ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ ಮಿಂಚಲಿದ್ದಾರೆ ರೊನಾಲ್ಡೋ

ಮ್ಯಾಡ್ರಿಡ್, ಮೇ 8: ಕಳೆದ ವಾರದಿಂದೀಚೆಗೆ ಬಲಗಾಲಿನ ಮಣಿಕಟ್ಟು ನೋವಿನಿಂದ ನರಳುತ್ತಿರುವ ರಿಯಲ್ ಮ್ಯಾಡ್ರಿಡ್ ನ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೋ ಅವರು ಈ ತಿಂಗಳಾಂತ್ಯದಲ್ಲಿ ಲಿವರ್ ಪೂಲ್ ವಿರುದ್ಧ ನಡೆಯಲಿರುವ ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಭಾನುವಾರ ಎಲ್ ಕ್ಲಾಸಿನೋ ದಲ್ಲಿ ಬಾರ್ಸಿಲೊನಾ ವಿರುದ್ಧದ ಪಂದ್ಯದಲ್ಲಿ ರಿಯಲ್ ಮ್ಯಾಡ್ರಿಡ್ ಮೊದಲ ಗೋಲು ಬಾರಿಸುವ ವೇಳೆ ಪೋರ್ಚುಗಲ್ ಫುಟ್ಬಾಲ್ ಆಟಗಾರ ರೊನಾಲ್ಡೋ ಅವರ ಗಾಯ ಜೋರಾಯಿತು.
ರೊನಾಲ್ಡೋ ತೀವ್ರ ಗಾಯಕ್ಕೀಡಾಗಿದ್ದರಿಂದ ರಿಯಲ್ ಮ್ಯಾಡ್ರಿಡ್ ತಂಡದಿಂದ ರೋನಾಲ್ಡೋ ಅವರನ್ನು ಬದಲಿಸಿ ಬೇರೆ ಆಟಗಾರರನ್ನು ಸೇರಿಸಿಕೊಳ್ಳಲಾಗಿತ್ತು. ಈ ಪಂದ್ಯದಲ್ಲಿ ಬಾರ್ಸಿಲೋನಾ ಮತ್ತು ರಿಯಲ್ ಮ್ಯಾಡ್ರಿಡ್ ಎರಡೂ ತಂಡಗಳೂ 2-2ರ ಸಮಬಲ ಸಾಧಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡವು.
ರೊನಾಲ್ಡೋ ಪಾಲ್ಗೊಳ್ಳುವಿಕೆ ಬಗ್ಗೆ ಮಾಹಿತಿ ನೀಡಿರುವ ಕ್ಲಬ್ ಉನ್ನತ ಮೂಲ, ಬುಧವಾರ ಸೆವಿಲ್ಲಾ ವಿರುದ್ಧದ ಲಾ ಲಿಗಾ ಪಂದ್ಯಾಟದಲ್ಲೂ ರೊನಾಲ್ಡೋ ಪಾಲ್ಗೊಳ್ಳುತ್ತಿಲ್ಲ ಎಂಬ ವಿಚಾರವನ್ನು ತಿಳಿಸಿದೆ.
ಆದರೆ ಅವರು ಗಾಯದಿಂದ ಸುಧಾರಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದು ಕೀವ್ ನಲ್ಲಿ ಮೇ 26ರಂದು ನಡೆಯಲಿರುವ ಚಾಂಪಿಯನ್ಸ್ ಫೈನಲ್ ವೇಳೆಗೆ ಫಿಟ್ ಆಗಲಿದ್ದಾರೆ ಎಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications