ಮತ್ತೆ ಮ್ಯಾನ್ಚೆಸ್ಟರ್ ಯುನೈಟೆಡ್‌ಗೆ ಮರಳಿದ ಕ್ರಿಸ್ಚಿಯಾನೊ ರೊನಾಲ್ಡೋ

ಲಂಡನ್: ಪೋರ್ಚುಗಲ್ ಫುಟ್ಬಾಲ್ ಸ್ಟಾರ್ ಕ್ರಿಸ್ಚಿಯಾನೊ ರೊನಾಲ್ಟೋ ಮ್ಯಾನ್ಚೆಸ್ಟರ್ ಯುನೈಟೆಡ್‌ಗೆ ವಾಪಸ್ಸಾಗಿದ್ದಾರೆ. ಮಂಗಳವಾರ (ಆಗಸ್ಟ್ 31) ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಒಪ್ಪಂದದ ಪ್ರಕ್ರಿಯೆಯಲ್ಲಿ ರೊನಾಲ್ಡೋ ಪಾಲ್ಗೊಂಡಿದ್ದಾರೆ. ಇಟಲಿ ಮೂಲದ ಯುವೆಂಟಸ್ ಕ್ಲಬ್‌ನಿಂದ ರೊನಾಲ್ಡೋ ಇಂಗ್ಲೆಂಡ್ ಕ್ಲಬ್ ಮ್ಯಾನ್ಚೆಸ್ಟರ್ ಯುನೈಟೆಡ್‌ಗೆ ಸೇರಿಕೊಂಡಿದ್ದಾರೆ.
ಐದು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿ ಗೆದ್ದಿರುವ ಕ್ರಿಸ್ಚಿಯಾನೊ ರೊನಾಲ್ಡೋ 6 ವರ್ಷಗಳ ಕಾಲ ಮ್ಯಾನ್ಚೆಸ್ಟರ್ ಯುನೈಟೆಡ್ ತಂಡದಲ್ಲೇ ಇದ್ದರು. 2003ರಿಂದ 2009ರ ವರೆಗೆ ಕ್ರಿಸ್ಚಿಯಾನೊ ಯುನೈಟೆಡ್‌ನಲ್ಲಿದ್ದು ಆ ಬಳಿಕ ರಿಯಲ್ ಮ್ಯಾಡ್ರಿಡ್ ತಂಡ ಸೇರಿಕೊಂಡಿದ್ದರು.
36ರ ಹರೆಯದ ರೊನಾಲ್ಡೋ ಯುನೈಟೆಡ್ ತಂಡದಲ್ಲಿ ಮೊದಲು ಇದ್ದಾಗ 292 ಪಂದ್ಯಗಳಲ್ಲಿ 118 ಗೋಲ್‌ಗಳನ್ನು ಬಾರಿಸಿದ್ದರು. ಅಲ್ಲದೆ ಇದೇ ವೇಳೆ ರೊನಾಲ್ಟೋ ತನ್ನ ಮೊದಲ ಬ್ಯಾಲನ್ ಡಿ'ಓರ್, ಚಾಂಪಿಯನ್ಸ್ ಲೀಗ್, ಮೂರು ಬಾರಿ ಪ್ರೀಮಿಯರ್ ಲೀಗ್, ಒಂದು ಎಫ್‌ಎ ಕಪ್, ಮೂರು ಲೀಗ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದರು.
"ಮ್ಯಾನ್ಚೆಸ್ಟರ ಯುನೈಟೆಡ್ ತಂಡಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಶುಕ್ರವಾರ (ಆಗಸ್ಟ್ 27) ಮಾನ್ಚೆಸ್ಟರ್ ಸೇರುವುದನ್ನು ಘೋಷಿಸುತ್ತಲೇ ನನಗೆ ಸಾವಿರಾರೂ ಖುಷಿಯ ಮೆಸೇಜ್‌ಗಳು ಬಂದಿದ್ದವು ಇದಕ್ಕೂ ನಾನು ಖುಷಿಗೊಂಡಿದ್ದೇನೆ. ಎಲ್ಲಾ ಅಭಿಮಾನಿಗಳ ಎದುರು ತುಂಬಿದ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಆಡಲು ನಾನು ಕಾತರನಾಗಿದ್ದೇನೆ," ಎಂದು ರೊನಾಲ್ಡೋ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications