Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮ್ಯಾನ್ಚೆಸ್ಟರ್ ಸಿಟಿ ಎಫ್‌ಸಿ ಸೇರಲು ಕ್ರಿಸ್ಚಿಯಾನೊ ರೊನಾಲ್ಡೋ ಸಿದ್ಧತೆ

Cristiano Ronaldo Likely to join Manchester City, says reports

ಲಿಸ್ಬನ್: ಪೋರ್ಚುಗಲ್‌ನ ಸ್ಟಾರ್ ಫುಟ್ಬಾಲರ್, ಈಗ ಇಟಲಿ ಮೂಲದ ಯುವೆಂಟಸ್ ಎಫ್‌ಸಿ ಪರ ಆಡುತ್ತಿರುವ ಕ್ರಿಸ್ಚಿಯಾನೊ ರೊನಾಲ್ಡೋ ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಮ್ಯಾನ್ಚೆಸ್ಟರ್ ಸಿಟಿ ಸೇರಿಕೊಳ್ಳುವ ಸಾಧ್ಯತೆಯಿದೆ. ಮಾನ್ಚೆಸ್ಟರ್ ಸಿಟಿ ಜೊತೆಗೆ ಒಪ್ಪಂದ ಮಾಡಲು ರೊನಾಲ್ಡೋ ಸಿದ್ಧರಾಗಿದ್ದಾರೆ ಎಂದು ವರದಿಗಳು ಹೇಳಿವೆ.

ಇಎಸ್‌ಪಿಎನ್ ವರದಿಯ ಪ್ರಕಾರ, ಮಾನ್ಚೆಸ್ಟರ್ ಸಿಟಿ ಮ್ಯಾನೇಜರ್ ಪೆಪ್ ಗಾರ್ಡಿಯೋಲಾ ಈಗಾಗಲೇ ಕ್ಲಬ್ ಸೇರುವ ಬಗ್ಗೆ ಕ್ರಿಸ್ಚಿಯಾನೊ ರೊನಾಲ್ಡೋ ಜೊತೆ ಮಾತುಕತೆ ನಡೆಸಿದ್ದಾರೆ. ಯುವೆಂಟಸ್ ತೊರೆಯುವ ಬಗ್ಗೆಯೂ ರೊನಾಲ್ಡೋ ಅವರು ಗಾರ್ಡಿಯೋಲಾ ಜೊತೆಗೆ ಗುರುವಾರ (ಆಗಸ್ಟ್ 27) ಮಾತನಾಡಿರುವುದಾಗಿ ತಿಳಿದು ಬಂದಿದೆ.

ಮ್ಯಾನ್ಚೆಸ್ಟರ್ ಸಿಟಿ ತಂಡದಲ್ಲಿದ್ದ ಸ್ಟ್ರೈಕರ್, ಅರ್ಜೆಂಟೀನಾದ ಫುಟ್ಬಾಲರ್ ಸೆರ್ಗಿಯೋ ಅಗುರೊ ಸಿಟಿ ತೊರೆದು ಬಾರ್ಸಿಲೋನಾ ಎಫ್‌ಸಿ ಸೇರಿಕೊಂಡಿದ್ದಾರೆ. ಹೀಗಾಗಿ ತೆರವಾದ ಸ್ಟ್ರೈಕರ್ ಸ್ಥಾನಕ್ಕೆ ಬೇರೆ ಆಟಗಾರನನ್ನು ತರೋದಕ್ಕೆ ಸಿಟಿ ಎದುರು ನೋಡುತ್ತಿತ್ತು. ಇದೇ ಸಮಯಕ್ಕೆ ರೊನಾಲ್ಡೋ ಯುವೆಂಟಸ್ ತೊರೆಯುವ ಯೋಚನೆ ತೋರಿಕೊಂಡಿದ್ದರು.

36ರ ಹರೆಯದ ರೊನಾಲ್ಡೋ ಅವರನ್ನು ಮಾರಾಟ ಮಾಡಲು ಯುವೆಂಟಸ್ ಕೂಡ ಯೋಚಿಸುತ್ತಿದೆ. ರೊನಾಲ್ಡೋಗೆ ಒಂದು ವಾರಕ್ಕೆ ವೇತನ ಮತ್ತು ತೆರಿಗೆ ಸೇರಿಸಿ ಯುವೆಂಟಸ್ ಸುಮಾರು £500,000 (5,07,82,959 ರೂ.) ಪಾವತಿಸುತ್ತಿದೆ. ಇದೇ ಕಾರಣಕ್ಕೆ ಯುವೆಂಟಸ್ ರೊನಾಲ್ಡೋ ಮಾರಾಟ ನಡೆಸಿ ಆರ್ಥಿಕ ಹೊರೆ ಇಳಿಸಲು ಯೋಚಿಸಿದೆ.

Story first published: Friday, August 27, 2021, 11:05 [IST]
Other articles published on Aug 27, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+