ತೆರಿಗೆ ತಪ್ಪಿಸಿದ್ದಕ್ಕೆ 21.6 ಮಿಲಿಯನ್ ಡಾಲರ್ ದಂಡ ಕಟ್ಟಲಿರುವ ರೊನಾಲ್ಡೋ

ಲಿಸ್ಬನ್, ಜನವರಿ 22: ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಡೋ ಅವರು ಬರೋಬ್ಬರಿ 21.6 ಮಿಲಿಯನ್ ಡಾಲರ್ (ಸುಮಾರು 15401 ಕೋಟಿ ರೂ.) ದಂಡ ಕಟ್ಟಲಿದ್ದಾರೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕೆ ಪ್ರತಿಯಾಗಿ ರೊನಾಲ್ಡೋಗೆ ದಂಡ ವಿಧಿಸಲಾಗಿದೆ. ಆದರೆ ಜೈಲು ಶಿಕ್ಷೆಯಿಂದ ರೊಲಾನ್ಡೋ ತಪ್ಪಿಸಿಕೊಂಡಿದ್ದಾರೆ.
ಇಟಲಿ ಮೂಲದ ಯುವೆಂಟಸ್ ತಂಡದ ಫಾರ್ವರ್ಡ್ ಆಟಗಾರ, 33ರ ಹರೆಯದ ರೊನಾಲ್ಡೊ ಅವರನ್ನು ತೆರಿಗೆ ವಂಚನೆ ಆರೋಪಡಿಯಲ್ಲಿ ಸ್ಪೇನ್ ನ್ಯಾಯಾಲಯ ವಿಚಾರಣೆ ನಡೆಸಿತ್ತು. ಈ ವೇಳೆ ಕ್ರಿಸ್ಚಿಯಾನೊ ತಪ್ಪಿತಸ್ಥನಾಗಿ ಕಂಡುಬಂದಿದ್ದರು. ಹೀಗಾಗಿ ರೊನಾಲ್ಡೋಗೆ ಜೈಲು ಶಿಕ್ಷೆ ವಿಧಿಸಲೂ ಅವಕಾಶವಿತ್ತು.
ಸುಮಾರು 2 ವರ್ಷಗಳ ಅಂದರೆ 23 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ರೊನಾಲ್ಡೋ ಮಂಗಳವಾರ (ಜನವರಿ 22) ತಾನು ಜೈಲು ಶಿಕ್ಷೆಗೆ ಬದಲಾಗಿ ದೊಡ್ಡ ಪ್ರಮಾಣದ ದಂಡ ಕಟ್ಟುವುದಾಗಿ ಒಪ್ಪಿಕೊಂಡಿದ್ದಾರೆ. ವಿಶ್ವ ಶ್ರೇಷ್ಠ ಫುಟ್ಬಾಲಿಗ ರೊನಾಲ್ಡೊ ಈ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
Story first published: Tuesday, January 22, 2019, 20:50 [IST]
Other articles published on Jan 22, 2019
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications