Cristiano Ronaldo: ಯುಟ್ಯೂಬ್‌ಗೆ ಕಾಲಿಟ್ಟ ಕ್ರಿಸ್ಟಿಯಾನೋ ರೊನಾಲ್ಡೊ: 2 ಗಂಟೆಯಲ್ಲಿ 1 ಮಿಲಿಯನ್ ಸಬ್ ಸ್ಕ್ರೈಬರ್ಸ್
ಫೂಟ್ಬಾಲ್ ಲೋಕದ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ. ತಮ್ಮ ಧಮಾಕೆದಾರ ಆಟದ ಮೂಲಕವೇ ವಿಶ್ವದಲ್ಲೆಡೆ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಆಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಲೇ ಇರುತ್ತಾರೆ. ಇವರ ಕ್ರೇಜ್ ವಿಶ್ವದಲ್ಲೆ ಹೆಚ್ಚಿದೆ. ಫುಟ್ಬಾಲ್ ಅಂಗಳದಲ್ಲಿ ಹಲವು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಿರುವ ಇವರು ಫುಟ್ಬಾಲ್ ಅಂಗಳದ ಹೊರಗೂ ಜಲ್ವಾ ತೋರಿಸಿದ್ದಾರೆ.
ವಿಶ್ವದಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋವರ್ಸ್ ಪಟ್ಟಿ ನೋಡಿದರೆ ಅದ್ರಲ್ಲೂ ಕ್ರಿಸ್ಟಿ ಹೆಸರು ಮುಂಚೂಣಿಯಲ್ಲಿರುತ್ತದೆ. ಅಂತರ್ಜಾಲದಲ್ಲಿ ಇವರ ಇನ್‌ಸ್ಟಾಗ್ರಾಮ್ ಹಾಗೂ ಫೇಸಬುಕ್ ಖಾತೆಗಳಲ್ಲಿ ಕೋಟ್ಯಾಂತರ ಜನ ಇವರನ್ನು ಹಿಂಬಾಲಿಸುತ್ತಾರೆ. ಈಗ ಕ್ರಿಸ್ಟಿಯಾನೋ ಮತ್ತೊಂದು ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ರೊನಾಲ್ಡೊ ತಮ್ಮ ಯೂಟ್ಯೂಬ್ ಚಾನೆಲ್ ಆರಂಭಿಸುವ ಮೂಲಕ ಈಗ ಸದ್ದು ಮಾಡುತ್ತಿದ್ದಾರೆ. ಇವರು ಯುಆರ್ ಕ್ರಿಸ್ಟಿಯಾನೋ ಎಂಬ ಹೆಸರಿನ ಚಾನೆಲ್ ಆರಂಭಿಸಿದ್ದು, ಯೂಟ್ಯೂಬ್ ಜಗತ್ತಿನಲ್ಲಿ ಸಂಚಲನ ಮೂಡಿಸಿದೆ.

ಕ್ರಿಸ್ಟಿಯಾನೋ ರೊನಾಲ್ಡೊ ಅವರ ಕ್ರೇಜ್ ಎಷ್ಟಿದೆ ಎಂದರೆ, ಬುಧವಾರ ಯೂಟ್ಯೂಬ್‌ಗೆ ಕಾಲಿಡುತ್ತಿದ್ದಂತೆ ಅಬ್ಬರಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಆರಂಭಿಸಿದ ಜಸ್ಟ್ ಎರಡು ಗಂಟೆಗಳ ಒಳಗೆ ಇವರ ಚಾನೆಲ್ 1 ಮಿಲಿಯನ್ (10 ಲಕ್ಷ) ಚಂದಾದಾರರ ಸಂಖ್ಯೆಯನ್ನು ಮುಟ್ಟಿದೆ. ಅಲ್ಪ ಸಮಯದಲ್ಲಿ ರೊನಾಲ್ಡೊ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಅವರು ಸುಮಾರು 11.7 ಮಿಲಿಯನ್ (11.7 ಲಕ್ಷ) ಚಂದಾದಾರರನ್ನು ಹೊಂದಿದ್ದಾರೆ.
ಕ್ರಿಸ್ಟಿಯಾನೋ ಯೂಟ್ಯೂಬ್ ನಲ್ಲಿ ವೇಗವಾಗಿ ಬೆಳೆಯುತ್ತಿದ್ದಾರೆ. ಇವರ ಈ ಸ್ಪೀಡ್ ನೋಡಿದರೆ, ಇವರು ಇನ್ನು ಅದೆಷ್ಟೋ ದಾಖಲೆಗಳನ್ನು ಅಳಿಸಿ ಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಯೂಟ್ಯೂಬ್ ಇತಿಹಾಸದಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಕೀರ್ತಿ MrBeast ಅವರದ್ದಾಗಿದೆ. ಇವರು 31 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಕ್ರಿಸ್ಟಿಯಾನೋ ರೊನಾಲ್ಡೊ ಯೂಟ್ಯೂಬ್ ಚಾನೆಲ್‌ಗೆ ಮೊದಲು ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಫುಟ್ಬಾಲ್ ಮೇಲಿನ ಪ್ರೀತಿಯನ್ನು ತೋರಿಸಿದ್ದಾರೆ. ಅಲ್ಲದೆ ಅಂಗಳದ ಹೊರಗಿನ ಆಗು ಹೋಗಗಳ ಬಗ್ಗೆಯೂ ಮಾತನಾಡಿದ್ದಾರೆ. ಈ ಚಾನೆಲ್ ಆರಂಭಿಸುವ ಯೋಚನೆ ಬಹುದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಈಗ ಅದನ್ನು ಸಾಕಾರಗೊಳಿಸುವ ಅವಕಾಶ ಸಿಕ್ಕಿದೆ. ನಾನು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸುವುದನ್ನು ಆನಂದಿಸುತ್ತೇನೆ ಎಂದು ತಿಳಿಸಿದ್ದಾರೆ. ಯುಆರ್ ಚಾನಲ್‌ನಲ್ಲಿ ಈಗಾಗಲೇ 18 ವೀಡಿಯೊಗಳನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ರೊನಾಲ್ಡೊ ಮತ್ತು ಅವರ ಗೆಳತಿ ಜಾರ್ಜಿನಾ ರೊಡ್ರಿಗಸ್ ವೈಯಕ್ತಿಕ ಜೀವನವನ್ನು ಹಂಚಿಕೊಳ್ಳುತ್ತಿದ್ದಾರೆ.
ಹೆಚ್ಚು ಗಳಿಸುವ ಆಟಗಾರರು
ಕ್ರಿಸ್ಟಿ ಬರೀ ಮೈದಾನದಲ್ಲಿ ಮಾತ್ರ ದಾಖಲೆಗಳ ವೀರನಲ್ಲ. ಮೈದಾನದ ಹೊರಗೂ ಇವರು ದಾಖಲೆಯ ಸರದಾರನೇ. ಈಗಾಗಲೇ ಇವರು ಒಟ್ಟು 33 ಟ್ರೋಫಿಗಳಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 897 ಗೋಲುಗಳನ್ನು ಬಾರಿಸಿದ್ದಾರೆ. ರೊನಾಲ್ಡೊ ಅವರು ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಬಾರಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್‌ಗಳ ಫೋರ್ಬ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸೌದಿ ಅರೇಬಿಯಾದ ಅಲ್-ನಾಸ್ರ್ ತಂಡವನ್ನು ಸೇರಿಕೊಂಡ ನಂತರ, ರೊನಾಲ್ಡೊ ವಿಶ್ವದ ಅತಿ ಹೆಚ್ಚು ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications