Cristiano Ronaldo: ಫುಟ್‌ಬಾಲ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ರೊನಾಲ್ಡೊ
ಗುರುವಾರ ಲಿಸ್ಬನ್‌ನಲ್ಲಿ ನಡೆದ ಯುಇಎಫ್‌ಎ ನೇಷನ್ಸ್ ಲೀಗ್ ಗುಂಪು ಹಂತದ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧದ ಪೋರ್ಚುಗಲ್ ಭರ್ಜರಿ ಗೆಲುವು ಸಾಧಿಸಿದೆ. ಪೋರ್ಚುಗಲ್ 2-1 ಗೋಲು ಅಂತರಗಳಿಂದ ಕ್ರೊವೇಷಿಯಾವನ್ನು ಸೋಲಿಸಿದೆ.
ಈ ಪಂದ್ಯದಲ್ಲಿ ಪೋರ್ಚುಗಲ್‌ನ ದಿಗ್ಗಜ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇತಿಹಾಸ ನಿರ್ಮಿಸಿದ್ದಾರೆ. ರೊನಾಲ್ಡೊ ತಮ್ಮ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿದ್ದಾರೆ. ಅವರು ತಮ್ಮ ವೃತ್ತಿಜೀವನದ 900ನೇ ಗೋಲು ದಾಖಲಿಸಿ ಸಂಭ್ರಮಿಸಿದ್ದಾರೆ.

ಈ ಐತಿಹಾಸಿಕ ಸಾಧನೆಯೊಂದಿಗೆ ರೊನಾಲ್ಡೊ ಫುಟ್‌ಬಾಲ್ ಇತಿಹಾಸದಲ್ಲಿ 900 ಅಥವಾ ಅದಕ್ಕಿಂತ ಹೆಚ್ಚು ಗೋಲುಗಳನ್ನು ಗಳಿಸಿದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. ರೊನಾಲ್ಡೊ ಗೋಲು ಗಳಿಸುತ್ತಿದ್ದಂತೆ ಮೈದಾನದಲ್ಲಿ ಭಾವುಕರಾಗಿದ್ದಾರೆ. ಈ ವೇಳೆ ಮೈದಾನದಲ್ಲಿ ರೊನಾಲ್ಡೊ ಅಭಿಮಾನಿಗಳು ಅವರನ್ನು ಅಭಿನಂದಿಸಿದ್ದಾರೆ.
ಅತಿಹೆಚ್ಚು ಗೋಲು ಗಳಿಸಿದ ಆಟಗಾರರು
ಪೋರ್ಚುಗಲ್ ಪರ ರೊನಾಲ್ಡೊ ಅವರು 131ನೇ ಗೋಲು ಇದಾಗಿದೆ. ಇದರೊಂದಿಗೆ ಅತಿ ಹೆಚ್ಚು ಅಂತರಾಷ್ಟ್ರೀಯ ಗೋಲು ಗಳಿಸಿದ ಅವರ ದಾಖಲೆ ಇನ್ನಷ್ಟು ಗಟ್ಟಿಯಾಗಿದೆ. ಪೋರ್ಚುಗಲ್ ನಾಯಕ ಈಗಾಗಲೇ ವಿಶ್ವದಾದ್ಯಂತ ಕ್ಲಬ್‌ಗಳಿಗಾಗಿ 769 ಗೋಲುಗಳನ್ನು ಹೊಡೆದಿದ್ದಾರೆ. ಬಳಿಕ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ 842 ಗೋಲುಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬ್ರೆಜಿಲ್ ದಂತಕಥೆ ಪೀಲೆ 765 ಗೋಲುಗಳೊಂದಿಗೆ ಈ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ರೊನಾಲ್ಡೊ ಸಂತಸ
ಪಂದ್ಯದ ನಂತರ ಮಾತನಾಡಿರುವ ರೊನಾಲ್ಡೊ ತಮ್ಮ ಸಾಧನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. "ಇದನ್ನು ನಾನು ಬಹಳ ದಿನಗಳಿಂದ ಸಾಧಿಸಲು ಬಯಸಿದ್ದ ಮೈಲಿಗಲ್ಲು. ನಾನು ಈ ಸಂಖ್ಯೆಯನ್ನು ತಲುಪುತ್ತೇನೆ ಎಂದು ನನಗೆ ತಿಳಿದಿತ್ತು. ಏಕೆಂದರೆ ನಾನು ಆಟವಾಡುತ್ತಿರುವಾಗ ಅದು ಸಾಧ್ಯ ಎನಿಸಿತ್ತು. ಇದೊಂದು ಮೈಲಿಗಲ್ಲು ಆಗಿರುವುದರಿಂದ ಭಾವನಾತ್ಮಕವಾಗಿತ್ತು. ಆದರೆ 900 ಗೋಲುಗಳನ್ನು ಗಳಿಸುವುದು ಎಷ್ಟು ಕಷ್ಟ ಎಂದು ನನಗೆ ಮತ್ತು ನನ್ನ ಸುತ್ತಮುತ್ತಲಿನ ಜನರಿಗೆ ಮಾತ್ರ ತಿಳಿದಿದೆ" ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications