Cristiano Ronaldo: 22 ನಿಮಿಷದಲ್ಲಿ ಬೆಳ್ಳಿ, 90ರಲ್ಲಿ ಚಿನ್ನ, 12 ಗಂಟೆಯಲ್ಲಿ ವಜ್ರ; ಸಂಚಲನ ಮೂಡಿಸಿದ ರೊನಾಲ್ಡೋ
ಫುಟ್‌ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದ ಒಳಗೆ ಮತ್ತು ಹೊರಗೆ ಸದಾ ದಾಖಲೆಗಳನ್ನು ಸೃಷ್ಟಿಸುತ್ತಿರುತ್ತಾರೆ. ವಿಶ್ವದಲ್ಲೆಡೆ ಅವರು ತನ್ನ ವಿಭಿನ್ನ ಶೈಲಿ ಆಟದಿಂದ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.
ಜಗತ್ತಿನಲ್ಲೇ ಯಾವ ಆಟಗಾರರನಿಗೂ ಇಲ್ಲದ ಜನಪ್ರಿಯತೆಯನ್ನು ರೊನಾಲ್ಡೊ ಹೊಂದಿದ್ದಾರೆ. ಈಗ ಯೂಟ್ಯೂಬ್ ಚಾನೆಲ್ ಶುರು ಮಾಡಿರುವ ಅವರು ಒಂದರ ಹಿಂದೆ ಒಂದರಂತೆ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಅಮೆರಿಕಾದ ಫೇಮಸ್ ಯುಟ್ಯೂಬರ್ ಮಿಸ್ಟರ್ ಬೀಸ್ಟ್ ಅವರ ರೆಕಾರ್ಡ್ ಬ್ರೇಕ್ ಮಾಡುವ ಮೂಲಕ ಹೊಸ ಮೈಲಿಗಲ್ಲು ತಲುಪಿದ್ದಾರೆ.

ರೊನಾಲ್ಡೊ ಅವರ 'ಯುಆರ್ ಕ್ರಿಸ್ಟಿಯಾನೋ' ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಕೇವಲ 24 ಗಂಟೆಗಳಲ್ಲಿ 23 ಮಿಲಿಯನ್ ಚಂದಾದಾರರ ಸಂಖ್ಯೆಯನ್ನು ದಾಟಿತ್ತು. ಇದೀಗ ಯೂಟ್ಯೂಬ್ ನಲ್ಲಿ ಮಿಸ್ಟರ್ ಬೀಸ್ಟ್ ಎಂದೇ ಖ್ಯಾತರಾಗಿರುವ ಜಿಮ್ಮಿ ಡೊನಾಲ್ಡ್ ಸನ್ ಹೊಂದಿದ್ದ 31 ಕೋಟಿ ಚಂದಾದಾರರ ದಾಖಲೆಯನ್ನು ಅವರು ಹಿಂದಿಕ್ಕಿದ್ದಾರೆ. ಪ್ರಸ್ತುತ 33.8 ಕೋಟಿ ಚಂದಾದಾರನ್ನು ರೊನಾಲ್ಡೊ ಹೊಂದಿದ್ದಾರೆ.
ಇದಲ್ಲದೆ, 'ಯುಆರ್ ಕ್ರಿಸ್ಟಿಯಾನೋ' ಯೂಟ್ಯೂಬ್ ಚಾನೆಲ್ ಮೂಲಕ ವೇಗವಾಗಿ 20 ಕೋಟಿ ಚಂದಾದಾರರನ್ನು ತಲುಪಿದ ಮೊದಲ ಯೂಟ್ಯೂಬರ್ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾಗಿದ್ದಾರೆ. ಚಾನೆಲ್ ಶುರು ಮಾಡಿದ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಅವರು ಈ ಸಾಧನೆ ಗೈದಿರುವುದು ವಿಶೇಷವಾಗಿದೆ. ಇದಕ್ಕೂ ಮೊದಲು ಈ ದಾಖಲೆ ಮಿಸ್ಟರ್ ಬೀಸ್ಟ್ ಅವರ ಹೆಸರಿನಲ್ಲಿತ್ತು.
ನಿಮಿಷಕ್ಕೊಂದು ದಾಖಲೆ
ಯೂಟ್ಯೂಬ್ ನಿಂದ ಹೊಸ ಮೈಲಿಗಲ್ಲು ತಲುಪಿರುವ ರೊನಾಲ್ಡೊಗೆ ಸಾಕಷ್ಟು ಪ್ರಶಸ್ತಿಗಳು ಬರುತ್ತಿವೆ. ಅವರು ಕೇವಲ 22 ನಿಮಿಷಗಳಲ್ಲಿ ಬೆಳ್ಳಿ, 90 ನಿಮಿಷಗಳಲ್ಲಿ ಗೋಲ್ಡನ್ ಮತ್ತು 12 ಗಂಟೆಗಳಲ್ಲಿ ಡೈಮಂಡ್ ಪ್ಲೇ ಬಟನ್ ಪಡೆದು ಇತಿಹಾಸ ಸೃಷ್ಟಿಸಿದ್ದಾರೆ. ಇದುವರೆಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಮುಂದೆಯೂ ಇಂತಹ ದಾಖಲೆಯನ್ನು ಮಾಡುವುದು ಅಸಾಧ್ಯ ಎನ್ನಲಾಗುತ್ತಿದೆ.
ಏನಿದು ಯುಟ್ಯೂಬ್ ಬಟನ್?
ಸಾಮಾನ್ಯವಾಗಿ ಯೂಟ್ಯೂಬ್‌ನಲ್ಲಿ 1 ಲಕ್ಷ ಚಂದಾದಾರರನ್ನು ಹೊಂದಿದರೆ ಸಿಲ್ವರ್ ಪ್ಲೇ ಬಟನ್, 1 ಮಿಲಿಯನ್ ಅಂದರೆ 10 ಲಕ್ಷ ಚಂದಾದಾರರದ್ದರೆ ಗೋಲ್ಡ್ ಪ್ಲೇ ಬಟನ್ ಮತ್ತು 10 ಮಿಲಿಯನ್ ಅಂದರೆ 1 ಕೋಟಿ ಸಬ್‌ಸ್ಕ್ರೈಬರ್‌ಗಳಿದರೆ ಡೈಮಂಡ್ ಪ್ಲೇ ಬಟನ್ ಸಿಗಲಿದೆ. ಈ ಮೂರು ಬಟನ್‌ಗಳನ್ನು ಕೇವಲ 12 ಗಂಟೆಗಳಲ್ಲಿ ಪಡೆದಿರುವುದು ಇದೇ ಮೊದಲು.
ಪುತ್ರಿಯರೊಂದಿಗೆ ಸಂತಸ
ಯೂಟ್ಯೂಬ್‌ನಿಂದ ಮೂರು ಬಟನ್‌ಗಳನ್ನು ಪಡೆದಿರುವ ಸಂತೋಷವನ್ನು ರೊನಾಲ್ಡೊ ತಮ್ಮ ಪುತ್ರಿಯರೊಂದಿಗೆ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಯೂಟ್ಯೂಬ್‌ನಿಂದ ಗಳಿಕೆ ಎಷ್ಟು?
ವರದಿಗಳ ಪ್ರಕಾರ, ಯೂಟ್ಯೂಬರ್‌ಗಳಿಗೆ 1 ಮಿಲಿಯನ್ (10 ಲಕ್ಷ) ವೀಕ್ಷಣೆಗಾಗಿ ಸುಮಾರು 6 ಸಾವಿರ ಡಾಲರ್ (5 ಲಕ್ಷ ರೂ.) ನೀಡಲಾಗುತ್ತದೆ. ಅವರ ಆದಾಯವು ವೀಡಿಯೊಗಳ ಸಮಯದಲ್ಲಿ ಕಾಣಿಸಿಕೊಳ್ಳುವ ಜಾಹೀರಾತುಗಳಿಂದ ಬರುತ್ತದೆ. ಒಂದು ದಿನದಲ್ಲಿ ರೊನಾಲ್ಡೊ ಸುಮಾರು 2.51 ರೂ. ಕೋಟಿ ಗಳಿಸಿರುವ ಬಗ್ಗೆ ಮೂಲಗಳು ತಿಳಿಸಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications