ಫುಟ್ಬಾಲ್ ದಂತಕತೆ ಫೀಲೆ ಈ ದಾಖಲೆಗೆ ಐವತ್ತು ವರ್ಷ
ಫುಟ್ಬಾಲ್ ಲೋಕದ ಜೀವಂತ ದಂತಕತೆ ಫೀಲೆ ದಾಖಲೆಗಳ ಮೇಲೆ ದಾಖಲೆ ಬರೆದವರು. ಫುಟ್ಬಾಲ್ನ ಪ್ರತಿ ಪ್ರೇಮಿಯೂ ಫೀಲೆಯನ್ನು ಆರಾಧಿಸುತ್ತಾರೆ. ಫೀಲೆ ಅಂಗಳದಿಂದ ದೂರ ಸರಿದು ಹಲವು ದಶಕಗಳೇ ಕಳೆದಿದೆ ಹಾಗಿದ್ದರೂ ಫೀಲೆ ಅವರ ಆರಾಧನೆ ಅವರ ಮೇಲಿನ ಅಭಿಮಾನ ಇನ್ನೂ ಹಾಗೇ ಇದೆ. ಅಂತಾ ಪೀಲೆ ಮಾಡಿದ ಆ ಒಂದು ದಾಖಲೆಗೆ ಆಗಿ ಇವತ್ತಿಗೆ ಸರಿಯಾಗಿ ಐವತ್ತು ವರ್ಷ ಕಳೆದಿದೆ.
ಫೀಲೆ 1000ನೇ ಗೋಲು ಬಾರಿಸಿ ಇಂದಿಗೆ ಐದು ದಶಕಗಳೇ ಕಳೆಗಿದೆ. ನವೆಂಬರ್ 19, 1969ರಲ್ಲಿ ಈ ದಾಖಲೆಯನ್ನು ಫೀಲೆ ಮಾಡಿದ್ದಾರೆ. ಈ ದಾಖಲೆ ಮಾಡುವ ಸಂದರ್ಭದಲ್ಲಿ ಫೀಲೆ ವಯಸ್ಸಿ ಕೇವಲ 29 ವರ್ಷ ಅನ್ನೋದು ಮತ್ತೊಂದು ವಿಶೇಷ.
ಬ್ರಝಿಲ್‌ನ ರಿಯೋ ಡಿ ಜನೈರೋದ ಮರಕಾನಾ ಸ್ಟೇಡಿಯಮ್‌ನಲ್ಲಿ ಈ ಐತಿಹಾಸಿಕ ಪಂದ್ಯ ನಡೆದಿತ್ತು. ಫೀಲೆ ಅವರ ನೆಚ್ಚಿನ ತಂಡವಾದ ಸ್ಯಾಂಟೋಸ್ ಮತ್ತು ಸ್ಥಳೀಯ ವಾಸ್ಕೋ ಡಿ ಗಾಮಾ ತಂಡದ ವಿರುದ್ಧದ ಪಂದ್ಯದಲ್ಲಿ ಈ ಸಾಧನೆಯನ್ನು ಫೀಲೆ ಮಾಡಿದ್ದಾರೆ. ಪೆನಾಲ್ಟಿ ಕಾರ್ನರ್ ಮೂಲಕ ಈ ಸಾಧನೆಯನ್ನು ಫೀಲೆ ಸಂಪೂರ್ಣಗೊಳಿಸಿದರು.ಈ ಸಂದರ್ಭದಲ್ಲಿ ಸ್ಟೇಡಿಯಮ್‌ನಲ್ಲಿ ನೆರೆದಿದ್ದ ಅಷ್ಟೂ ಜನ ಎದ್ದು ನಿಂತು ಗೌರವ ಸಲ್ಲಿಸಿದ್ದರು. ಫೀಲೆ ಅವರ ಈ ಸಾಧನೆಯನ್ನು ಕಣ್ತುಂಬಿಕೊಳ್ಳಲು 65157ಜನ ಆಗಮಿಸಿದ್ದರು. ಈ ಪಂದ್ಯವನ್ನು ಫೀಲೆ ಪ್ರತಿನಿಧಿಸಿದ್ದ ಸ್ಯಾಂಟೋಸ್ ತಂಡ 2-1 ಗೋಲ್‌ಗಳಿಂದ ಗೆದ್ದುಕೊಂಡಿತ್ತು.

ಫೀಲೆ ಅವರು ಬಾರಿಸಿರುವ ಗೋಲ್‌ಗಳ ಸಂಖ್ಯೆ ಇಂದೂ ಚರ್ಚಾಸ್ಪದ ವಿಷಯವಾಗಿದೆ. ಆದರೆ ಪೀಲೆ ಸಾಧನೆಯ ಬಗ್ಗೆ, ಗೋಲು ಬಾರಿಸುತ್ತಿದ್ದ ರೀತಿಯ ಬಗ್ಗೆ, ಅವರ ಪ್ರತಿಭೆಯ ಬಗ್ಗೆ ಫುಟ್ಬಾಲ್ ಅಭಿಮಾನಿಗಳು ಫೀಲೆಗೆ ವಿಶೇಷವಾದ ಸ್ಥಾನವನ್ನು ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications