Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Curaçao: ವಿಶ್ವಕಪ್‌ನ ಹ್ಯಾಪಿಯೆಸ್ಟ್ ಟೀಮ್ ಕ್ಯುರಾಸಾವೊ; ಆಟಗಾರರ ನೆಮ್ಮದಿಗೆ ಪತ್ನಿಯರೇ ಶಕ್ತಿ

ಕೆರಿಬಿಯನ್ ಸಮುದ್ರದಲ್ಲಿರುವ ಡಚ್ ಕೆರಿಬಿಯನ್ ದ್ವೀಪ ಕ್ಯುರಾಸಾವೊ. ಈ ದೇಶ ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ. ಆದರೆ ಈ ತಂಡದ ಆಟಗಾರರಿಗೆ ಇದು ಒಂದು ಸಮಸ್ಯೆ ಆಗಿಯೇ ಇಲ್ಲ. ವೆನೆಜುವೆಲಾದ ಕರಾವಳಿಯ ಉತ್ತರದಲ್ಲಿರುವ ಕ್ಯುರಾಸಾವೊ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್‌ನಲ್ಲಿ ಆಡುವ ಅರ್ಹತೆ ಪಡೆದಿದ್ದು, ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗುತ್ತಿದೆ.

ಕ್ಯುರಾಸಾವೊ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ 'ಇ' ಗುಂಪಿನಲ್ಲಿ ಸ್ಥಾನ ಪಡೆದಿದೆ. ಆಡಿರುವ 2 ಪಂದ್ಯಗಳಲ್ಲಿ 1 ಡ್ರಾ, 1 ಸೋಲು ಕಂಡಿರುವ ಕ್ಯುರಾಸಾವೊ ಇ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.

Cura ao

ಆಧುನಿಕ ಫುಟ್ಬಾಲ್‌ ತಂಡಗಳು ಸಾಮಾನ್ಯವಾಗಿ ಬಯೋಬಲ್ ನಿರ್ಮಿಸಿಕೊಂಡು ಬೇರೆಯವರಿಂದ ದೂರ ಇರುತ್ತವೆ. ಆದರೆ ಕ್ಯುರಾಸಾವೊ ತಂಡ ಬೇರೆ ತಂಡಗಳಿಗಿಂತ ಭಿನ್ನವಾಗಿದೆ. ಸಾಮಾನ್ಯವಾಗಿ ಫಿಫಾ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು ಆಟಗಾರರು ಹಾಗೂ ಸಿಬ್ಬಂದಿಗಳಿಗೆ ಮಾತ್ರ ತಾವು ತಂಗುವ ಹೋಟೆಲ್‌ಗಳಲ್ಲಿ ಇರಲು ಅವಕಾಶ ನೀಡುತ್ತವೆ. ಆದರೆ ಕ್ಯುರಾಸಾವೊ ತಂಡ ಇದಕ್ಕೆ ವಿರುದ್ಧವಾಗಿದೆ.

ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಕುಟುಂಬಗಳನ್ನು ತಂಡದ ಹೋಟೆಲ್‌ನಿಂದ ದೂರವಿಡಲಾಗಿದೆ. ಆದರೆ ಇಂಗ್ಲೆಂಡ್ ತಂಡವು ಪಂದ್ಯಾವಳಿಯ ಉದ್ದಕ್ಕೂ ತಮ್ಮ ಕುಟುಂಬಸ್ಥರನ್ನು ನೋಡಲು ಸಾಧ್ಯವಿದೆ. ಆದರೆ ರಾತ್ರಿ ಆಟಗಾರರೊಂದಿಗೆ ತಂಗುವಿಕೆಗೆ ಅವಕಾಶ ನಿರಾಕರಿಸಲಾಗಿದೆ.

ಪತ್ನಿಯರೇ ಶಕ್ತಿ

ಕ್ಯುರಾಸಾವೊ ತಂಡದ ವೈದ್ಯೆ ಸುಜೇನ್ ಹುರ್ಮನ್ ಕುಟುಂಬಸ್ಥರಿಂದ ದೂರ ಇರುವ ಪ್ರವೃತ್ತಿಯನ್ನು ಬದಲಾಯಿಸಿದ್ದಾರೆ. ಕ್ಯುರಾಸಾವೊ ತಂಡದ ಆಟಗಾರರು ತಮ್ಮ ಪತ್ನಿಯೊಂದಿಗೆ ದೈಹಿಕ ಸಂಪರ್ಕವನ್ನು ಹೊಂದಿದ್ದಾರೆ. ಇದು ಪಂದ್ಯದ ಮೇಲೆ ಅವರು ಚಿತ್ತ ಹರಿಸಲು ನೆರವಾಗುತ್ತದೆ ಎಂದು ವೈದ್ಯೆ ಸುಜೇನ್ ತಿಳಿಸಿದ್ದಾರೆ.

ಫುಟ್ಬಾಲ್‌ ತಂಡ ಈ ರೀತಿ ಬದಲಾವಣೆ ತಂದಿರುವುದು ವಿಶಿಷ್ಠ ವಿಷಯ. ದೈಹಿಕ ಸಂಬಂಧವು ಆಟಗಾರರನ್ನು ಹೆಚ್ಚು ಉತ್ಸಾಹದಿಂದ ಇಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಕ್ಯುರಾಸಾವೊ ಆಟಗಾರರು ವಿಶ್ವದ ಅತ್ಯುನ್ನತ ಲೀಗ್‌ಗಳಲ್ಲಿ ಆಡದ ಕಾರಣ, ಅವರ ಕುಟುಂಬಗಳಿಗೆ ಅಮೆರಿಕ ಪ್ರವಾಸದ ವೆಚ್ಚ ಭರಿಸುವುದು ಕಷ್ಟವಾಗಿತ್ತು. ಆಟಗಾರರ ಮಾನಸಿಕ ನೆಮ್ಮದಿಗಾಗಿ ಫೆಡರೇಶನ್ ಸ್ವತಃ ಹಣ ಖರ್ಚು ಮಾಡಿ ಆಟಗಾರರ ಪತ್ನಿ ಮತ್ತು ಮಕ್ಕಳನ್ನು ಅಮೆರಿಕಕ್ಕೆ ಕರೆತಂದಿದೆ. ಶ್ರೀಮಂತ ಫುಟ್‌ಬಾಲ್ ತಾರೆಗಳು ಐಷಾರಾಮಿ ಬಸ್‌ಗಳು ಹಾಗೂ ಖಾಸಗಿ ಜೆಟ್‌ಗಳಲ್ಲಿ ಪ್ರಯಾಣಿಸುತ್ತಿದ್ದರೆ, ಕ್ಯುರಾಸಾವೊ ಆಟಗಾರರು ಕಿಟಕಿಗಳಿಲ್ಲದ ಹಳೆಯ ಬಸ್‌ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು.

Story first published: Tuesday, June 23, 2026, 21:25 [IST]
Other articles published on Jun 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+