Cristiano Ronaldo Birthday: ಫುಟ್ಬಾಲ್ ದಾಖಲೆಗಳ ಒಡೆಯ: ಐಶಾರಾಮಿ ಜೀವನದ ರೋಲ್ ಮಾಡಲ್
ವಿಶ್ವ ಫುಟ್ಬಾಲ್ ಜಗತ್ತಿನ ರಾಜ ಪೋರ್ಚುಗಲ್‌ನ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ವಿಶ್ವದಲ್ಲಿ ಕೋಟ್ಯಾಂತರ ಫುಟ್ಬಾಲ್ ಅಭಿಮಾನಿಗಳ ಆರಾಧ್ಯ ದೈವ ರೊನಾಲ್ಡೋಗೆ ಶುಭಾಶಯಗಳ ಮಾಹಾ ಪೋರವೇ ಹರಿದು ಬರುತ್ತಿದೆ.
ಬಡತನದಲ್ಲಿ ಹುಟ್ಟಿದ ಪ್ರತಿಭೆ ಇಂದು ಐಶಾರಾಮಿ ಜೀವನಕ್ಕೆ ರೋಲ್ ಮಾಡಲ್ ಆಗುತ್ತಾನೆ ಎಂದು ಯಾರೂ ಊಹಿಸಲೂ ಸಾಧ್ಯವಿಲ್ಲ. ರೊನಾಲ್ಡೊ ಬೆಳೆದು ಬಂದ ರೀತ ಅಮೋಘ. ಸಿಕ್ಕ ಅವಕಾಶವನ್ನು ಬಳಸಿಕೊಂಡ ರೊನಾಲ್ಡೊ ಫುಟ್ಬಾಲ್ ಜಗತ್ತಿನ ದೊರೆಯಾಗಿ ಕಂಗೊಳಿಸುತ್ತಿದ್ದಾರೆ.

ಬಾಲ್ಯದಲ್ಲಿ ಹೇಗಿತ್ತು ರೊನಾಲ್ಡೊ ಬದುಕು
ಫುಟ್ಬಾಲ್ ಮೇಲಿನ ಪ್ರೀತಿಯಿಂದಾಗಿ 12 ನೇ ವಯಸ್ಸಿನಲ್ಲಿ, ರೊನಾಲ್ಡೊ ತನ್ನ ಕುಟುಂಬವನ್ನು ತೊರೆಯಬೇಕಾಯಿತು. ಆದ್ದರಿಂದ ಅವನು ತನ್ನ ಮನೆಯಿಂದ 600 ಮೈಲುಗಳಷ್ಟು ದೂರದಲ್ಲಿರುವ ಸ್ಪೋರ್ಟಿಂಗ್ ಯೂತ್ ಕ್ಲಬ್ ಸೇರಿ ಅಭ್ಯಾಸ ಆರಂಭಿಸಿದರು. ಇದು ಅವರ ಕ್ರೀಡಾ ವೃತ್ತಿಜೀವನದ ಅತ್ಯಂತ ಕಷ್ಟಕರ ಸಮಯವಾಗಿತ್ತು. ಇಲ್ಲಿಗೆ ಬಂದಿದ್ದರಿಂದ ಮನೆಯವರು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ದಿನವೂ ಅಳುತ್ತಿದ್ದರು.
15 ನೇ ವಯಸ್ಸಿನಲ್ಲಿ, ಅವರು "ರೇಸಿಂಗ್ ಹಾರ್ಟ್" ಎಂಬ ಕಾಯಿಲೆಗೆ ತುತ್ತಾದರು. ಇದರಿಂದ ಅವರ ಫುಟ್ಬಾಲ್ ಜೀವನಕ್ಕೆ ಕುತ್ತು ಬರುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಕ್ರೀಡೆಯ ಮೇಲೆ ಅವರಿಗಿದ್ದ ಪ್ರೀತಿ ಅವರನ್ನು ವಿಶ್ವದಲ್ಲಿ ಶ್ರೇಷ್ಠ ಫುಟ್ಬಾಲ್ ಆಟಗಾರನನ್ನಾಗಿ ಮಾಡಿತು.
ರೊನಾಲ್ಡೊ ಬೆರಗುಗೊಳಿಸುವ ಕಾಲ್ಚಳಕ ಮತ್ತು ಗೋಲ್‌ಸ್ಕೋರಿಂಗ್ ಸಾಮರ್ಥ್ಯಗಳು ಮ್ಯಾಂಚೆಸ್ಟರ್ ಯುನೈಟೆಡ್‌ನ ಕಣ್ಣಿಗೆ ಬಿದ್ದವು, ಅವರನ್ನು ಕ್ಲಬ್ 20 ಮಿಲಿಯನ್ ಯುಎಸ್ ಡಾಲರ್ ನೀಡಿ ಸಹಿ ಹಾಕಿಸಿಕೊಂಡಿತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಪೆಟ್ಟಿಗೆಯಲ್ಲಿ ಚೆಂಡನ್ನು ನೂಕುತ್ತಾ ತಮ್ಮ ತಂಡದ ಪರ ಗೋಲು ಬಾರಿಸುತ್ತಲದೆ ಸಾಗಿದರು. ಕ್ರಮೇಣ ಅವರು ಪೋರ್ಚಗಲ್ ತಂಡದ ಅವಿಭಾಜ್ಯ ಅಂಗವಾದರು. ಅಲ್ಲದೆ ಯುರೋಪಿಯನ್ ಚಾಂಪಿಯನ್‌ಶಿಪ್ ಕಿರೀಟವನ್ನು ತಮ್ಮ ತಂಡಕ್ಕೆ ಮುಡಿಸಿದರು.

ಸಾಮಾಜಿಕ ತಾಣದಲ್ಲಿ ಹೇಗಿದೆ ಹವಾ?
ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಕ್ರೀಡಾಪಟು, ಮತ್ತು ಫೇಸ್‌ಬುಕ್‌ನಲ್ಲಿ ಇವರನ್ನು ಫಾಲೋ ಮಾಡುವ ಅಭಿಮಾನಿಗಳ ಸಂಖ್ಯೆ ಹೆಚ್ಚು.
ರೊನಾಲ್ಡೊ ಟ್ರೋಫಿಗಳಿಗೆ ಮೀಸಲಾದ ವಸ್ತುಸಂಗ್ರಹಾಲಯವೂ ಇದೆ. ಇದು ಅವರ ಜನ್ಮಸ್ಥಳವಾದ ಮಡೈರಾ ದ್ವೀಪದಲ್ಲಿರುವ ಪೋರ್ಚುಗೀಸ್ ನಗರವಾದ ಫಂಚಲ್‌ನಲ್ಲಿದೆ. ಈ ವಸ್ತುಸಂಗ್ರಹಾಲಯವನ್ನು ಒಂಬತ್ತು ವರ್ಷಗಳ ಲೋಕಾರ್ಪಣೆ ಮಾಡಲಾಯಿತು.
ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಐಶಾರಾಮಿ ಜೀವನ ಶೈಲಿಯ ಒಡೆಯ. ಇವರ ಬಳಿ ವಿಶ್ವದ ಅತ್ಯಂತ ದುಬಾರಿ ಕಾರುಗಳು, ವಾಚ್‌ಗಳು ಇವೆ.
ರೊನಾಲ್ಡೊ ಸಾಧನೆ
ಕ್ರಿಸ್ಟಿಯಾನೊ ರೊನಾಲ್ಡೊ 1148 ಪಂದ್ಯಗಳಿಂದ 822 ಗೋಲುಗಳೊಂದಿಗೆ ವಿಶ್ವದ ಪ್ರಮುಖ ಗೋಲ್‌ಸ್ಕೋರರ್ ಆಗಿದ್ದಾರೆ. ಅವರ ಹಿಂದೆ ಜೋಸೆಫ್ ಬೀಕನ್ ಇದ್ದಾರೆ. ಅವರು 530 ಪಂದ್ಯಗಳಿಂದ 805 ಗೋಲುಗಳನ್ನು ಹೊಂದಿದ್ದಾರೆ. ಲಿಯೋನೆಲ್ ಮೆಸ್ಸಿ 1009 ಪಂದ್ಯಗಳಿಂದ 798 ಗೋಲುಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ರೊನಾಲ್ಡೊ ಅವರು ಅಲ್-ನಾಸ್ರ್ ಎಫ್‌ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಾಗ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ಮೂಲಕ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರಾದರು.
ರೊನಾಲ್ಡೊ ಐದು ಬ್ಯಾಲನ್ ಡಿ'ಓರ್ ಟ್ರೋಫಿಗಳನ್ನು ಗೆದ್ದಿದ್ದಾರೆ, ಇದು ಯಾವುದೇ ಯುರೋಪಿಯನ್ ಆಟಗಾರನಿಗಿಂತ ಹೆಚ್ಚು. ಅವರು ಲಿಯೋನೆಲ್ ಮೆಸ್ಸಿ ನಂತರ 7 ಬಾರಿ ಪ್ರಶಸ್ತಿಯನ್ನು ಗೆದ್ದ ವಿಶ್ವದ ಎರಡನೇ ಅತ್ಯಂತ ಯಶಸ್ವಿ ಆಟಗಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications