
ಸೆಪ್ಟೆಂಬರ್ 1 ರ ಬುಧವಾರದಂದು ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೋ ನೂತನ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಹೌದು, ಕ್ರಿಸ್ಟಿಯಾನೋ ರೋನಾಲ್ಡೋ ಇದೀಗ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲ್ ಬಾರಿಸಿದ ಫುಟ್ಬಾಲ್ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.
ಪೋರ್ಚುಗಲ್ ದೇಶದ ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ 110 ಅಂತರರಾಷ್ಟ್ರೀಯ ಗೋಲ್‌ಗಳ ಮೈಲಿಗಲ್ಲನ್ನು ತಲುಪುವುದರ ಮೂಲಕ ಈ ಹಿಂದೆ 109 ಅಂತರರಾಷ್ಟ್ರೀಯ ಗೋಲ್ ಬಾರಿಸಿ ವಿಶ್ವಕಪ್ ಫುಟ್ಬಾಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂತಾರಾಷ್ಟ್ರೀಯ ಗೋಲ್ ಬಾರಿಸಿದ ದಾಖಲೆಯನ್ನು ಹೊಂದಿದ್ದ ಇರಾನ್ ದೇಶದ ಅಲಿ ದಾಯಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಫುಟ್ಬಾಲ್ ವಿಶ್ವಕಪ್ 2022 ಅರ್ಹತಾ ಸುತ್ತಿನಲ್ಲಿ ಗ್ರೂಪ್ ಎ ಪಂದ್ಯವೊಂದರಲ್ಲಿ ಐರ್ಲೆಂಡ್ ದೇಶದ ವಿರುದ್ಧ 110 ನೇ ಅಂತರರಾಷ್ಟ್ರೀಯ ಗೋಲ್ ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಈ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಈ ವಿಶ್ವದಾಖಲೆಯನ್ನು ನಿರ್ಮಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ಅಭಿಮಾನಿಗಳು ಹಾಗೂ ಫುಟ್ ಬಾಲ್ ಪ್ರಿಯರು ರೊನಾಲ್ಡೋ ವಿಶ್ವದಾಖಲೆಯನ್ನು ಕೊಂಡಾಡುತ್ತಿದ್ದಾರೆ. ಫಿಫಾ ವರ್ಲ್ಡ್‌ಕಪ್ ಕೂಡ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಸಾಧಿಸಿರುವ ವಿಶ್ವ ದಾಖಲೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ಪ್ರಶಂಸೆಯನ್ನು ವ್ಯಕ್ತಪಡಿಸಿದೆ.
ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲು ಬಾರಿಸಿರುವ ಟಾಪ್ 15 ಫುಟ್ಬಾಲ್ ಆಟಗಾರರು
ಫುಟ್ಬಾಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲ್ ಬಾರಿಸಿರುವ ಟಾಪ್ 15 ಫುಟ್ ಬಾಲ್ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..
1 ಕ್ರಿಸ್ಟಿಯಾನೊ ರೊನಾಲ್ಡೊ (ಪೋರ್ಚುಗಲ್) 111 ಗೋಲ್
2 ಅಲಿ ದಾಯಿ (ಇರಾನ್) 109 ಗೋಲ್
3 ಮೊಖ್ತರ್ ದಹರಿ (ಮಲೇಷಿಯಾ) 89 ಗೋಲ್
4 ಫೆರೆನ್ಸ್ ಪುಸ್ಕಾಸ್ (ಹಂಗೇರಿ) 84 ಗೋಲ್
5 ಗಾಡ್ಫ್ರೇ ಚಿಟಾಲು (ಜಾಂಬಿಯಾ) 79 ಗೋಲ್
6 ಹುಸೇನ್ ಸಯೀದ್ (ಇರಾಗ್) 78 ಗೋಲ್
7 ಪೀಲೆ (ಬ್ರೆಜಿಲ್) 77 ಗೋಲ್
8 ಅಲಿ ಮಾಬ್ಖೌಟ್ (ಯುಎಇ) * 76 ಗೋಲ್
9 ಸ್ಯಾಂಡರ್ ಕೋಸ್ಕಿಸ್ (ಹಂಗೇರಿ) 75 ಗೋಲ್
9 ಕುನಿಶಿಗೆ ಕಾಮಮೊಟೊ (ಜಪಾನ್) 75 ಗೋಲ್
9. ಬಶರ್ ಅಬ್ದುಲ್ಲಾ (ಕುವೈತ್) 75 ಗೋಲ್
9. ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) * 76 ಗೋಲ್
13 ಸುನಿಲ್ ಛೆಟ್ರಿ (ಭಾರತ) * 74 ಗೋಲ್
14 ಮಜೇದ್ ಅಬ್ದುಲ್ಲಾ (ಸೌದಿ ಅರೇಬಿಯಾ) 72 ಗೋಲ್
15 ಕಿನ್ನಾ ಫಿರಿ (ಮಲಾವಿ) 71 ಗೋಲ್
ಇನ್ನೂ ಕ್ರಿಸ್ಟಿಯಾನೋ ರೊನಾಲ್ಡೋ ಈ ಗೋಲು ದಾಖಲೆಯನ್ನು ಮಾಡಲು 180 ಪಂದ್ಯಗಳನ್ನು ತೆಗೆದುಕೊಂಡಿದ್ದರೆ, ಅತ್ತ ಇರಾನ್ ದೇಶದ ಫುಟ್ಬಾಲ್ ಆಟಗಾರ ಅಲಿ ದಾಯಿ 109 ಗೋಲ್ ದಾಖಲೆಯನ್ನು ಮಾಡಲು ಕೇವಲ 140 ಪಂದ್ಯಗಳನ್ನು ಮಾತ್ರ ತೆಗೆದುಕೊಂಡಿದ್ದರು. ಫುಟ್ಬಾಲ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರೀಮಿಯರ್ ಲೀಗ್ ಗೋಲುಗಳನ್ನು ಬಾರಿಸಿರುವ ಟಾಪ್ 5 ಆಟಗಾರರ ಪಟ್ಟಿ:
ಫುಟ್ಬಾಲ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಗೋಲುಗಳನ್ನು ಬಾರಿಸಿರುವ ಟಾಪ್ 5 ಫುಟ್ಬಾಲ್ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ ನೋಡಿ..
1. ಅಲನ್ ಶಿಯರೆರ್ - 260 ಗೋಲುಗಳು.
2. ವೇಯ್ನ್ ರೂನಿ - 208 ಗೋಲುಗಳು.
3. ಆಂಡ್ರ್ಯೂ ಕೋಲ್ - 187 ಗೋಲುಗಳು.
4. ಸೆರ್ಗಿಯೋ ಅಗುರೊ - 184 ಗೋಲುಗಳು.
5. ಫ್ರಾಂಕ್ ಲ್ಯಾಂಪಾರ್ಡ್ - 177 ಗೋಲುಗಳು.