Cristiano Ronaldo: ಫಿಫಾ ವಿಶ್ವಕಪ್‌ನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಐತಿಹಾಸಿಕ ಸಾಧನೆ; ಪೋರ್ಚುಗಲ್‌ಗೆ ಜಯ
23ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳು ಭರ್ಜರಿ ಪ್ರದರ್ಶನ ನೀಡುತ್ತಿವೆ. ಈ ಸಾಲಿಗೆ ಮಂಗಳವಾರ ಪೋರ್ಚುಗಲ್ ತಂಡ ಸಹ ಸೇರಿದೆ. ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿ ನಿರಾಸೆಯನ್ನು ಅನುಭವಿಸಿದ್ದ, ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ತಂಡ, ಉಜ್ಬೇಕಿಸ್ತಾನ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದೆ. ಉಜ್ಬೇಕಿಸ್ತಾನ್ ವಿರುದ್ಧ 5-0 ಗೋಲುಗಳ ಭರ್ಜರಿ ಜಯ ದಾಖಲಿಸಿದ ಪೋರ್ಚುಗಲ್ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಮೂಲಕ ಈ ವಿಶ್ವಕಪ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ. ಈ ಪಂದ್ಯ ಆರನೇ ನಿಮಿಷದಲ್ಲಿ ರೊನಾಲ್ಡೊ ಗೋಲು ಬಾರಿಸಿ ದೊಡ್ಡ ಸಾಧನೆ ಮಾಡಿದ್ದಾರೆ.
ಫಿಫಾ ವಿಶ್ವಕಪ್‌ನಲ್ಲಿ ರೊನಾಲ್ಡೊ ಅವರು ಬಾರಿಸಿದ 10 ನೇ ಗೋಲು ಇದಾಗಿದೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರ ಐತಿಹಾಸಿಕ ಗೋಲಿನೊಂದಿಗೆ ಅವರು ತಮ್ಮ ಹೆಸರಿನಲ್ಲಿ ವಿಶ್ವ ದಾಖಲೆಯನ್ನು ಸಹ ಮಾಡಿದ್ದಾರೆ. ಆರು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರಂಭದ 6ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದ ರೊನಾಲ್ಡೊ 39ನೇ ನಿಮಿಷದಲ್ಲಿ ಬ್ರೂನೋ ಫೆರ್ನಾಂಡಿಸ್ ನೀಡಿದ ಪಾಸ್ ನೆರವಿನಿಂದ ರೊನಾಲ್ಡೊ ತಮ್ಮ ಎರಡನೇ ಗೋಲು (ವಿಶ್ವಕಪ್ ವೃತ್ತಿಜೀವನದ 10ನೇ ಗೋಲು) ಬಾರಿಸಿದರು.

ಈ ಅತ್ಯಾಕರ್ಷಕ ಫಿನಿಶಿಂಗ್ ಮೂಲಕ ರೊನಾಲ್ಡೊ ಕ್ರೀಡಾ ಇತಿಹಾಸಕ್ಕೆ ಹೊಸ ಮೆರುಗು ನೀಡಿದರು. 2006 ರ ಜರ್ಮನಿ ವಿಶ್ವಕಪ್‌ನಲ್ಲಿ ತಮ್ಮ ಮೊದಲ ವಿಶ್ವಕಪ್ ಗೋಲು ಬಾರಿಸಿದ್ದ ರೊನಾಲ್ಡೊ, ಅಂದಿನಿಂದ ಇಂದಿನವರೆಗೂ ಫುಟ್‌ಬಾಲ್‌ನ ಪ್ರತಿಷ್ಠಿತ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಆ ಬಳಿಕ ನಡೆದ 2010 ರ ದಕ್ಷಿಣ ಆಫ್ರಿಕಾ ವಿಶ್ವಕಪ್, 2014 ರ ಬ್ರೆಜಿಲ್ ವಿಶ್ವಕಪ್, 2018 ರ ರಷ್ಯಾ ವಿಶ್ವಕಪ್ ಹಾಗೂ 2022 ರ ಕತಾರ್ ವಿಶ್ವಕಪ್‌ಗಳಲ್ಲಿ ಅವರು ಸತತವಾಗಿ ಗೋಲು ಬಾರಿಸಿದ್ದಾರೆ.
17ನೇ ನಿಮಿಷದಲ್ಲಿ ಫ್ರೀ-ಕಿಕ್ ಅವಕಾಶವನ್ನು ಬಳಸಿಕೊಂಡ ನುನೊ ಮೆಂಡೆಸ್ ಪೋರ್ಚುಗಲ್ ಪರ ಎರಡನೇ ಗೋಲು ತಂದಿತ್ತರು. ಪಂದ್ಯದ ಕೊನೆಯಲ್ಲಿ (87ನೇ ನಿಮಿಷ) ರಾಫೆಲ್ ಲಿಯೋ ತಂಡದ ಐದನೇ ಹಾಗೂ ಅಂತಿಮ ಗೋಲು ಬಾರಿಸಿದರು. ಪಂದ್ಯದ 60ನೇ ನಿಮಿಷದಲ್ಲಿ ಬ್ರೂನೋ ಫೆರ್ನಾಂಡಿಸ್ ಹಾಕಿದ ಕಾರ್ನರ್ ಕಿಕ್ ಅನ್ನು ತಡೆಯುವ ಪ್ರಯತ್ನದಲ್ಲಿ ಉಜ್ಬೇಕಿಸ್ತಾನ್ ಗೋಲ್‌ಕೀಪರ್ ಅಬ್ದುವಾಹಿದ್ ನೆಮಟೋವ್ ಉಡುಗೊರೆ ಗೋಲು ನೀಡಿದರು.
ಮತ್ತೊಂದು ದಾಖಲೆ ಬರೆದ ರೊನಾಲ್ಡೊ
ರೊನಾಲ್ಡೊ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಪೋರ್ಚುಗಲ್ ಪರ ಅತಿ ಹೆಚ್ಚು ಗೋಲು ಬಾರಿಸಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಯುಸೆಬಿಯೊ ಅವರ ಹೆಸರಿನಲ್ಲಿತ್ತು. 1966 ರ ವಿಶ್ವಕಪ್‌ನಲ್ಲಿ ಯುಸೆಬಿಯೊ ಒಟ್ಟು ಒಂಬತ್ತು ಗೋಲುಗಳನ್ನು ಗಳಿಸಿದ್ದರು. ರೊನಾಲ್ಡೊ ಪೋರ್ಚುಗಲ್ ಪರ 10 ಗೋಲುಗಳನ್ನು ಗಳಿಸ, ಯುಸೆಬಿಯೊ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಮೊದಲ ಪಂದ್ಯದಲ್ಲಿ ನಿರಾಸೆ
ಕಾಂಗೋ ವಿರುದ್ಧದ ಪೋರ್ಚುಗಲ್‌ನ ಆರಂಭಿಕ ಪಂದ್ಯವು 1-1ರಿಂದ ಡ್ರಾದಲ್ಲಿ ಕೊನೆಗೊಂಡಿತು. ಇದರಿಂದಾಗಿ ತಂಡವು ಟೀಕೆಯನ್ನು ಎದುರಿಸಬೇಕಾಯಿತು. ರೊನಾಲ್ಡೊ ಅವರ ಕಳಪೆ ಪ್ರದರ್ಶನಕ್ಕಾಗಿ ಗಮನಾರ್ಹ ಟೀಕೆಗಳು ಕೇಳಿ ಬಂದವು. ತಂಡವು ಆರಂಭಿಕ ಪಂದ್ಯವನ್ನು ಗೆಲ್ಲಲು ವಿಫಲವಾಗಲು ರೊನಾಲ್ಡೊ ಕಾರಣ ಎಂದು ಕೆಲವರು ಟೀಕಿಸಿದ್ದರು. ರೊನಾಲ್ಡೊ ತಮ್ಮ ಮೇಲಿನ ಟೀಕೆಗೆ ಈಗ ಮೈದಾನದಲ್ಲಿ ಉತ್ತರ ನೀಡಿದ್ದಾರೆ.
ಮೆಸ್ಸಿ ಮಾಡದ ಸಾಧನೆ ಮಾಡಿದ ರೊನಾಲ್ಡೊ
ಈ ಐತಿಹಾಸಿಕ ಸಾಧನೆಯೊಂದಿಗೆ ಕ್ರಿಸ್ಟಿಯಾನೋ ರೊನಾಲ್ಡೊ, ಫುಟ್‌ಬಾಲ್ ಸಾಮ್ರಾಜ್ಯದ ಮತ್ತೊಬ್ಬ ಧ್ರುವತಾರೆ ಲಿಯೋನೆಲ್ ಮೆಸ್ಸಿ ಅವರ ಕೈಯಲ್ಲಿ ಮಾಡಲಾಗದ ದಾಖಲೆಯನ್ನು ಮಾಡಿ ಬೀಗಿದ್ದಾರೆ. ಮೆಸ್ಸಿ ಹಾಗೂ ರೊನಾಲ್ಡೊ ತಲಾ 6 ಫಿಫಾ ವಿಶ್ವಕಪ್‌ಗಳನ್ನು ಆಡಿದ್ದಾರೆ. ಮೆಸ್ಸಿಗೆ ಪ್ರತಿಯೊಂದು ವಿಶ್ವಕಪ್ ಆವೃತ್ತಿಯಲ್ಲೂ ಯಶಸ್ವಿಯಾಗಿ ಸ್ಕೋರ್ ಮಾಡಲು ಸಾಧ್ಯವಾಗಿಲ್ಲ. ಮೆಸ್ಸಿ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಪರ ಕಣಕ್ಕಿಳಿದಿದ್ದರಾದರೂ, ಅವರಿಗೆ ಟೂರ್ನಿಯಲ್ಲಿ ಒಂದೇ ಒಂದು ವೈಯಕ್ತಿಕ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications