ಛೆಟ್ರಿಗೆ ಬೆಂಗಳೂರು ಎಫ್.ಸಿ.ಯಿಂದ ಎರಡು ಪ್ರಶಸ್ತಿ ಪ್ರದಾನ

ಬೆಂಗಳೂರು, ಮೇ 18: ಬೆಂಗಳೂರು ಎಫ್.ಸಿ. ನಾಯಕ ಸುನಿಲ್ ಛೆಟ್ರಿ ಅವರಿಗೆ 'ಬೆಂಗಳೂರು ಫುಟ್ಬಾಲ್ ಕ್ಲಬ್ ಅವಾರ್ಡ್ಸ್'ನಲ್ಲಿ ನೀಡಲಾಗುವ 5ನೇ ಸೀಸನ್ ನ 'ಅತೀ ಹೆಚ್ಚಿನ ಗೋಲ್ ಸಾಧಕ' ಮತ್ತು 'ವರ್ಷದ ಆಟಗಾರ' ಪ್ರಶಸ್ತಿಗಳು ಒಲಿದಿವೆ. ಕ್ರಿಕೆಟ್ ದಿಗ್ಗಜ ಮತ್ತು ಬೆಂಗಳೂರು ಫುಟ್ಬಾಲ್ ಕ್ಲಬ್ ಬ್ರ್ಯಾಂಡ್ ಅಂಬಾಸಿಡರ್ ರಾಹುಲ್ ದ್ರಾವಿಡ್ ಅವರು ಛೆಟ್ರಿಗೆ ಬಹುಮಾನ ವಿತರಿಸಿದರು.
ಇದೇ ಸಂದರ್ಭ ಈ ಋತುಮಾನದ ಅಂತಿಮ ಸ್ಪರ್ಧೆಯಲ್ಲಿ ಬೆಂಗಳೂರು ತಂಡ ಅಬಹಾನಿ ಢಾಕಾ ತಂಡದ ವಿರುದ್ಧ 4-0 ಭರ್ಜರಿ ಗೆಲುವು ದಾಖಲಿಸಿದ ಖುಷಿಯೊಂದಿಗೆ 'ದ ಬ್ಲ್ಯೂ' (ಬೆಂಗಳೂರು ಎಫ್.ಸಿ. ತಂಡದ ಹೆಸರು) ತಂಡದ ಮುಖ್ಯ ತರಬೇತುದಾರ ಅಲ್ಬರ್ಟ್ ರೋಕಾ ಅವರು ತಂಡಕ್ಕೆ ವಿದಾಯ ಹೇಳಿದ್ದಾರೆ.
ಒಟ್ಟು ಮೂರು ಸ್ಪರ್ಧೆಗಳಲ್ಲಿ 24 ಗೋಲುಗಳನ್ನು ದಾಖಲಿಸಿದ ಸಾಧನೆಗಾಗಿ ಛೆಟ್ರಿ ಅಧಿಕ ಗೋಲ್ ಗಳಿಸಿದ ಸಾಧಕ ಪ್ರಶಸ್ತಿ ತನ್ನದಾಗಿಸಿಕೊಂಡರು. ಅಧಿಕ ಗೋಲ್ ದಾಖಲಿಸಿದವರ ಪಟ್ಟಿಯಲ್ಲಿ ಛೆಟ್ರಿಯ ಬೆನ್ನ ಹಿಂದಿರುವ ಮಿಕು ಅವರು ಒಟ್ಟು 20 ಗೋಲ್ ಸಾಧನೆ ಹೊಂದಿದ್ದರು.
2016ರಲ್ಲಿ ಬೆಂಗಳೂರು ತಂಡವನ್ನು ಸೇರಿಕೊಂಡು ಫೆಡರೇಷನ್ ಕಪ್ ಮತ್ತು ಸೂಪರ್ ಕಪ್ ಪ್ರಶಸ್ತಿಯನ್ನು ಗೆಲ್ಲಿಸಿದ ಕೀರ್ತಿಗೆ ಪಾತ್ರರಾಗಿರುವ ದ ಬ್ಲ್ಯೂ ತಂಡದ ಕೋಚ್ ರೋಕಾ ಅವರ ಒಪ್ಪಂದ ಈ ತಿಂಗಳಿಗೆ ಮುಗಿಯಲಿದ್ದು, ಅವರು ಮುಂದುವರಿಯುವ ಬದಲು ಗೆಲುವಿನ ವಿದಾಯ ಹೇಳಲು ನಿರ್ಧರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications