For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ರೊನಾಲ್ಡೊ-ಮೆಸ್ಸಿ ಯುಗ ಅಂತ್ಯ: ಮೊದಲ ಬಾರಿಗೆ ಈ ಪ್ರಶಸ್ತಿ ನಾಮನಿರ್ದೇಶನ ಪಟ್ಟಿಯಿಂದ ಹೊರಗೆ

ಕಳೆದ ಎರಡು ದಶಕಗಳ ಕಾಲ ಫುಟ್‌ಬಾಲ್ ಜಗತ್ತಿನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ. ಈ ಇಬ್ಬರು ಫುಟ್‌ಬಾಲ್ ದಿಗ್ಗಜರು ತಮ್ಮ ಆಟದ ಮೂಲಕ ವಿಶ್ವದೆಲ್ಲೆಡೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ.

ರೊನಾಲ್ಡೊ ಮತ್ತು ಮೆಸ್ಸಿ ಆಟ ನೋಡಲು ಮೈದಾನದಲ್ಲಿ ಜನ ಸಾಗರ ಸೇರುತ್ತದೆ. ಅಷ್ಟರ ಮಟ್ಟಿಗೆ ಈ ಇಬ್ಬರ ಆಟ ರೋಮಾಂಚನಕಾರಿಯಾಗಿರುತ್ತದೆ. ಇದಲ್ಲದೆ, ಹಲವು ದಾಖಲೆಗಳನ್ನು ಸೃಷ್ಟಿಸುವಲ್ಲಿ ಮೊದಲಿಗರಾಗಿದ್ದಾರೆ. ಇದೀಗ ಈ ಇಬ್ಬರು ಫುಟ್‌ಬಾಲ್‌ ದಂತಕಥೆಗಳು 21 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯ ನಾಮನಿರ್ದೇಶನ ಪಟ್ಟಿಯಿಂದ ಹೊರಗುಳಿದ್ದಾರೆ.

Cristiano Ronaldo - Lionel Messi are out of Balon D Oor Award Nomination List

ಈ ವರ್ಷದ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಗೆಲ್ಲಲುವ ರೇಸ್‌ನಿಂದ ರೊನಾಲ್ಡೊ ಮತ್ತು ಮೆಸ್ಸಿ ಅವರನ್ನು ನಾಮನಿರ್ದೇಶನ ಪಟ್ಟಿಯಿಂದ ಹೊರಗಿಡಲಾಗಿದೆ. ಇದುವರೆಗೆ ಮೆಸ್ಸಿ 8 ಬಾರಿ ಬ್ಯಾಲನ್ ಡಿ ಓರ್ ಪ್ರಶಸ್ತಿಯನ್ನು ಗೆದ್ದಿದ್ದು, ಪೋರ್ಚುಗೀಸ್ ಫುಟ್‌ಬಾಲ್ ದಂತಕಥೆ ರೊನಾಲ್ಡೊ 6 ಬಾರಿ ಪ್ರಶಸ್ತಿಯನ್ನು ಪಡೆದಿದ್ದಾರೆ.

2008 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ಆಡುವಾಗ ರೊನಾಲ್ಡೊ ತಮ್ಮ ಮೊದಲ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 2014, 2015, 2016, 2017 ಮತ್ತು 2020 ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಮತ್ತೊಂದೆಡೆ ಅರ್ಜೆಂಟೀನಾದ ಸ್ಟಾರ್ ಫುಟ್‌ಬಾಲ್ ಆಟಗಾರ ಮೆಸ್ಸಿ 2009 ರಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದರೆ, ಬರೋಬ್ಬರಿ 16 ವರ್ಷಗಳ ಕಾಲ ನಾಮನಿರ್ದೇಶನಗೊಂಡಿದ್ದಾರೆ. 2011, 2012, 2013, 2016, 2019, 2021 ಮತ್ತು 2023 ರಲ್ಲಿ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರೊನಾಲ್ಡೊ ಮತ್ತು ಮೆಸ್ಸಿ ಇಬ್ಬರೂ 2020 ರಲ್ಲಿ ಬ್ಯಾಲನ್ ಡಿ'ಓರ್ ಡ್ರೀಮ್ ತಂಡದ ಭಾಗವಾಗಿದ್ದರು.

ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರು

ಜೂಡ್ ಬೆಲ್ಲಿಂಗ್‌ಹ್ಯಾಮ್, ಬುಕಾಯೊ ಸಾಕಾ, ಕೋಲ್ ಪಾಲ್ಮರ್, ಹ್ಯಾರಿ ಕೇನ್, ಫಿಲ್ ಫೋಡೆನ್ ಮತ್ತು ಡೆಕ್ಲಾನ್ ರೈಸ್ ಮತ್ತು ಆರು ಇಂಗ್ಲೆಂಡ್ ಆಟಗಾರರು ಸೇರಿದಂತೆ 30 ಆಟಗಾರರು ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಬಾರಿಯ ಯುರೋ ಚಾಂಪಿಯನ್ ಸ್ಪೇನ್‌ ತಂಡದ ಆರು ಆಟಗಾರರಾದ ರೋಡ್ರಿ, ಡ್ಯಾನಿ ಕಾರ್ವಾಜಾಲ್, ಲ್ಯಾಮಿನ್ ಯಮಲ್, ನಿಕೊ ವಿಲಿಯಮ್ಸ್, ಡ್ಯಾನಿ ಓಲ್ಮೊ ಮತ್ತು ಅಲೆಜಾಂಡ್ರೊ ಗ್ರಿಮಾಲ್ಡೊ ಕೂಡ ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಸ್ಪರ್ಧಿಸಲಿದ್ದಾರೆ.

ರಿಯಲ್ ಮ್ಯಾಡ್ರಿಡ್‌ನ ವಿನಿಶಿಯಸ್ ಜೂನಿಯರ್ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿದ್ದು, ಮ್ಯಾಂಚೆಸ್ಟರ್ ಸಿಟಿಯ ಎರ್ಲಿಂಗ್ ಹಾಲೆಂಡ್ ಕೂಡ ಫುಟ್‌ಬಾಲ್ ತಾರೆ ಕೈಲಿಯನ್ ಎಂಬಪ್ಪೆ ಜೊತೆಗೆ ಪಟ್ಟಿಯಲ್ಲಿದ್ದಾರೆ. ಫಿಫಾ ವಿಶ್ವಕಪ್ 2022ರ ಗೋಲ್ಡನ್ ಗ್ಲೋವ್ ವಿಜೇತ ಎಮಿಲಿಯಾನೊ ಮಾರ್ಟಿನೆಜ್ ಅವರು ಸಹಾ ಈ ಪಟ್ಟಿಯಲ್ಲಿ ಸ್ಥಾನ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ.

Story first published: Thursday, September 5, 2024, 20:00 [IST]
Other articles published on Sep 5, 2024
POLLS
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+