ಫುಟ್ಬಾಲ್ ಸ್ಟಾರ್ ರೊನಾಲ್ಡೋಗೆ 23 ತಿಂಗಳುಗಳ ಜೈಲುವಾಸ!

ಮ್ಯಾಡ್ರಿಡ್, ಜನವರಿ 22 : ಅತ್ಯಾಚಾರ ಪ್ರಕರಣವೊಂದರಲ್ಲಿ ಸ್ಪೇನಿನ ಫುಟ್ಬಾಲ್ ತಾರೆ ಕ್ರಿಸ್ಚಿಯಾನೋ ರೊನಾಲ್ಡೋ ಅವರಿಗೆ 23 ತಿಂಗಳುಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ. ಜತೆಗೆ ತೆರಿಗೆ ವಂಚನೆ ಪ್ರಕರಣದಲ್ಲಿ 18.8 ಮಿಲಿಯನ್ ದಂಡ ವಿಧಿಸಲಾಗಿದೆ. ಆದರೆ, ರೊನಾಲ್ಡೋ ಜೈಲಿನಲ್ಲಿರಬೇಕಾಗಿಲ್ಲ.
33 ವರ್ಷ ವಯಸ್ಸಿನ ರೊನಾಲ್ಡೊ ಅವರು ಸ್ಪೇನ್ ನಲ್ಲಿ 2011 ರಿಂದ 2014ರ ಅವಧಿಯಲ್ಲಿ ನಾಲ್ಕು ಪ್ರಕರಣದಲ್ಲಿ ಸಿಲುಕಿದ್ದಾರೆ. ಸ್ಪೇನಿನ ಕ್ಲಬ್ ರಿಯಲ್ ಮ್ಯಾಡ್ರೀಡ್ ಪರ ಆಡುವಾಗ ತೆರಿಗೆ ವಂಚಿಸಿ, ಬೇರೆಡೆ ಅಕ್ರಮವಾಗಿ ಹೂಡಿಕೆ ಮಾಡಿರುವ ಆರೋಪವಿದೆ.
ಆದರೆ, ರೊನಾಲ್ಡೋ ಅವರು 23 ತಿಂಗಳ ಸೆರೆಮನೆ ವಾಸ ಅನುಭವಿಸಬೇಕಾಗಿಲ್ಲ. ಸ್ಪೇನಿನ ಕಾನೂನಿನ ಪ್ರಕಾರ, ಮೊದಲ ಬಾರಿ ಅಪರಾಧಿ ಎನಿಸಿಕೊಂಡಿರುವುದರಿಂದ ದಂಡ ಕಟ್ಟಿದರೆ ಸಾಕು. ಕೋರ್ಟಿಗೆ ಬಂದು ತನ್ನ ತಪ್ಪು ಒಪ್ಪಿಕೊಂಡ ರೊನಾಲ್ಡೋ ಅವರ ಜತೆ ಗೆಳತಿ ಜಾರ್ಜಿನಾ ರೊಡ್ರಿಗೇಜ್ ಕೂಡಾ ಇದ್ದರು.
ಕಳೆದ ವರ್ಷ ಮ್ಯಾಡ್ರಿಡ್ ತೊರೆದು ಯುವೆಂಟೆಸ್ ಸೇರಿದ್ದಾರೆ. 112 ಮಿಲಿಯನ್ ಯುರೋ ವರ್ಗಾವಣೆ ಮೊತ್ತ ಇದಾಗಿತ್ತು. ಕಳೆದ ಸೋಮವಾರ ಪೆನಾಲ್ಟಿ ಮಿಸ್ ಮಾಡಿದರೂ ಸಿರಿಯಾ 'ಎ' ಪಂದ್ಯದಲ್ಲಿ ಶಿವಿವೋ ವಿರುದ್ಧ ಮ್ಯಾಡ್ರಿಡ್ 3-0 ರ ಜಯ ಗಳಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications