Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಾಮಾಜಿಕ ತಾಣದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅಬ್ಬರ ಜೋರು: ದಾಖಲೆಯ ಪುಟ ಸೇರಿದ ಸ್ಟಾರ್

ಕ್ರಿಸ್ಟಿಯಾನೋ ರೊನೊಲ್ಡೊ ಫುಟ್ಬಾಲ್‌ ಜಗತ್ತಿನಲ್ಲಿ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಿದ್ದಾರೆ. ಈಗಲೂ ನಿರ್ಮಿಸುತ್ತಲೇ ಇರುತ್ತಾರೆ. ಇವರು ಮೈದನಾಕ್ಕೆ ಇಳಿದರೆ ದಾಖಲೆ ಸೃಷ್ಟಿಯಾಗುತ್ತದೆ. ಆದರೆ ರೊನಾಲ್ಡೊ ಮೈದಾನಕ್ಕೆ ಇಳಿಯದೆ ದಾಖಲೆಯ ಪುಟಕ್ಕೆ ತಮ್ಮ ಹೆಸರು ನಮೂದಿಸಿದ್ದಾರೆ.

ಕ್ರಿಸ್ಟಿಯಾನೋ ರೊನೊಲ್ಡೊ ಇತ್ತೀಚಿಗೆ ತಮ್ಮದೆ ಆದ ಯೂಟ್ಯೂಬ್‌ ಚಾನೆಲ್‌ ತೆರೆದಿದ್ದರು. ಈ ಚಾನೆಲ್‌ ಗಂಟೆಯಲ್ಲಿ ದಾಖಲೆಯ ಪುಟದಲ್ಲಿ ಸ್ಥಾನ ಪಡೆದಿತ್ತು. ಈಗ ರೊನೊಲ್ಡೊ ಸಮಾಜಿಕ ತಾಣದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

Cristiano Ronaldo Becomes First Athlete to Reach 1 Billion Followers on Social Media

ಪೊರ್ಚಗಲ್‌ ತಂಡದ ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಕ್ರೀಡಾ ಜಗತ್ತಿನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ರೊನಾಲ್ಡೊ ಸೋಷಿಯಲ್ ಮೀಡಿಯಾದಲ್ಲಿ ಒಂದು ಬಿಲಿಯನ್ ಫಾಲೋವರ್ಸ್‌ ಗಳ ಗಡಿಯನ್ನು ದಾಟಿದ್ದಾರೆ. ಈ ಮೂಲಕ ದಾಖಲೆಯ ಪುಟಕ್ಕೆ ಮತ್ತೆ ಎಂಟ್ರಿ ನೀಡಿದ್ದಾರೆ. ರೊನಾಲ್ಡೊ ಒಂದು ಬಿಲಿಯನ್ ಹಿಂಬಾಲಕರನ್ನು ಹೊಂದಿರುವ ವಿಶ್ವದ ಮೊದಲ ಅಥ್ಲೀಟ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

900 ಗೋಲು

ಹಲವು ಪ್ರತಿಷ್ಠಿತ ಕ್ಲಬ್‌ ಪರ ತಮ್ಮ ಕಾಲ್ಚಳಕ ತೋರಿರುವ ರೊನಾಲ್ಡೊ ಇತ್ತೀಚಿಗೆ ಅಲ್ ನಾಸರ್ ಕ್ಲಬ್ ಪರ ಆಡುವಾಗ ತಮ್ಮ ವೃತ್ತಿಜೀವನದ 900 ನೇ ಗೋಲು ಬಾರಿಸಿದ್ದಾರೆ. ಇತ್ತೀಚಿಗೆ ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್‌ ಲಾಂಚ್ ಮಾಡಿದ್ದರು. ಈ ಚಾನೆಲ್‌ ಗಂಟೆಗಳಲ್ಲಿ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದಿತ್ತು. ಈಗಾಗಲೇ ಸಮಾಜಿಕ ತಾಣಗಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಶ್ರೇಯ ಇವರದ್ದಾಗಿದೆ.

1 ಬಿಲಿಯನ್‌ ಫಾಲೋವರ್ಸ್‌

ರೊನಾಲ್ಡೊ ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಟ್ಟು 1 ಬಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಸಾಧನೆಯನ್ನು ಮಾಡಿದ ವಿಶ್ವದ ಮೊದಲ ಕ್ರೀಡಾಪಟು ಮಾತ್ರವಲ್ಲದೆ ಈ ಮಹಾನ್ ಸಾಧನೆ ಮಾಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

ಸಾಮಾಜಿಕ ತಾಣದಲ್ಲಿ ರೊನಾಲ್ಡೊ ಅಬ್ಬರ

ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ 600 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಇದ್ದು, ಎಕ್ಸ್‌ನಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅವರನ್ನು ಅನುಸರಿಸುತ್ತಾರೆ. ರೊನಾಲ್ಡೊ ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಚಂದಾದಾರರನ್ನು ಮತ್ತು ಯೂಟ್ಯೂಬ್‌ನಲ್ಲಿ 60 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.

ಇತ್ತೀಚಿಗೆ ರೊನಾಲ್ಡೊ ಯೂಟ್ಯೂಬ್ ಚಾನೆಲ್ ಪ್ರರಾಂಭಿಸಿದರು. ಅದರ ಚಂದಾದಾರರ ಸಂಖ್ಯೆ ಮೊದಲ ದಿನದಲ್ಲಿ 15 ಮಿಲಿಯನ್ ದಾಟಿದ್ದು, ಒಂದೇ ವಾರದಲ್ಲಿ ಈ ಸಂಖ್ಯೆ 50 ಮಿಲಿಯನ್ ತಲುಪಿತು.

ಅಭಿಮಾನಿಗಳಿಗೆ ಧನ್ಯವಾದ

ರೊನಾಲ್ಡೊ ಈ ದೊಡ್ಡ ಸಾಧನೆ ಮಾಡಿರುವ ಬಗ್ಗೆ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಫುಟ್ಬಾಲ್‌ ಆಟಗಾರ ಸಂದೇಶ ರವಾನಿಸಿದ್ದಾರೆ. 1 ಬಿಲಿಯನ್ ಅನುಯಾಯಿಗಳು! ಇದು ಕೇವಲ ಒಂದು ಸಂಖ್ಯೆಯಲ್ಲ. ಇದು ಆಟದ ಮತ್ತು ಅದರಾಚೆಗಿನ ಉತ್ಸಾಹ, ಸ್ಫೂರ್ತಿ ಮತ್ತು ಪ್ರೀತಿಗೆ ಸಾಕ್ಷಿಯಾಗಿದೆ. ಎಲ್ಲಾ ಏರಿಳಿತಗಳ ನಡುವೆಯೂ ಅಭಿಮಾನಿಗಳು ನನ್ನ ಜೊತೆ ನಿಂತಿದ್ದಾರೆ. ಈ ಪ್ರಯಾಣವು ನಮ್ಮ ಪ್ರಯಾಣವಾಗಿದೆ, ಮತ್ತು ನಾವು ಸಾಧಿಸಲು ಯಾವುದೇ ಮಿತಿಗಳಿಲ್ಲ ಎಂದು ನಾವು ಒಟ್ಟಿಗೆ ತೋರಿಸಿದ್ದೇವೆ. ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ, ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನನ್ನ ಜೀವನದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Story first published: Friday, September 13, 2024, 15:12 [IST]
Other articles published on Sep 13, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+