ಫುಟ್ಬಾಲ್ ಸಹಾಯಾರ್ಥ ಪಂದ್ಯದಲ್ಲಿ ಮೆರಡೋನಾ, ಗಂಗೂಲಿ!
ಕೋಲ್ಕತಾ, ಆಗಸ್ಟ್ 15: 'ಮ್ಯಾಚ್ ಆಫ್ ಯೂನಿಟಿ' ಹೆಸರಿನಲ್ಲಿ ಅಕ್ಟೋಬರ್ 2ರಿಂದ 4ರವರೆಗೆ ನಡೆಯಲಿರುವ ಸಹಾಯಾರ್ಥಪಂದ್ಯಗಳಲ್ಲಿ ವಿಶ್ವ ವಿಖ್ಯಾತ ಮಾಜಿ ಫುಟ್ಬಾಲ್ ಆಟಗಾರ. 1986 ವಿಶ್ವಕಪ್ ಪಂದ್ಯಾವಳಿಯ ಸೂಪರ್ ಸ್ಟಾರ್ ಡಿಗೊ ಮೆರಡೋನಾ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಟೂರ್ನಿಯ ಆಯೋಜಕರು ತಿಳಿಸಿದ್ದಾರೆ.
ಈ ಟೂರ್ನಿಯ ಎಲ್ಲಾ ಪಂದ್ಯಗಳು ಬರಾಸತ್ ನ ಆದಿತ್ಯ ಸ್ಕೂಲ್ ಆಫ್ ಸ್ಪೋರ್ಟ್ಸ್ ನ ಮೈದಾನದಲ್ಲಿ ನಡೆಯಲಿವೆ. ಈ ಪಂದ್ಯಗಳಲ್ಲಿ, ಗಂಗೂಲಿ, ಮೆರಡೋನಾ ಮಾತ್ರವಲ್ಲ, ಹಾಲಿ ಕ್ರಿಕೆಟಿಗರಾದ ಮನೋಜ್ ತಿವಾರಿ, ದೀಪ್ ದಾಸ್ ಗುಪ್ತಾ ಸಹ ಪಾಲ್ಗೊಳ್ಳಲಿದ್ದಾರೆಂದು ಹೇಳಲಾಗಿದೆ.

ಈ ಪಂದ್ಯಗಳಲ್ಲಿ ಭಾರತದ ಹಳೆಯ ಹಾಗೂ ಪ್ರತಿಷ್ಠಿತ ಫುಟ್ಬಾಲ್ ತಂಡವಾದ ಮೋಹನ್ ಬಗಾನ್ ನ ಫಾರ್ವಾರ್ಡ್ ಆಟಗಾರ ಸೋನಿ ನಾರ್ಡೆ, ಇದೇ ತಂಡದ ಮಾಜಿ ಆಟಗಾರ ಚಿಮಾ ಒಕೊರಿ, ಜೋಸ್ ರಮೆರೆಜ್ ಬ್ಯಾಟೆರೊ ಹಾಗೂ ಒಡಾಫಾ ಒಕೋಲಿ ಕೂಡಾ ಆಡಲಿದ್ದಾರೆಂದು ಆಯೋಜಕರು ತಿಳಿಸಿದ್ದಾರೆ.
ಡಿಗೋ ಮರಡೋನಾ ಹಾಗೂ ಗಂಗೂಲಿ ನೇತೃತ್ವದ ತಂಡಗಳು ಅಕ್ಟೋಬರ್ 2ರಂದು ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications