ಅಲ್-ನಾಸ್ರ್ ಫುಟ್ಬಾಲ್ ಕ್ಲಬ್ ಜೊತೆ ಒಪ್ಪಂದ: ಎರಡು ವರ್ಷಕ್ಕೆ 1700 ಕೋಟಿ ರುಪಾಯಿ ಪಡೆಯಲಿದ್ದಾರೆ ರೊನಾಲ್ಡೊ

ಕ್ರಿಸ್ಟಿಯಾನೋ ರೊನಾಲ್ಡೊ ಸೌದಿ ಅರೇಬಿಯಾದ ಅಲ್-ನಾಸ್ರ್ ಫುಟ್ಬಾಲ್ ಕ್ಲಬ್ ಜೊತೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಹಲವು ದಿನಗಳ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
37 ವರ್ಷದ ರೊನಾಲ್ಡೊ ಮುಂದಿನ ಎರಡು ವರ್ಷಗಳ ಕಾಲ ಅಲ್-ನಾಸ್ರ್ ಪರವಾಗಿ ಆಡಲಿದ್ದಾರೆ. ಡಿಸೆಂಬರ್ 30ರಂದು ಈ ಒಪ್ಪಂದ ಅಧಿಕೃತವಾಗಿದ್ದು, ರೊನಾಲ್ಡೊ 2 ವರ್ಷಗಳ ಕಾಲ ಅಲ್ ನಾಸ್ರ್ ಪರವಾಗಿ ಆಡಲು, ಬರೋಬ್ಬರಿ 200 ಮಿಲಿಯನ್ ಯೂರೋ (ಸುಮಾರು 1700 ಕೋಟಿ ರುಪಾಯಿ) ಪಡೆಯಲಿದ್ದಾರೆ.
ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಮುನ್ನ ನವೆಂಬರ್‌ನಲ್ಲಿ ಪಿಯರ್ಸ್ ಮೋರ್ಗಾನ್ ಅವರೊಂದಿಗಿನ ಸಂದರ್ಶನದ ವೇಳೆ ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಜಿ ಮ್ಯಾನೇಜರ್ ರಾಲ್ಫ್ ರಾಂಗ್ನಿಕ್ ವಿರುದ್ಧ ಟೀಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಮ್ಯಾಂಚೆಸ್ಟರ್ ಯುನೈಟೆಡ್ ರೊನಾಲ್ಡೊರನ್ನು ಮ್ಯಾಂಚೆಸ್ಟರ್ ಯುನೈಟೆಡ್ ಒಪ್ಪಂದವನ್ನು ಏಕಾಏಕಿ ಕೊನೆಗೊಳಿಸಿತು.
ಮ್ಯಾಂಚೆಸ್ಟರ್ ಯುನೈಟೆಡ್ ಪ್ರಸ್ತುತ ಮ್ಯಾನೇಜರ್ ಎರಿಕ್ ಟೆನ್ ಹ್ಯಾಗ್, ಮಾಜಿ ಸಹೋದ್ಯೋಗಿಗಳಾದ ಗ್ಯಾರಿ ನೆವಿಲ್ಲೆ ಮತ್ತು ವೇಯ್ನ್ ರೂನಿ, ಹಾಗೆಯೇ ಟಿವಿ ಹೋಸ್ಟ್‌ನೊಂದಿಗಿನ ಸಂಭಾಷಣೆಯ ಸಮಯದಲ್ಲಿ ಮಾಜಿ ಮ್ಯಾನೇಜರ್ ರಾಲ್ಫ್ ರಾಂಗ್ನಿಕ್ ವಿರುದ್ಧ ರೊನಾಲ್ಡೊ ವಾಗ್ದಾಳಿ ನಡೆಸಿದ್ದರು.

7 ವರ್ಷಗಳ ಒಪ್ಪಂದ
ಸ್ಪ್ಯಾನಿಷ್ ವರದಿಗಳ ಪ್ರಕಾರ, ರೊನಾಲ್ಡೊ ಅಕ್ ನಾಸ್ರ್ ಜೊತೆ 7 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದಾರೆ. ಮೊದಲ 2.5 ವರ್ಷಗಳ ಕಾಲ ಕ್ಲಬ್ ಪರವಾಗಿ ಆಡಲಿದ್ದು, ನಂತರ ರಾಯಬಾರಿಯಾಗಿ ಮುಂದುವರೆಯಲಿದ್ದಾರೆ. ಮುಂದಿನ ದಿನಗಳಲ್ಲಿ ರೊನಾಲ್ಡೊ ಇನ್ನೂ ಹೆಚ್ಚಿನ ಹಣವನ್ನು ಪಡೆಯುವ ಸಾಧ್ಯತೆ ಇದೆ.
ಚಾಂಪಿಯನ್ಸ್ ಲೀಗ್‌ನಲ್ಲಿ ಸ್ಪರ್ಧಿಸುವ ಕ್ಲಬ್‌ಗೆ ಸೇರುವ ಅವರ ಆಸೆ ಚಿರಪರಿಚಿತವಾಗಿತ್ತು, ಅಲ್-ನಾಸ್ರ್ ಸೌದಿ ಅರೇಬಿಯಾದ ಅತ್ಯಂತ ಶ್ರೀಮಂತ ಕ್ಲಬ್‌ಗಳಲ್ಲಿ ಒಂದಾಗಿದೆ ಮತ್ತು ಒಂಬತ್ತು ಬಾರಿ ಚಾಂಪಿಯನ್ ಆಗಿದೆ. 2019ರಲ್ಲಿ ಅವರು ಕೊನೆಯದಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು.
ಅಲ್-ನಾಸ್ರ್‌ಗೆ ಸೇರುವ ಮೊದಲು ಕ್ರಿಸ್ಟಿಯಾನೋ ರೊನಾಲ್ಡೊ ಚೆಲ್ಸಿಯಾ, ಅಟ್ಲೆಟಿಕೊ ಮ್ಯಾಡ್ರಿಡ್‌ನಂತಹ ಕ್ಲಬ್‌ಗಳೊಂದಿಗೆ ಸಂಪರ್ಕ ಹೊಂದಿದ್ದರು. ಆದರೆ ಅಂತಿಮವಾಗಿ ಸೌದಿ ಅರೇಬಿಯಾದ ಶ್ರೀಮಂತ ಕ್ಲಬ್ ಸೇರಿಕೊಂಡಿದ್ದಾರೆ.
ಪೋರ್ಚುಗಲ್‌ಗೆ ವಿಶ್ವಕಪ್ ಗೆದ್ದುಕೊಡುವ ಉತ್ಸಾಹದಿಂದಲೇ ರೊನಾಲ್ಡೊ ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ 2022ರಲ್ಲಿ ಭಾಗವಹಿಸಿದ್ದರು. ಆದರೆ, ಕ್ಪಾರ್ಟರ್ ಫೈನಲ್ ಸುತ್ತಿನಲ್ಲಿ ಮೊರೊಕ್ಕೊ ವಿರುದ್ಧ ಸೋಲನುಭವಿಸುವ ಮೂಲಕ ಅವರ ವಿಶ್ವಕಪ್ ಗೆಲ್ಲುವ ಕನಸು ನನಸಾಗಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications