FIFA World Cup 2026: ತಾಯಿಗಾಗಿ ಕಣ್ಣೀರಿಟ್ಟ ಮಗ, ಸ್ಪಂದಿಸಿದ ಅಮೆರಿಕ ಸರ್ಕಾರ; ತುರ್ತು ವೀಸಾ ಭಾಗ್ಯ
2026ರ ಫಿಫಾ ವಿಶ್ವಕಪ್ ಟೂರ್ನಿಯು ಆರಂಭದಲ್ಲೇ ಸಂಚಲನ ಮೂಡಿಸಿದೆ. ಕ್ರೀಡಾಂಗಣದಲ್ಲಿ ಕಂಡುಬರುವ ಜಿದ್ದಾಜಿದ್ದಿನ ಕದನಗಳ ನಡುವೆ, ದೊಡ್ಡ ಫುಟ್ಬಾಲ್ ವೇದಿಕೆ ಹೇಗೆ ಮಾನವೀಯ ಸಂಬಂಧಗಳ ಮಧುರ ಸಂಗಮವಾಗಬಲ್ಲುದು ಎಂಬುದಕ್ಕೆ ಜಾಗತಿಕ ಮಟ್ಟದಲ್ಲಿ ಅತ್ಯುತ್ತಮ ನಿದರ್ಶನವೊಂದು ಸಿಕ್ಕಿದೆ. ಜಗತ್ತಿನ ಬಲಿಷ್ಠ ತಂಡಗಳಲ್ಲಿ ಒಂದಾದ ಸ್ಪೇನ್ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಕೇಪ್ ವರ್ಡೆ ದೇಶದ 40 ವರ್ಷದ ಹಿರಿಯ ಗೋಲ್‌ಕೀಪರ್ ವೋಜಿನ್ಹಾ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ.
ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಗೋಲ್‌ಕೀಪರ್ ವೋಜಿನ್ಹಾ ಸೊಗಸಾದ ಪ್ರದರ್ಶನ ನೀಡಿ, ಎದುರಾಳಿ ತಂಡ ಗೋಲು ಬಾರಿಸಿದಂತೆ ತಡೆಯುವಲ್ಲಿ ಸಫಲರಾದರು. ಪಂದ್ಯದ ಬಳಿಕ ವೋಜಿನ್ಹಾ ಮೈದಾನದಲ್ಲೇ ಕಣ್ಣೀರು ಹಾಕಿದ್ದು ಜಗತ್ತಿನಾದ್ಯಂತ ಲಕ್ಷಾಂತರ ಕ್ರೀಡಾಭಿಮಾನಿಗಳನ್ನು ಭಾವುಕರನ್ನಾಗಿಸಿತ್ತು. ತಮಗಾಗಿ ಜೀವವನ್ನೇ ಸವೆಸಿದ ಹೆತ್ತ ತಾಯಿ ಅನಾ ಕ್ಯಾಂಡಿಡಾ ಇವೊರಾ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಆಗಲಿಲ್ಲ ಎಂಬ ಬೇಸರ ಕಣ್ಣಿರಾಗಿ ಹರಿಯಿತು.

ವಿಶ್ವಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೋಜಿನ್ಹಾ ಅವರ ಗೋಲ್ ರಕ್ಷಣೆಯ ವಿಡಿಯೋ ಕ್ಲಿಪ್‌ಗಳು ಭಾರಿ ವೈರಲ್ ಆಗುತ್ತಿವೆ. ಆದರೆ ಅಂತಹ ದೊಡ್ಡ ಸಾಧನೆ ಮಾಡಿದರೂ ಕ್ರೀಡಾಂಗಣದ ಗ್ಯಾಲರಿಯಲ್ಲಿ ತಾಯಿಯ ಅನುಪಸ್ಥಿತಿ ಅವರನ್ನು ತೀವ್ರವಾಗಿ ಕಾಡಿತ್ತು. ಈ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆದವು. ಗೋಲ್‌ಕೀಪರ್ ವೋಜಿನ್ಹಾ ಅವರ ತಾಯಿ ತಾಂತ್ರಿಕ ವೀಸಾ ತೊಂದರೆಗಳಿಂದಾಗಿ ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಾಗಿರಲಿಲ್ಲ.
ಸರ್ಕಾರದ ಸ್ಪಂದನೆ
ಫುಟ್‌ಬಾಲ್ ಅಭಿಮಾನಿಗಳಿಂದ ಶುರುವಾದ ಈ ಕೂಗು ಕೊನೆಗೆ ಆಡಳಿತಗಾರರ ಬಾಗಿಲನ್ನು ತಟ್ಟಿತು.ಈ ಭಾವನಾತ್ಮಕ ಕ್ಷಣಕ್ಕೆ ತೀವ್ರವಾಗಿ ಸ್ಪಂದಿಸಿದ ಅಮೆರಿಕ ಸಂಸತ್ತಿನ ಡೆಮಾಕ್ರಟಿಕ್ ಪಕ್ಷದ ಪ್ರಮುಖ ನಾಯಕರಾದ ಹಕೀಮ್ ಜೆಫ್ರಿಸ್, ತಕ್ಷಣವೇ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ಮಾತುಕತೆ ನಡೆಸಿ ತಾಯಿಗೆ ತುರ್ತು ವೀಸಾ ಕಲ್ಪಿಸುವಂತೆ ಕೋರಿದ್ದಾರೆ.
ವಿದೇಶಾಂಗ ಇಲಾಖೆಯ ಉನ್ನತ ಮಟ್ಟದ ಸೂಚನೆಯ ಮೇರೆಗೆ ಕೇಪ್ ವರ್ಡೆ ದೇಶದ ರಾಜಧಾನಿ ಪ್ರೈಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮೆರಿಕದ ವೀಸಾ ವಿಭಾಗದ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಿದರು. ಅವರು ಸ್ವತಃ ವೋಜಿನ್ಹಾ ತಾಯಿ ಅನಾ ಕ್ಯಾಂಡಿಡಾ ಇವೊರಾ ಅವರ ನಿವಾಸಕ್ಕೆ ಭೇಟಿ ಕೊಟ್ಟು ಅಗತ್ಯ ದಾಖಲೆಗಳ ತ್ವರಿತ ಪರಿಶೀಲನೆ ನಡೆಸಿದರು. ಈ ಪ್ರಕರಣದಲ್ಲಿ ವೀಸಾ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಬುಧವಾರದ ಒಳಗಾಗಿ ತುರ್ತು ವೀಸಾವನ್ನು ನೀಡಿತು.
ವಿಐಪಿ ಸವಲತ್ತು
ವೋಜಿನ್ಹಾ ಅವರ ತಾಯಿ ಅನಾ ಕ್ಯಾಂಡಿಡಾ ಇವೊರಾ ಅವರು ಸುರಕ್ಷಿತವಾಗಿ ಅಗತ್ಯವಿರುವ ಸಂಪೂರ್ಣ ವ್ಯವಸ್ಥೆಯನ್ನು ಅಧಿಕಾರಿಗಳೇ ಪ್ರಾಯೋಜಿಸಿದ್ದಾರೆ. ವಿಮಾನ ಸೌಕರ್ಯದಿಂದ ಹಿಡಿದು ಭದ್ರತೆಯವರೆಗೆ ಅಮೆರಿಕದ ಸರಕಾರವೇ ಇಡೀ ಹೊಣೆ ಹೊತ್ತುಕೊಂಡಿದ್ದು ಕ್ರೀಡಾಭಿಮಾನಿಗಳ ಮನ ಗೆದ್ದಿದೆ. ಮಿಯಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಲೀಗ್ ಪಂದ್ಯದಲ್ಲಿ ಬಲಿಷ್ಠ ಉರುಗ್ವೆ ತಂಡದ ಎದುರು ಕೇಪ್ ವರ್ಡೆ ರಾಷ್ಟ್ರ ಕಣಕ್ಕಿಳಿಯಲಿದೆ. ಈ ಪಂದ್ಯವನ್ನು ವೋಜಿನ್ಹಾ ಅವರ ತಾಯಿ ವಿಐಪಿ ಗ್ಯಾಲರಿಯಲ್ಲಿ ಕುಳಿತುಕೊಂಡು ತಾಯಿ ಮಗನನ್ನು ಹುರಿದುಂಬಿಸುತ್ತಿದ್ದಾರೆ. ಈ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications