ತಂಡ, ಚೆಂಡಿನ ಮೇಲೆ ಹಿಡಿತ ಸಾಧಿಸಲು ಆರಂಭದಲ್ಲಿ ಕೊಂಚ ಹಿಂದೆ ಬಿದ್ದಿತು. ಆದರೆ ಎದುರಾಳಿಗೂ ಹೆಚ್ಚಿನ ಅವಕಾಶವನ್ನು ನೀಡದೆ ಸಾಗಿದ ಬಿಎಫ್‌ಸಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿತು. ಮೊದಲಾವಧಿಯ ಕೊನೆಯ ಹಂತದಲ್ಲಿ ಬಿಎಫ್‌ಸಿ ಮುನ್ನಡೆ ಸಾಧಿಸುವ ಕನಸು ಫಲಿಸಿತು.

BFC vs JFC

38ನೇ ನಿಮಿಷದಲ್ಲಿ ಸಹ ಆಟಗಾರ ನೀಡಿದ ಪಾಸ್‌ನ್ನು ಪಡೆದ ರಯಾನ್ ವಿಲಿಯಮ್ಸ್ ಅಮೋಘ ಕಾಲ್ಚಳಕದ ಪ್ರದರ್ಶನ ನೀಡಿದರು. ಇವರು ಆರಂಭದಲ್ಲಿ ಎಡಗಾಲಿನಿಂದ ಚೆಂಡನ್ನು ತಡೆದು ಬಲಗಾಲಿನಿಂದ ಚೆಂಡನ್ನು ಗೋಲು ಪೆಟ್ಟಿಗೆಯ ಒಳಕ್ಕೆ ನೂಕುವಲ್ಲಿ ಸಫಲರಾದರು. ಇವರು ಎದುರಾಳಿ ತಂಡದ ಮೂವರು ರಕ್ಷಣಾ ಆಟಗಾರರು ಮುಂದಗಡೆ ಇದ್ದರೂ ಅವರನ್ನು ವಂಚಿಸಿ ಗೋಲು ಬಾರಿಸಿದರು. ಪರಿಣಾಮ ಬಿಎಫ್‌ಸಿ ಪಂದ್ಯದಲ್ಲಿ ಮುನ್ನಡೆ ಸಾಧಿಸಲು ಸಹಾಯಕವಾಯಿತು.

ಗೋಲ್‌ ಗಳಿಸಲು ಪರದಾಟ

ಮೊದಲಾವಧಿಯ ಅಂತ್ಯ ಹಾಗೂ ಹೆಚ್ಚುವರಿ ಸಮಯದಲ್ಲೂ ಗೋಲು ಗಳಿಸಿ ಅಂತರವನ್ನು ಸಮನಾಗಿಸುವ ಜೆಮ್ಶೆಡ್‌ಪುರ ಆಸೆ ಫಲಿಸಲಿಲ್ಲ. ಪರಿಣಾಮ ಮೊದಲಾವಧಿ ಬೆಂಗಳೂರು ತಂಡದ ಪಾಲಾಯಿತು.

ಎರಡನೇ ಅವಧಿಯಲ್ಲಿ ಮುನ್ನಡೆಯೊಂದಿಗೆ ಕಣಕ್ಕೆ ಇಳಿದ ಬೆಂಗಳೂರು ಸ್ಥಿರ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿತು. ಜೆಮ್ಶೆಡ್‌ಪುರ, ಬಿಎಫ್‌ಸಿ ತಂಡದ ರಕ್ಷಣಾ ವಿಭಾಗಕ್ಕೆ ಶಾಕ್ ನೀಡಿ ಒಂದು ಗೋಲು ಬಾರಿಸುವ ಇರಾದೆ ಹೊಂದಿತ್ತು. ಆದರೆ ಬೆಂಗಳೂರು ತಂಡ ಕೊನೆಯ ಹಂತದ ವರೆಗೂ ಉತ್ತಮ ಪ್ರದರ್ಶನ ನೀಡಿ ಜಯ ಸಾಧಿಸಿತು.

ಬೆಂಗಳೂರು ಎಫ್‌ಸಿ ತನ್ನ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಚೆನ್ನೈಯಿನ್ ಎಫ್‌ಸಿ ವಿರುದ್ಧ ಆಡಲಿದೆ. ಚೆನ್ನೈಯಿನ್ ಎಫ್‌ಸಿ ಈ ಲೀಗ್‌ನಲ್ಲಿ 13ನೇ ಸ್ಥಾನದಲ್ಲಿದೆ.

Story first published: Saturday, May 9, 2026, 22:14 [IST]
Other articles published on May 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+