ಮರಡೋನಾ ಯಾವತ್ತಿಗೂ ಶಾಶ್ವತ: ದಿಗ್ಗಜನ ಅಗಲಿಕೆಗೆ ಮೆಸ್ಸಿ ಸಂತಾಪ

ಫುಟ್ಬಾಲ್ ದಿಗ್ಗಜ ಮರಡೋನಾ ಅಗಲಿಕೆಗೆ ವಿಶ್ವದೆಲ್ಲೆಡೆ ಶೋಕ ವ್ಯಕ್ತವಾಗುತ್ತಿದೆ. ಮರಡೋನಾ ದೇಶದವರೇ ಆದ ಸದ್ಯ ವಿಶ್ವ ಫುಟ್ಬಾಲ್‌ನಲ್ಲಿ ಮಿಂಚುಹರಿಸುತ್ತಿರುವ ಲಿಯೋನೆಲ್ ಮೆಸ್ಸಿ ಕೂಡ ದಿಗ್ಗಜನ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. ಮರಡೋನಾ ಯಾವತ್ತಿಗೂ ಶಾಶ್ವತವಾಗಿ ನಮ್ಮೊಂದಿಗೆ ಇರುತ್ತಾರೆ ಎಂದು ಮೆಸ್ಸಿ ಹೇಳಿದ್ದಾರೆ.
ಮರಡೋನಾ ಅರ್ಜೆಂಟೈನಾ ತಂಡದ ಮಾಜಿ ಕೋಚ್ ಕೂಡ ಆಗಿದ್ದಾರೆ. ಲಿಯೋನೆಲ್ ಮೆಸ್ಸಿ ಮರಡೋನಾ ಅವರ ಗರಡಿಯಲ್ಲಿ ಪಳಗಿದ ಆಟಗಾರನಾಗಿದ್ದಾರೆ. ಮರಡೋನ ಸಾವಿಗೆ ಪ್ರತಿಕ್ರಿಯಿಸಿದ ಮೆಸ್ಸಿ ಸುಂದರವಾದ ಆಟದ ಬೇಸರದ ದಿನ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್‌ನಲ್ಲಿ ಮೆಸ್ಸಿ ಮರಡೋನಾ ಜೊತೆಗಿನ ಫೋಟೀವನ್ನು ಹಂಚಿಕೊಂಡು ಶೋಕವನ್ನು ವ್ಯಕ್ತಪಡಿಸಿದ್ದಾರೆ. "ಎಲ್ಲಾ ಅರ್ಜೆಂಟೈ ನಾದವರಿಗೆ ಹಾಗೂ ಫುಟ್ಬಾಲ್ ಪ್ರೇಮಿಗಳಿಗೆ ಇದು ಶೋಕದ ದಿನ. ಆತ ನಮ್ಮನ್ನು ಬಿಟ್ಟು ಹೋಗುತ್ತಾನೆ ಆದರೆ ನಾವು ಆತನನ್ನು ಬಿಡಲಾರೆವು. ಯಾಕೆಂದರೆ ಡಿಯಾಗೋ ಶಾಶ್ವತ" ಎಂದು ಮೆಸ್ಸಿ ಸಂದೇಶದಲ್ಲಿ ಹೇಳಿದ್ದಾರೆ.
"ನಾನು ಅವರೊಂದಿಗೆ ಕಳೆದ ಎಲ್ಲಾ ಸುಂದರ ಕ್ಷಣಗಳನ್ನು ಸ್ಮರಣೆಯಲ್ಲಿಟ್ಟುಕೊಂಡಿದ್ದೇನೆ. ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಸಂತಾಪವನ್ನು ಸೂಚಿಸಲು ನಾನು ಬಯಸುತ್ತೇನೆ. ಅವರ ಆತ್ಮ ಶಾಂತಿಯನ್ನು ಹೊಂದಲಿ" ಎಂದು ಲಿಯೋನೆಲ್ ಮೆಸ್ಸಿ ಬರೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications