Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Cristiano Ronaldo : ಫುಟ್‌ಬಾಲ್‌ ಸ್ಟಾರ್ ಕ್ರಿಸ್ಟಿಯಾನೋ ರೊನಾಲ್ಡೊ ಗಂಡು ಮಗು ನಿಧನ

Cristiano Ronaldos newborn babyboy passed away

ಫುಟ್‌ಬಾಲ್‌ ಜಗತ್ತಿನ ದಿಗ್ಗಜ ಕ್ರಿಸ್ಟಿಯಾನಾ ರೊನಾಲ್ಡೋ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ತನ್ನ ಗೆಳತಿ ಜಾರ್ಜಿನಾ ರೋರ್ಡ್ರಿಗಸ್ ಜತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮಗೆ ಅವಳಿ ಮಕ್ಕಳು ಜನಿಸಲಿವೆ ಎಂಬುದನ್ನು ತಿಳಿಸಿದ್ದರು. ಹಾಗೂ ಅವಳಿ ಮಕ್ಕಳನ್ನು ಸ್ವಾಗತಿಸಲು ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಗೆಳತಿ ತುಂಬಾ ಉತ್ಸುಕರಾಗಿದ್ದರು.

ಆದರೆ, ಈ ಕುರಿತಾಗಿ ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ದುಃಖದ ವಿಚಾರವನ್ನು ಹಂಚಿಕೊಂಡಿದ್ದು, ಅವಳಿ ಮಕ್ಕಳ ಪೈಕಿ ಗಂಡು ಮಗು ನಿಧನವಾಗಿದ್ದು, ಹೆಣ್ಣು ಮಗು ಬದುಕುಳಿದಿದೆ. ಈ ವಿಷಯವನ್ನು ಕ್ರಿಸ್ಟಿಯಾನೋ ರೊನಾಲ್ಡೋ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಕುರಿತಾಗಿ ಗೌಪ್ಯತೆ ಕಾಪಾಡಲು ಕೋರಿಕೊಂಡಿದ್ದಾರೆ.

ತಮ್ಮ ಗಂಡು ಮಗು ತೀರಿಕೊಂಡಿರುವ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕ್ರಿಸ್ಟಿಯಾನೊ ರೊನಾಲ್ಡೊ ಇದು ಯಾವುದೇ ಪೋಷಕರೂ ಕೂಡ ಎದುರಿಸಲಾಗದಂಥ ದೊಡ್ಡ ನೋವು ಎಂದು ಬರೆದುಕೊಂಡಿದ್ದಾರೆ. ಹಾಗೂ ಹೆಣ್ಣು ಮಗು ಜನಿಸಿರುವುದು ತುಸು ಭರವಸೆ ಮತ್ತು ಸಂತಸದಿಂದ ಬದುಕುವ ಶಕ್ತಿಯನ್ನು ನೀಡಿದೆ ಎಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಇಂತಹ ಸಮಯದಲ್ಲಿ ಆಸರೆಯಾದ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಇನ್ನು ತಮ್ಮ ಮಗುವಿನ ನಿಧನದಿಂದ ದುಃಖಕ್ಕೀಡಾಗಿರುವ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಜಾರ್ಜಿನಾ ರೋರ್ಡ್ರಿಗಸ್ ಈ ವಿಷಯದ ಕುರಿತು ಗೌಪತ್ಯೆಯನ್ನು ಬಯಸಿದ್ದಾರೆ ಹಾಗೂ ತಮ್ಮ ಹೆಣ್ಣು ಮಗುವನ್ನು ದೇವತೆ ಎಂದಿದ್ದು, ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

Story first published: Tuesday, April 19, 2022, 10:07 [IST]
Other articles published on Apr 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+