ಅಧಿಕ ಗೋಲ್ ದಾಖಲೆಯಲ್ಲಿ ಲಿಯೋನೆಲ್ ಮೆಸ್ಸಿ ಮೀರಿಸಿದ ಸುನಿಲ್ ಛೆಟ್ರಿ

ಅಬು ಧಾಬಿ, ಜನವರಿ 7: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬು ಧಾಬಿಯಲ್ಲಿರುವ ಅಲ್-ನಹ್ಯಾನ್ ಸ್ಟೇಡಿಯಂನಲ್ಲಿ ಭಾನುವಾರ (ಜನವರಿ 6) ನಡೆದ ಎಎಫ್‌ಸಿ ಏಷ್ಯನ್ ಕಪ್ 2019 ಫುಟ್ಬಾಲ್ ಪಂದ್ಯದಲ್ಲಿ ಭಾರತ ಪುರುಷರ ತಂಡ ಥೈಲ್ಯಾಂಡ್ ತಂಡವನ್ನು 4-1ರಿಂದ ಸೋಲಿಸಿದೆ. ಈ ಗೆಲುವು ಭಾರತದ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಅವರನ್ನು ವಿಶ್ವ ಮಟ್ಟದಲ್ಲಿ ಮೇಲಕ್ಕೆ ಎತ್ತಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಛೆಟ್ರಿ ಎರಡು ಗೋಲ್‌ಗಳನ್ನು ಬಾರಿಸಿ ತಂಡದ ಗೆಲುವಿಗೆ ಕಾರಣವಾಗಿದ್ದರು. ಸುನಿಲ್ ಛೆಟ್ರಿಯ ಎರಡು ಗೋಲ್‌ಗಳ ಸಾಧನೆ ಅವರನ್ನು ವಿಶ್ವದ ಅಧಿಕ ಗೋಲ್ ಸರದಾರರಲ್ಲಿ ಎರಡನೇ ಸ್ಥಾನದಲ್ಲಿ ತಂದು ನಿಲ್ಲಿಸಿದೆ.
ಥೈಲ್ಯಾಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ವಿಶ್ವದ ಸಕ್ರಿಯ ಫುಟ್ಬಾಲ್ ಆಟಗಾರರಲ್ಲಿ ಪೋರ್ಚುಗಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ 85 ಗೋಲ್‌ಗಳೊಂದಿಗೆ ಅಧಿಕ ಗೋಲ್ ಸಾಧಕರಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ ಮತ್ತು ಭಾರತದ ಛೆಟ್ರಿ ತಲಾ 65 ಗೋಲ್‌ಗಳಿಂದ ದ್ವಿತೀಯ ಸ್ಥಾನದಲ್ಲಿದ್ದರು.
ಏಷ್ಯನ್ ಕಪ್ ನಲ್ಲಿ ಥೈಲ್ಯಾಂಡ್ ವಿರುದ್ಧ ಬಾರಿಸಿದ 2 ಗೋಲ್‌ಗಳಿಂದ ಈಗ ಒಟ್ಟು 67 ಗೋಲ್ ಸಾಧನೆ ಹೊಂದಿರುವ ಸುನಿಲ್ ಛೆಟ್ರಿ, ಸಕ್ರಿಯವಾಗಿರುವ ವಿಶ್ವದ ಆಟಗಾರರಲ್ಲಿ ಅಧಿಕ ಗೋಲ್‌ಗಾಗಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ, ಮೆಸ್ಸಿ ಅವರನ್ನು 3ನೇ ಸ್ಥಾನಕ್ಕೆ ತಳ್ಳಿದ್ದಾರೆ.
ಏಷ್ಯನ್ ಕಪ್ ನಲ್ಲಿ ಥೈಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಛೆಟ್ರಿ 27, 46 ನಿಮಿಷಗಳಲ್ಲಿ, ಅನಿರುದ್ಧ್ ಥಾಪಾ 68, ಜೆಜೆ ಲಾಲ್ಪೆಕ್ಲುವಾ 80ನೇ ನಿಮಿದಲ್ಲಿ ಗೋಲ್ ಬಾರಿಸಿ ತಂಡಕ್ಕೆ ಗೆಲುವು ತಂದಿದ್ದರು. ಥೈಲ್ಯಾಂಡ್ ಪರ ತೆರಸಿಲ್ ಡ್ಯಾಂಗ್ಡಾ 33ನೇ ನಿಮಿಷದಲ್ಲಿ ಗೋಲ್ ಉಡುಗೊರೆ ನೀಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications