Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಗಳಿಗೆ ಆಸ್ಪತ್ರೆಯಿಂದಲೇ ಧನ್ಯವಾದ ಹೇಳಿದ ಕ್ರಿಶ್ಚಿಯನ್ ಎರಿಕ್ಸನ್

Christian Eriksen sends public thank you message from hospital

ಕೋಪನ್ ಹ್ಯಾಗನ್: ಯೂನಿಯನ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಶನ್ (ಯುಎಎಫ್‌ಸಿಎ) ಯೂರೋ 2020 ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯದ ವೇಳೆ ಡೆನ್ಮಾರ್ಕ್ ಮಿಡ್‌ ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸನ್ ಹೃದಯಾಘಾತದಿಂದಾಗಿ ಕುಸಿದುಬಿದ್ದಿದ್ದ ಘಟನೆ ನಡೆದಿತ್ತು. ಈಗ ಎರಿಕ್ಸನ್ ಚೇತರಿಸಿಕೊಂಡಿದ್ದಾರೆ.

ಜೂನ್ 12ರ ಶನಿವಾರ ಯೂರೋ 2020 ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯದಲ್ಲಿ ಕ್ರಿಶ್ಚಿಯನ್ ಎರಿಕ್ಸನ್ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಈಗ ಎರಿಕ್ಸನ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದಲೇ ಅಭಿಮಾನಿಗಳಿಗೆ ತುಂಬು ಮನದ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Christian Eriksen sends public thank you message from hospital

ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿಕೊಂಡಿರುವ ಎರಿಕ್ಸನ್, 'ಎಲ್ಲರಿಗೂ ಹಲೋ, ವಿಶ್ವದಾದ್ಯಂತ ಬಂದ ನಿಮ್ಮ ಸಿಹಿಯಾದ ಮತ್ತು ಅದ್ಭುತವಾದ ಪ್ರೀತಿ-ಆದರ-ಪ್ರಾರ್ಥನೆಗೆ ತುಂಬು ಮನದ ಧನ್ಯವಾದಗಳು. ನಿಮ್ಮ ಬೆಂಬಲ ನನಗೆ, ನನ್ನ ಕುಟುಂಬಕ್ಕೆ ಬಹಳ ಅಗತ್ಯವಿತ್ತು. ನಾನೀಗ ಚೆನ್ನಾಗಿದ್ದೇನೆ. ಆಸ್ಪತ್ರೆಯಲ್ಲಿ ಇನ್ನೂ ಕೆಲವು ಪರೀಕ್ಷೆಗಳಿಗೆ ಒಳಪಡಬೇಕಿದೆ. ಆದರೆ ನಾನು ಹುಷಾರಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

ಮೈದಾನದಲ್ಲಿ ಎರಿಕ್ಸನ್ ಕುಸಿದು ಬಿದ್ದಾಗ ಡೆನ್ಮಾರ್ಕ್-ಫಿನ್‌ಲ್ಯಾಂಡ್ ಪಂದ್ಯವನ್ನು ಅಮಾನತುಗೊಳಿಸಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಟದ ವೇಳೆ ಕುಸಿದು ಬಿದ್ದಿದ್ದ ಎರಿಕ್ಸನ್ ಬೇಗ ಗುಣಮುಖರಾಗಲೆಂದು ವಿಶ್ವದಗಲದ ಕ್ರೀಡಾಭಿಮಾನಿಗಳು ಪ್ರಾರ್ಥಿಸಿದ್ದರು.

Story first published: Tuesday, June 15, 2021, 13:54 [IST]
Other articles published on Jun 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+